ವಾಣಿಜ್ಯ ಬೆಳೆಗಳತ್ತ ಅನ್ನದಾತರ ಒಲವು : ಅಡಿಕೆ, ತೆಂಗು ಸಸಿ ನೆಡಲು ಸೂಕ್ತ ಕ್ರಮವನ್ನು ಅನುಸರಿಸಿ

ವಾಣಿಜ್ಯ ಬೆಳೆಗಳತ್ತ ಅನ್ನದಾತರ ಒಲವು : ಅಡಿಕೆ, ತೆಂಗು ಸಸಿ ನೆಡಲು ಸೂಕ್ತ ಕ್ರಮವನ್ನು ಅನುಸರಿಸಿ

ಪ್ರಸ್ತುತ ನಮ್ಮ ಅನ್ನದಾತರು ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಒಲವು ತೋರುತ್ತಿರುವಂತೆ ಕಾಣುತ್ತಿದೆ . ಹೆಚ್ಚಾಗಿ ಅಡಿಕೆ ಮತ್ತು ತೆಂಗು ನೇಡುತ್ತಿದ್ದಾರೆ . ಆದರೂ ಸಹ ಕೆಲ ರೈತರಲ್ಲಿ ಒಂದು ಗೊಂದಲ ಸೃಷ್ಟಿಯಾಗಿದೆ . ಅಡಿಕೆ ಸಸಿಯ ಆಯ್ಕೆ ಸಮಯದಲ್ಲಿ ಯಾವ ಸಸಿಗಳನ್ನು ಆಯ್ಕೆ ಮಾಡಬೇಕು ? ಪ್ಯಾಕೆಟ್ ಸಸಿಗಳ ಅಥವಾ ತೆಂಡೆ ಸಸಿಗಳ (ತೇವಡೆ ) ಎಂಬ ಗೊಂದಲ ಉಂಟಾಗುತ್ತದೆ…ಅಡಿಕೆ ಸಸಿಯನ್ನು ಎರಡು ಪದ್ಧತಿಯನ್ನು ಅನುಸರಿಸಿ ಬೆಳೆಸುತ್ತಾರೆ . ಒಂದು ಭೂಮಿಯ ಮೇಲ್ಪದರದಲ್ಲಿ ಸಸಿಗಳನ್ನು ನಾಟಿ ಮಾಡಿ ಬೆಳೆಸುವುದು, (ತೆಂಡೆ ಸಸಿ ಅಥವಾ ತೇವಡೆ ಸಸಿ ) ಮತ್ತೊಂದು ಅಡಿಕೆ ಸಸಿಗಳನ್ನು ಪಾಕೆಟ್ ಅಥವಾ ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ನಾಟಿ ಮಾಡಿ ಬೆಳೆಸುವುದು .(ಪ್ಯಾಕೆಟ್ ಸಸಿಗಳು ). ಆದರೆ ಎರಡು ಪದ್ಧತಿಯಲ್ಲಿ ಬೆಳೆಯುವ ಸಸಿಗಳನ್ನು ಕೆಲವರು ಒಪ್ಪುತ್ತಾರೆ , ಕೆಲವರು ಒಪ್ಪುವುದಿಲ್ಲ.

 ಮೊದಲಿಗೆ ಪ್ಯಾಕೆಟ್ ಸಸಿಗಳ ಬಗ್ಗೆ ತಿಳಿಯೋಣ. ಪ್ಯಾಕೆಟ್ ಅಥವಾ ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ  ನೆಟ್ಟು ಬೆಳೆಸುವ ಸಸಿಗಳನ್ನು ಪ್ಯಾಕೆಟ್ ಸಸಿಗಳು ಎನ್ನುವರು. ಒಂದು ಕೆಜಿ, ಒಂದುವರೆ ಕೆಜಿ, ಎರಡು ಕೆಜಿ ,ಬ್ಯಾಗ್ ಗಳಲ್ಲಿ ಮರಳು, ಕಾಂಪೋಸ್ಟ್ ಗೊಬ್ಬರ, ಕೆಂಪುಮಣ್ಣು, ಮಿಶ್ರಣ ಮಾಡಿ ಹಂತಹಂತವಾಗಿ ಪ್ಲಾಸ್ಟಿಕ್ ಬ್ಯಾಗಿನಲ್ಲಿ ತುಂಬಿ ನಂತರ ಮೇಲ್ಬಾಗದಲ್ಲಿ ಸಸಿಯನ್ನು ನಾಟಿ ಮಾಡುತ್ತಾರೆ. ವಾರಕ್ಕೆ ಎರಡು ಅಥವಾ ಮೂರು ಬಾರಿ ನೀರನ್ನು ನೀಡುತ್ತಾರೆ. ಪಾಕೆಟ್ ಸಸಿಗಳ ಆಯ್ಕೆ ಒಳ್ಳೆಯದ ? ಎಂದರೆ, ಭೂಮಿಯಲ್ಲಿ ನಾಟಿ ಮಾಡಿದ ಸಸಿಗಳಿಗೆ ಹೋಲಿಸಿದರೆ, ಇವು ಸಾಕಷ್ಟು ಭಿನ್ನವಾಗಿರುತ್ತವೆ. ಪ್ಯಾಕೆಟ್ ಸಸಿಗಳಿಗೆ ತನ್ನ ಪ್ಲಾಸ್ಟಿಕ್ ಚೀಲವೇ ಪ್ರಪಂಚವಾಗಿರುತ್ತದೆ. ಅವುಗಳಿಗೆ ಮಣ್ಣಿನ ಗುಣಧರ್ಮ, ವಿನ್ಯಾಸ ಇವುಗಳ ಬಗ್ಗೆ ತಿಳಿದಿರುವುದಿಲ್ಲ. ಬೇರುಗಳು ಹೊಸದನ್ನು ಹುಡುಕಲು ಪ್ರಯತ್ನಿಸುವುದಿಲ್ಲ. ಕೇವಲ ನಾವು ನೀಡಿದ ಗೊಬ್ಬರ ನೀರನ್ನು ತೆಗೆದುಕೊಂಡು ಬೆಳೆಯುತ್ತಿರುತ್ತವೆ. ಸಸಿಗಳು ಉತ್ತಮವಾಗಿ ಬೆಳೆಯಬಹುದು. ಆದರೆ ಅವುಗಳಿಗೆ ಮಣ್ಣಿನ ಸ್ವಾರಸ್ಯದ ಅರಿವಿರುವುದಿಲ್ಲ. ಇವುಗಳನ್ನು ಸುಲಭವಾಗಿ ಸ್ಥಳಾಂತರಿಸಬಹುದು . ನಾವು ಭೂಮಿ ನೆಟ್ಟಾಗ ಅವುಗಳ ಪಾಡು ದೇವರಿಗೆ ಮುಟ್ಟುತ್ತದೆ. ಭೂಮಿಯ ತಾಪ ಜೊತೆಗೆ ಸೂರ್ಯನ ತಾಪ ಇವುಗಳ ಮಧ್ಯೆ ಅವು ಸಮರ್ಪಕವಾಗಿ ಬೆಳೆಯಲು ವಿಫಲವಾಗಬಹುದು. ಒಣಗುವ ಸಾಧ್ಯತೆ ಇರುತ್ತದೆ. ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಭೂಮಿಯ ಮೇಲ್ಪದರದಲ್ಲಿ ನಾಟಿ ಮಾಡಲಾದ ತೆಂಡೆ ಸಸಿಗಳು ಇವು ಮೊಳಕೆ ಹೊಡೆಯುವ ದಿನದಿಂದ ಭೂಮಿಯ ವಾತಾವರಣದೊಂದಿಗೆ ಹೊಂದಿಕೊಂಡು ಬೆಳೆದಿರುತ್ತವೆ. ಭೂಮಿಯಲ್ಲಿ ಸಿಗುವ ಕೆಲವು ಲವಣಾಂಶಗಳನ್ನು ಹೀರಿಕೊಂಡು ಬೆಳೆದಿರುತ್ತವೆ. ಬೇರುಗಳು ವಿಶಾಲವಾಗಿ ಹರಡಿಕೊಂಡು ಹೊಸದನ್ನು ಹುಡುಕುತ್ತಾ ಹೋಗುತ್ತಿರುತ್ತವೆ. ಒಟ್ಟಾರೆ ಹೇಳುವುದಾದರೆ , ತೆಂಡೆ ಸಸಿಗಳು ಭೂಮಿಯ ಸಂಪೂರ್ಣ ವಾತಾವರಣಕ್ಕೆ ಹೊಂದಿಕೊಂಡಿರುತ್ತವೆ. ಬಿಸಿಲು, ಭೂಮಿಯ ತಾಪ ,ಇತರ ಸಮಸ್ಯೆಗಳನ್ನು ಎದುರಿಸಿ ಅನುಭವವಿರುತ್ತದೆ. ಆದರೆ ಇವುಗಳನ್ನು ಭೂಮಿಯಿಂದ ಚೌಕಾಕಾರದಲ್ಲಿ ಹಗೆದು ತೆಗೆಯಬೇಕಾಗುತ್ತದೆ. ಈ ಕೆಲಸ ಸ್ವಲ್ಪ ಕಷ್ಟಕರ. ಸ್ವಲ್ಪ ಯಾಮಾರಿದರೂ ಸಸಿಗಳು ನಾಶವಾಗುತ್ತವೆ. ಚೌಕ ಕಾರದ ತೆಂಡೆ ಹೊಡೆಯದಂತೆ ಸಸಿಗಳನ್ನು ಕಿತ್ತು ಗುಂಡಿಯೊಳಗೆ ನಾಟಿ ಮಾಡಬೇಕಾಗುತ್ತದೆ. ಇದು ಕೆಲವರಿಗೆ ಸ್ವಲ್ಪ ಕಷ್ಟಕರ ಎನಿಸುತ್ತದೆ.

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಪ್ಯಾಕೆಟ್ ಸಸಿ ಅಥವಾ ತೆಂಡೆ ಸಸಿ ಯಾವುದೇ ಆಗಿರಲಿ , ಸಸಿಗಳ ತಳಿ, ಗುಣಗಳು ,ಮತ್ತು ಬೇಸಾಯ ಕ್ರಮಗಳು ಮುಖ್ಯವಾಗಿರುತ್ತದೆ . ಪ್ಯಾಕೆಟ್ ಸಸಿಗಳು ತೆಂಡೆ ಸಸಿಗಳಿಗೆ ಎಂದು ಸಮನಾಗದೂ. ಅವುಗಳ ಗರಿಮೆ, ಜನಪ್ರಿಯತೆ ಅವುಗಳಿಗೆ

Leave a Reply

Your email address will not be published. Required fields are marked *