ಬೆಂಗಳೂರು: ರಾಜ್ಯದಲ್ಲಿ ಖಾಸಗಿಯಾಗಿ ಅನೇಕ ಫಿಟ್ ನೆಸ್ ಪರೀಕ್ಷಾ ಕೇಂದ್ರಗಳು ಇದ್ದಾವೆ. ಇವುಗಳ ನಡುವೆ ಈಗ ಬಿಎಂಟಿಸಿಯಿಂದಲೂ ತನ್ನ ವಾಹನಗಳ ಫಿಟ್ ನೆಸ್ ಪರೀಕ್ಷೆ ಮಾಡೋದಕ್ಕೆ ಹಾಗೂ ಖಾಸಗಿ ವಾಹನಗಳನ್ನು ಪರೀಕ್ಷೆ ಮಾಡಲು ಫಿಟ್ ನೆಸ್ ಕೇಂದ್ರವನ್ನು ಸ್ಥಾಪಿಸಲಿದೆ.
ಹೌದು ಬಿಎಂಟಿಸಿ ಬಸ್ ಸೇರಿದಂತೆ ಇತರೆ ವಾಹನಗಳ ಸದೃಢತೆಯನ್ನು ಪರೀಕ್ಷೆ ಮಾಡುವುದಕ್ಕಾಗಿ ಆಟೋ ಮ್ಯಾಟಿಕ್ ವಾಹನ ಪರೀಕ್ಷಾ ಕೇಂದ್ರ ಸ್ಥಾಪಿಸಲು ನಿಗಮವು ಮುಂದಾಗಿದೆ.
ಈ ಕೇಂದ್ರದಲ್ಲಿ ವಾಹನಗಳ ಸದೃಢತೆ ಪರೀಕ್ಷೆ, ವಾಹನ ಚಾಲನಾ ಪರವಾನಗಿ ನೀಡುವುದು ಸೇರಿದಂತೆ ಇನ್ನಿತರ ಕಾರ್ಯಗಳನ್ನು ಮ್ಯಾನುಯಲ್ ಬದಲು ಆಟೋಮ್ಯಾಟಿಕ್ ಅಂದರೆ ಸ್ವಯಂ ಚಾಲಿತವಾದಂತ ರೀತಿಯಲ್ಲಿ ಮಾಡಲಾಗುತದೆ. ಈ ಬಗ್ಗೆ ಈಗಾಗಲೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆದೇಶಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಆದೇಶದಂತೆ ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ಆಟೋ ಮ್ಯಾಟಿಕ್ ಪರೀಕ್ಷಾ ಪಥಗಳನ್ನು ಸ್ಥಾಪಿಸಲು ಮುಂದಾಗಿದೆ. ಅದರ ಜೊತೆ ಜೊತೆಗೆ ಈಗ ಬಿಎಂಟಿಸಿ ಕೂಡ ತನ್ನ ಬಸ್ ಸೇರಿದಂತೆ ಇತರ ವಾಹನಗಳ ಸದೃಢತೆ ಅಂದರೆ ಫಿಟ್ ನೆಸ್ ಪರೀಕ್ಷೆಗಾಗಿ ಪರೀಕ್ಷಾ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಿದೆ. ಈ ಕೇಂದ್ರ ನಿರ್ಮಾಣ, ನಿರ್ವಹಣೆಗಾಗಿ ಖಾಸಗಿ ಸಂಸ್ಥೆ ನೇಮಿಸಲು ಟೆಂಡರ್ ಪ್ರಕ್ರಿಯೆಗೂ ಚಾಲನೆಯನ್ನು ಬಿಎಂಟಿಸಿ ನೀಡಿದೆ.