ಟಾಲಿವುಡ್ ನಟ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ಗುರುವಾರ ಅದ್ಧೂರಿಯಾಗಿ ನೆರವೇರಿದ್ದು, ಫೋಟೋ ಹಂಚಿಕೊಳ್ಳುವ ಮೂಲಕ ನಾಗಾರ್ಜುನ ಅವರು ಶುಭ ಹಾರೈಸಿದ್ದಾರೆ.
ಪುತ್ರನ ನಿಶ್ಚಿತಾರ್ಥ ಕುರಿತು ಫೋಟೋ ಸಹಿತ ನಟ ನಾಗಾರ್ಜುನ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಇಂದು ಬೆಳಗ್ಗೆ 9:42ಕ್ಕೆ ಶೋಭಿತಾ ಧೂಳಿಪಾಲರೊಂದಿಗೆ ನಮ್ಮ ಮಗ ನಾಗ ಚೈತನ್ಯ ಅವರ ನಿಶ್ಚಿತಾರ್ಥವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಶೋಭಿತಾ ಧೂಳಿಪಾಲರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಜೋಡಿಗೆ ಅಭಿನಂದನೆಗಳು. ಜೀವನಪೂರ್ತಿ ಪ್ರೀತಿ ಮತ್ತು ಸಂತೋಷವನ್ನು ಹಾರೈಸುತ್ತೇನೆ. ದೇವರು ಒಳ್ಳೆಯದು ಮಾಡಲಿ ಎಂದು ಬರೆದುಕೊಂಡಿದ್ದಾರೆ.
ನಾಗ ಚೈತನ್ಯ-ಸಮಂತಾ ಅವರು ಅಕ್ಟೋಬರ್ 2021 ರಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನ ಬಳಿಕ ನಾಗ ಚೈತನ್ಯ ಅವರು ಶೋಭಿತಾ ಜೊತೆಗೆ ಡೇಟಿಂಗ್ ನಲ್ಲಿರುವ ಸುದ್ದಿ ಕೇಳಿಬಂದಿತ್ತು. ಆದರೆ, ಈ ಬಗ್ಗೆ ಕುಟುಂಬವಾಗಲೀ ನಾಗ ಚೈತನ್ಯವಾಗಲೀ ಸ್ಪಷ್ಟನೆ ನೀಡಿರಲಿಲ್ಲ.