ಬೇಸಿಗೆ ಪ್ರಾರಂಭವಾದ ನಂತರ, ಸಸ್ಯಗಳ ಪೋಷಣೆ ಮಾಡುವುದು ಅತ್ಯಂತ ಕಠಿಣ ಕೆಲಸವಾಗುತ್ತದೆ, ಏಕೆಂದರೆ ವಾತಾವರಣದಲ್ಲಿ ತಾಪಮಾನ ಹೆಚ್ಚಾಗಿರುವುದರಿಂದ ಎಲ್ಲಾ ಎಲ್ಲಾ ಕಡೆ ಬಿಸಿಲಿನ ದಗೆ ಹೆಚ್ಚಾಗುತ್ತದೆ ಹಾಗೂ ಬಿಸಿಲಿನ ತಾಪಮಾನದಿಂದ ಗಿಡಗಳು ಸೊರಗಲು ಆರಂಭಿಸುತ್ತವೆ ಈ ಸಂದರ್ಭದಲ್ಲಿ ಮನೆಯ ಹಿತ್ತಲಲ್ಲಿ, ತಾರಸಿಯಲ್ಲಿ ಹಾಗೂ ಪಾಟುಗಳಲ್ಲಿ ಬೆಳೆಸಿದ ಗಿಡಗಳು ಅಷ್ಟೇ ಅಲ್ಲದೆ ಕೃಷಿ ಭೂಮಿಯಲ್ಲಿ ಕೂಡ ಬಹಳ ಬಿಸಿಲಿನಿಂದ ಬಳಲಲು ಪ್ರಾರಂಭಿಸುತ್ತವೆ, ಈ ಸಂದರ್ಭದಲ್ಲಿ ಅತ್ಯಗತ್ಯ ಕ್ರಮಗಳು ಕೈಗೊಳ್ಳಬೇಕಾಗುತ್ತದೆ.

ಬಿಸಿಲಿನ ದಗೆಯಿಂದ ಹೇಗೆ ರಕ್ಷಿಸಬಹುದು ಎಂಬ ಮಾರ್ಗೋಪಾಯಗಳನ್ನು ತಜ್ಞರ ಮೂಲಕ ತಿಳಿದುಕೊಂಡು ಆ ರೀತಿ ಕ್ರಮ ಅನುಸರಿಸಬೇಕಾಗುತ್ತದೆ, ಆದಷ್ಟು ನೆರಳು ಇರುವಂತೆ ನೆರಳಿನ ವ್ಯವಸ್ಥೆ ಮಾಡಬೇಕಾಗುತ್ತದೆ, ಮನೆಯಲ್ಲಿ ಬೆಳೆದ ಗಿಡಗಳಿಗೆ ಆದಷ್ಟು ಎಚ್ಚರಿಕೆ ವಹಿಸಬಹುದು ಆದರೆ ಕೃಷಿ ಚಟುವಟಿಕೆಯಲ್ಲಿ ಬೇಸಿಗೆ ಅನುಕೂಲವಾಗಿರುವಂತಹ ಬೆಳೆಗಳನ್ನು ಬೆಳೆಯಬೇಕಾಗುತ್ತದೆ ಬೇಸಿಗೆಯಲ್ಲಿ ಎಲ್ಲ ಬೆಳೆಗಳು ಸೂಕ್ತವಾಗಿರುವುದಿಲ್ಲ ಅದನ್ನು ಸರಿಯಾಗಿ ತಿಳಿದುಕೊಂಡು ಕೃಷಿ ಚಟುವಟಿಕೆ ಮಾಡಬೇಕಾಗುತ್ತದೆ, ಬೇಸಿಗೆ ಕಾಲದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಲು ಬೆಳಗಿನ ಜಾವದಲ್ಲಿ ಸೂಕ್ತ ಸಮಯವಾಗಿರುತ್ತದೆ ಆಗ ಇನ್ನು ಬಿಸಿಲು ಇರುವುದಕ್ಕೆ ಮುಂಚೆಯೇ ಕಾರ್ಯ ಚಟುವಟಿಕೆಗಳು ಮುಗಿಸಿಕೊಂಡರೆ ಒಳ್ಳೆಯದು ಇಲ್ಲದಿದ್ದರೆ ಬಿಸಿಲಿನಿಂದ ಹಲವಾರು ತೊಂದರೆ ಕೊಡಬೇಕಾಗುತ್ತದೆ.
ಮನೆಯಲ್ಲಿ ಬೆಳೆಸುವಂತಹ ಸಸ್ಯಗಳಿಗೆ ಆದಷ್ಟು ನೆರಳಿಗಾಗಿ ಪರದೆಗಳನ್ನು ಕಟ್ಟಬೇಕಾಗುತ್ತದೆ ಸೂಕ್ತ ರೀತಿಯ ನೀರಿನ ನಿರ್ವಹಣೆ ಕೂಡ ಮಾಡಬೇಕಾಗುತ್ತದೆ, ಅತಿಯಾದ ಬಿಸಿಲಿನ ಸಮಯದಲ್ಲಿ ಗಿಡಕ್ಕೆ ನೀರು ಹಾಕುವುದಕ್ಕಿಂತ ಮುಂಜಾನೆಯಲ್ಲಿ ಅಥವಾ ಸಂಜೆಯ ವೇಳೆ ಹಾಕಿದರೆ ಗಿಡಗಳಿಗೆ ಒಳ್ಳೆ ಉಪಯೋಗ ದೊರೆಯುತ್ತದೆ ಹಾಗೆಯೇ ಗಿಡಗಳು ಒಣಗುವುದನ್ನು ಕೂಡ ತಡೆಯಬಹುದಾಗಿದೆ, ಅಷ್ಟೇ ಅಲ್ಲದೆ ಮನೆಯಲ್ಲಿ ದಿನನಿತ್ಯ ಬಳಸಿದ ನೀರು ಎಂದರೆ ತರಕಾರಿ ತೊಳೆದ ನೀರು, ಅಕ್ಕಿ ಬೇಳೆ ತೊಳೆದ ನೀರು ಮುಂತಾದವಗಳು ಈ ಗಿಡಗಳಿಗೆ ಹಾಕಲು ಬಳಸಿದರೆ ಒಳ್ಳೆಯದು, ಇದರಿಂದ ಗಿಡಗಳ ಪೋಷಕಾಂಶ ಕೂಡ ಹೆಚ್ಚಾಗುತ್ತದೆ ದಿನನಿತ್ಯ ಮನೆಯಲ್ಲಿ ಬಳಸುವ ನೀರನ್ನು ಮರುಬಳಕೆ ಮಾಡಿಕೊಂಡರೆ ನೀರಿನ ಉಳಿತಾಯ ಕೂಡ ಆಗುತ್ತದೆ, ಬೇಸಿಗೆ ಕಾಲದಲ್ಲಿ ಆದಷ್ಟು ನೀರಿನ ಸಮಸ್ಯೆ ಇರುವುದರಿಂದ ಅದನ್ನು ಎಚ್ಚರಿಕೆಯಿಂದ ಬಳಸುವುದು ಒಳ್ಳೆಯದು.

ಹೂವಿನ ಕುಂಡಗಳಲ್ಲಿ ಬೆಳೆದ ಗಿಡಗಳಲ್ಲಿ ಆಗಾಗ ಸ್ವಚ್ಛ ಮಾಡಬೇಕಾಗುತ್ತದೆ ಒಣಗಿದ ಎಲೆಗಳು ತೆಗೆದು ಅದನ್ನು ಕುಂಡಗಳಲ್ಲೇ ಹಾಕಿದರೆ ಅದರಿಂದ ಕುಂಡದಲ್ಲಿರುವ ಮಣ್ಣಿಗೆ ಸಹಾಯಕವಾಗಿ ಇರುತ್ತದೆ ಅಷ್ಟು ಬೇಗ ಒಣಗಲು ಬಿಡುವುದಿಲ್ಲ, ಇದರಿಂದ ಕುಂಡಗಳಲ್ಲಿ ಮಣ್ಣು ಬೇಗ ಒಣಗುವುದಿಲ್ಲ ಸಸ್ಯಗಳಿಗೆ ತೇವಾಂಶ ದೊರೆಯುತ್ತದೆ, ಆದಷ್ಟು ಮನೆಯಲ್ಲಿ ಸಸ್ಯಗಳ ಕಡೆ ಗಮನ ಕೊಟ್ಟು ಅದಕ್ಕೆ ಬೇಕಾದ ಆರೈಕೆ ಪೋಷಕಾಂಶಗಳನ್ನು ನೀಡುತ್ತಾ ಬಂದರೆ ಬೇಸಿಗೆಯಲ್ಲಿ ಉತ್ತಮ ರೀತಿಯಲ್ಲಿ ಗಿಡಗಳು ಬೆಳೆಯಲು ಸಹಾಯವಾಗುತ್ತದೆ, ಹೆಚ್ಚಿನ ತಾಪಮಾನದಿಂದ ಒಣಗುವುದನ್ನು ಕೂಡ ತಡೆಯಬಹುದಾಗಿದೆ ಇದಕ್ಕೆ ಹೆಚ್ಚಿನ ಮಾಹಿತಿಯನ್ನು ತಜ್ಞರ ಮೂಲಕ ಪಡೆದು ಆ ರೀತಿ ಕ್ರಮಗಳನ್ನು ಅನುಸರಿಸಿದರೆ ಉತ್ತಮರೀತಿಯಲ್ಲಿ ಬೇಸಿಗೆಯಲ್ಲಿ ಸಸ್ಯಗಳ ನಿರ್ವಹಣೆ ಮಾಡಬಹುದಾಗಿದೆ.