ಬೆಂಗಳೂರು : ರಾಜ್ಯಪಾಲರ ಕಚೇರಿಯಿಂದಲೇ ಕಡತ ಸೋರಿಕೆ ಆಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿದ ಅವರು, ರಾಜಭವನದ ಕಡತಗಳು, ಮಾಹಿತಿ ಹೇಗೆ ಸೋರಿಕೆಯಾಗುತ್ತಿದೆ ಎಂದು ರಾಜ್ಯಪಾಲರು ಸಿಎಸ್‌ಗೆ ಪತ್ರ ಬರೆದಿದ್ದಾರೆ. ಪರಿಶೀಲನೆ ವೇಳೆ ರಾಜ್ಯಪಾಲರ ಕಚೇರಿಯಿಂದಲೇ ಕಡತಗಳು ಸೋರಿಕೆ ಆಗಿದೆ ಎಂದು ಗೊತ್ತಾಗಿದೆ. ಈ ಬಗ್ಗೆ ನಾವು ಈಗ ಏನು ಕ್ರಮ ಕೈಗೊಳ್ಳಬೇಕು? ಪೊಲೀಸರಿಂದ ತನಿಖೆ ನಡೆಸಬೇಕಾ? ಎಂದು ಪ್ರಶ್ನಿಸಿದರು.
ರಾಜ್ಯಪಾಲರು ಸಂವಿಧಾನದ ಪ್ರಕಾರ ಕೆಲಸ ಮಾಡುವುದು ಬಿಟ್ಟು ಅದಕ್ಕೆ ವಿರೋಧವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯಪಾಲರು ಪಕ್ಷ ರಾಜಕಾರಣ ಮಾಡುತ್ತಿದ್ದಾರೆ. ಲೋಕಾಯುಕ್ತದವರೇ ಮನವಿ ಮಾಡಿದ್ದರೂ ಅದಕ್ಕೆ ಅನುಮತಿ ಕೊಟ್ಟಿಲ್ಲ. ಒಂದು ಕಡತವನ್ನು ಆಂಗ್ಲಕ್ಕೆ ಭಾಷಾಂತರ ಮಾಡಿ ಎಂದು ಹೇಳಿ ನೆಪ ಮಾತ್ರಕ್ಕೆ ವಾಪಸ್ ಕಳುಹಿಸಿದ್ದಾರೆ ಎಂದರು.
ರಾಜ್ಯಪಾಲರು ಪಕ್ಷಪಾತದ ಕೆಲಸ ಮಾಡುತ್ತಿದ್ದಾರೆ: ರಾಜಭವನ ಕಚೇರಿಯಲ್ಲಿ ಕನ್ನಡ ಬಲ್ಲವರೂ ಯಾರೂ ಇಲ್ಲವಾ?. ರಾಜ್ಯಪಾಲರು ಬರೆದ ಪತ್ರವನ್ನು ಕಾನೂನಾತ್ಮಕವಾಗಿ ನೋಡಿ, ಯಾವುದಕ್ಕೆ ಉತ್ತರ ಕೊಡಬೇಕು ಅದಕ್ಕೆ ಉತ್ತರ ಕೊಡುತ್ತೇವೆ. ರಾಜ್ಯಪಾಲರ ಕಚೇರಿಯನ್ನು ರಾಜಕೀಯ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತಿದೆ. ರಾಜ್ಯಪಾಲರು ಪಕ್ಷಪಾತದ ಕೆಲಸ ಮಾಡುತ್ತಿದ್ದಾರೆ. ಅದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಗಂಗೇನಹಳ್ಳಿ ಡಿನೋಟಿಫಿಕೇಷನ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಯಾರ ಬಗ್ಗೆನೂ ವೈಯಕ್ತಿಕವಾಗಿ ಮಾತನಾಡಿಲ್ಲ. ಹೆಚ್‌ಡಿಕೆ ವಿರುದ್ಧ ವೈಯಕ್ತಿಕವಾಗಿ ಮಾತನಾಡಿಲ್ಲ. ನಾನು ಆ ಸಂಸ್ಕೃತಿಯವನಲ್ಲ. ನಾನು ಸತ್ಯ ಹರಿಶ್ಚಂದ್ರ ಅಂತ ಹೇಳಿಕೊಂಡಿಲ್ಲ. ಅಸ್ತಿತ್ವದಲ್ಲಿ ಇರದಂಥ ಜಮೀನಿಗೆ ದಾರಿಯಲ್ಲಿ ಹೋಗುವ ದಾಸಯ್ಯ ರಾಜಶೇಖರ್ ಬೇನಾಮಿ ಡಿನೋಟಿಫಿಕೇಷನ್‌ಗೆ ಅರ್ಜಿ ಹಾಕಿರುವುದು ನಿಜನಾ?. ರಾಜಶೇಖರ್‌ಗೆ ಈ ಜಮೀನಿಗೆ ಸಂಬAಧ ಇಲ್ಲದಿದ್ದರೂ ಅವರು ಹಾಕಿದ ಡಿನೋಟಿಫಿಕೇಷನ್ ಅರ್ಜಿ ಕಡತ ಪುಟ್ ಅಪ್ ಮಾಡಿ ಅಂದಿದ್ದು ಸರಿನಾ?. ಡಿನೋಟಿಫಿಕೇಷನ್ ಅರ್ಜಿ ಹಾಕಿದ ಎರಡೇ ದಿನದಲ್ಲಿ ನಿಮ್ಮ ಕುಟುಂಬದವರು ಜಿಪಿಎ ಮಾಡಿರುವುದು ಲಾಭ ಮಾಡಲು ಹೌದೋ ಅಲ್ವೋ? ಎಂದು ಪ್ರಶ್ನಿಸಿದರು.
ನಾವು ಯಾರೂ ಸತ್ಯ ಹರಿಶ್ಚಂದ್ರ ಆಗುವುದಕ್ಕೆ ಸಾಧ್ಯ ಇಲ್ಲ: ಸತ್ಯ ಹರಿಶ್ಚಂದ್ರ ಅಂತ ನಾನು ಹೇಳಿಕೊಂಡಿಲ್ಲ. ರಾಜಕೀಯದಲ್ಲಿ ಇರುವವರು ನಾವು ಯಾರೂ ಸತ್ಯ ಹರಿಶ್ಚಂದ್ರ ಆಗುವುದಕ್ಕೆ ಸಾಧ್ಯ ಇಲ್ಲ. ಇಲ್ಲಿ ಸತ್ತು ಹೋಗಿರುವವರ ಹೆಸರಿಗೆ ಡಿನೋಟಿಫಿಕೇಷನ್ ಆಗಿದೆಯೋ, ಇಲ್ಲವೋ?. ಗಾಳಿಯಲ್ಲಿ ನಾವು ಗುಂಡು ಹಾರಿಸಲ್ಲ. ಹೆಚ್‌ಡಿಕೆ ಅವರು ವಯಸ್ಸಿನಲ್ಲಿ ದೊಡ್ಡವರಿದ್ದಾರೆ. ನಾನು ಇನ್ನೊಬ್ಬರ ಬಗ್ಗೆ ಕೇವಲವಾಗಿ ಮಾತನಾಡಿಲ್ಲ. ವೈಯಕ್ತಿಕವಾಗಿ ನಾನು ಮಾತನಾಡಿಲ್ಲ. ಆ ಸಂಸ್ಕೃತಿಯಿAದ ಬಂದಿಲ್ಲ. ನಾನು ಸಾರ್ವಜನಿಕ ಹಿತದೃಷ್ಟಿಯಿಂದ ಮಾತನಾಡಿದ್ದೇನೆ. ದುರ್ಲಾಭದ ಉದ್ದೇಶ ಇಲ್ಲಿ ಇದೆಯೋ ಇಲ್ಲವೋ ಎಂದು ಹೇಳಲಿ ಎಂದು ಸವಾಲು ಹಾಕಿದರು.