ಬೆಂಗಳೂರು: ವಿಲ್ಸನ್ ಗಾರ್ಡನ್ ಬಳಿ ಭೀಕರ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಮೂರು ಮನೆಗಳು ಛಿದ್ರ, ಛಿದ್ರವಾಗಿದೆ. ಘಟನೆಯಲ್ಲಿ ಓರ್ವ ಬಾಲಕ ಸಾವನ್ನಪ್ಪಿದ್ದು, 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ನಿಗೂಢ ಸ್ಟೋಟಕ್ಕೆ ಮನೆಗಳು ಛಿದ್ರ
ಬೆಳ್ಳಂ ಬೆಳಗ್ಗೆ ಸಂಭವಿಸಿದ ನಿಗೂಢ ಸ್ಫೋಟದ ಸದ್ದಿಗೆ ವಿಲ್ಸನ್ ಗಾರ್ಡನ್ ಜನರು ಬೆಚ್ಚಿಬಿದ್ದಿದ್ದಾರೆ. ಮೂರು ಮನೆಗಳ ಮೇಲಿನ ಶೀಟ್ಗಳು ಹಾರಿದ್ದು, ಗೋಡೆಗಳು ಛಿದ್ರ, ಛಿದ್ರವಾಗಿದೆ. ಆಡುಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗ್ತಿದೆ.
ಭಾರೀ ಶಬ್ದಕ್ಕೆ ಬೆಚ್ಚಿಬಿದ್ದ ಜನ
ದೊಡ್ಡ ಮಟ್ಟದ ಶಬ್ದ ಕೇಳಿ ಬಂದಿದ್ದು, ಏನಾಗಿದೆಯೋ ಗೊತ್ತಿಲ್ಲ ಎಂದು ಸ್ಥಳೀಯರು ಹೇಳ್ತಿದ್ದಾರೆ. ವಠಾರವೇ ಪುಡಿ ಪುಡಿ ಯಾಗಿದೆ. ಲಾಲ್ ಬಾಗ್ ನಲ್ಲಿ ಸಾಕಷ್ಟು ಮಂದಿ ಬೆಳಗ್ಗೆಯೇ ಕೆಲಸಕ್ಕೆ ಹೋಗಿದ್ದಾರೆ. ಅವರು ಇದ್ದಿದ್ರೆ ದೊಡ್ಡ ಮಟ್ಟದ ಅನಾಹುತವಾಗ್ತಿತ್ತು ಎಂದು ಸ್ಥಳೀಯರು ಹೇಳ್ತಿದ್ದಾರೆ.
ಮಲಗಿದ್ದ ಬಾಲಕ ಸಾವು
ಮೇಲ್ನೋಟಕ್ಕೆ ಸಿಲಿಂಡರ್ ಸ್ಟೋಟ ಅಂತ ಪೊಲೀಸರು ಹೇಳ್ತಿದ್ದಾರೆ. ಈ ಸ್ಫೋಟದಲ್ಲಿ ಮಲಗಿದ್ದ ವೇಳೆಯೇ ಬಾಲಕ ಮುಬಾರಕ್ ಎಂಬಾತ ಪ್ರಾಣ ಬಿಟ್ಟಿದ್ದಾರೆ. ಹಾಸ್ಟೆಲ್ನಿಂದ ಮನೆಗೆ ಬಂದಿದ್ದ ತಮ್ಮ ಸಾವನ್ನಪ್ಪಿದ್ದಾನೆ ಎಂದು ಅಣ್ಣ ಹೇಳಿಕೊಂಡು ಕಣ್ಣೀರು ಹಾಕಿದ್ದಾನೆ.
ರಕ್ತದ ಮಡುವಿನಲ್ಲಿ ಒದ್ದಾಡ್ತಿರೋ ದೃಶ್ಯ
ಮನೆಗಳ ಗೋಡೆಗಳು ಜನರ ಮೇಲೆ ಬಿದ್ದಿದ್ದು, ಅವೇಶಷದಡಿ ಕೆಲವರು ಸಿಲುಕಿ ಒದ್ದಾಡಿದ್ದಾರೆ. ರಕ್ತದ ಮಡುವಿನಲ್ಲಿ ಒದ್ದಾಡ್ತಿದ್ದ ಮಹಿಳೆಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಾಳುಗಳ ಮಾಹಿತಿ
ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಮೂವರಿಗೆ ಚಿಕಿತ್ಸೆ
For More Updates Join our WhatsApp Group :




