ದೊಡ್ಡಬಳ್ಳಾಪುರ : ನಗರ ಗ್ರಾಮ ಲೆಕ್ಕಾಧಿಕಾರಿ ಬೆಳೆ ಸಮೀಕ್ಷೆ.ನಡೆಸುವ ವೇಳೆ. ರೈತರ ಸಂಬOಧಿಯೊಬ್ಬರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ನಗರಸಭೆಯ 7ವಾರ್ಡ ಖಾಸ್ಬಾಗ್ ಬಳಿ ಘಟನೆ ನಡೆದಿದೆ. ಗ್ರಾಮಲೆಕ್ಕಾಧಿಕಾರಿ ರಾಜೇಂದ್ರ (39) ಬಾಬು ಅವರು 2024-25 ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಮಾಡುವ ಸಂಧರ್ಭದಲ್ಲಿ ಭೂಮಾಲಿಕನ ಸಂಬAದಿಯಾದ ವಸಂತ್ ಕುಮಾರ್ ಅವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದೊಡ್ಡಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ ಸಿದ್ದೇನಾಯಕನಹಳ್ಳಿ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಆದ ಹೆಚ್. ಎಸ್ ರಾಜೇಂದ್ರ ಬಾಬು ಅವರು ಇಂದು ಸರ್ಕಾರದ ಆದೇಶದಂತೆ 2024-25 ನೇ ಸಾಲಿನ ಮುಗಾರು ಬೆಳೆ ಸಮೀಕ್ಷೆ ಮಾಡಲು ತೆರಳಿದ್ದಾಗ ಸಂಜೆ ಸುಮಾರು 4-00 ಗಂಟೆಯ ಸಮಯದಲ್ಲಿ ಖಾಸ್ ಬಾಗ್ ಗ್ರಾಮದ ಸರ್ವೇ ನಂ 79/1ಬಿ ರ ಭೂ ಮಾಲೀಕರಾದ ಜಿ ಕೃಷ್ಣಪ್ಪ ಬಿನ್ ಹೆಚ್ ಗೋವಿಂದಪ್ಪ ಅವರ ಜಮೀನಿನ ಬೆಳೆ ಸಮೀಕ್ಷೆ ಮಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಭೂ ಮಾಲೀಕರ ಸಹೋದರ ವಸಂತ್ ಕುಮಾರ್ ಅವರು ಬಾಬು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಏಕಾ ಏಕಿ ತೆಂಗಿನ ಪಟ್ಟಿಯಿಂದ ತಲೆ, ಎದೆಬಾಗ ಹಾಗೂ ಕೈಕಾಲುಗಳಿಗೆ ಹಲ್ಲೆ ನಡೆಸಿದ್ದು, ಬಾಬು ಅವರ ತಲೆ ಮತ್ತು ಬಲ ಕೈಗೆ ರಕ್ತಗಾಯವಾಗಿದೆ ಎಂದು ಆರೋಪಿಸಲಾಗಿದೆ.
ಈ ವೇಳೆ ಮಾತನಾಡಿದ ರಾಜೇಂದ್ರ ಬಾಬು ಅವರು, ನಾನು ಬೆಳೆ ಸರ್ವೇ ಮಾಡುವಾಗ ಅಲ್ಲಿಗೆ ಬಂದ ವಸಂತ್ ಕುಮಾರ್ ನನ್ನ ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೇ, ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಮೇಲೆ ತೆಂಗಿನ ಪಟ್ಟೆಯಿಂದ ಹಲ್ಲೆ ನಡೆಸಿದ್ದಾನೆ. ನನಗೆ ತಲೆ ಕೈಗಳು ಮತ್ತು ಎದೆಯ ಭಾಗದಲ್ಲಿ ರಕ್ತಗಾಯವಾಗಿದೆ. ಆರೋಪಿ ವಸಂತ್ ಕುಮಾರನ ಮೇಲೆ ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಮಾತನಾಡಿದ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ರಘುಪತಿ ಅವರು ಸರ್ಕಾರ ನಮಗೆ ವರ್ಷಕ್ಕೆ ಮೂರು ಬಾರಿ ಬೆಳೆ ಸಮೀಕ್ಷೆ ನಡೆಸಲು ತಿಳಿಸಿದೆ. ಒಬ್ಬ ಗ್ರಾಮಲೆಕ್ಕಾಧಿಕಾರಿಗೆ ಸುಮಾರು ಐದು ಹಳ್ಳಿಗಳ ಒಟ್ಟು ಒಂದೂವರೆ ಸಾವಿರ ಸರ್ವೇ ನಂಬರ್ಗಳು ನೀಡಿರುತ್ತಾರೆ.
ಹಗಲು ರಾತ್ರಿ ದುಡಿದರೂ ವಾಯಿದೆಗೆ ಸರಿಯಾಗಿ ಕೆಲಸ ಮುಗಿಸಲು ಸಾಧ್ಯವಿಲ್ಲ. ಆದರೆ ನಮಗೆ ಲ್ಯಾಪ್ಟಾಪ್, ಸಿಸ್ಟಮ್, ಮೊಬೈಲ್ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಸಹ ನೀಡಿಲ್ಲ, ನಾವು ಭಾನುವಾರದ ರಜೆಗಳನ್ನು ಅನುಭವಿಸಿ ವರ್ಷಗಳೇ ಕಳೆದು ಹೋಗಿದೆ. ಕೆಲಸದ ವೇಳೆ ನಮಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ ಎಂದು ತಮ್ಮ ಅಳಲು ತೊಡಿಕೊಂಡರು.