ಸಣ್ಣ ಮಕ್ಕಳ ಹಲ್ಲಿನ ಆರೋಗ್ಯ ಬಹಳ ಮುಖ್ಯ. ಏಕೆಂದರೆ ಮಗುವಿಗೆ ಮೊದಲ ಹಾಲು ಹಲ್ಲುಗಳು ಭವಿಷ್ಯದಲ್ಲಿ ಬರುವ ಶಾಶ್ವತ ಹಲ್ಲುಗಳಿಗೆ ಅಡಿಪಾಯ ಇದ್ದಂತೆ. ಆದ್ದರಿಂದ, ಪೋಷಕರು ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಹಲ್ಲುಜ್ಜುವ ಅಭ್ಯಾಸವನ್ನು ಕಲಿಸುವುದು ಅವಶ್ಯಕ. ಹೀಗೆ ಮಾಡುವುದರಿಂದ, ಭವಿಷ್ಯದಲ್ಲಿ ಹಲ್ಲಿನ ಸಮಸ್ಯೆಗಳಿಲ್ಲದೆ ಆರೋಗ್ಯವಾಗಿರಬಹುದು. ಆದರೆ ಕೆಲವು ತಂದೆ- ತಾಯಿಯರಿಗೆ ಮಕ್ಕಳ ಹಲ್ಲನ್ನು ಯಾವಾಗಿನಿಂದ ಉಜ್ಜಿಸಬೇಕು ಎಂಬುದು ತಿಳಿದಿರುವುದಿಲ್ಲ ಅಂತಹ ಗೊಂದಲಗಳಿಗೆ ಈ ಸ್ಟೋರಿಯಲ್ಲಿದೆ ಮಾಹಿತಿ.
ಸಣ್ಣ ಮಕ್ಕಳ ಆರೋಗ್ಯದ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ ಸಾಲುವುದಿಲ್ಲ. ಏಕೆಂದರೆ ಅವರನ್ನು ಸರಿಯಾಗಿ ಬೆಳೆಸುವುದು ಪೋಷಕರ ಕೈಯಲ್ಲಿರುತ್ತದೆ. ಮಕ್ಕಳಿಗೆ ಯಾವುದು ಒಳ್ಳೆಯದು, ಯಾವುದನ್ನು ಮಾಡಿಸಬಾರದು ಎಂಬುದರ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕಾಗುತ್ತದೆ. ಆದರೂ ಕೂಡ ಕೆಲವರಿಗೆ ಮಕ್ಕಳಿಗೆ ಯಾವ ಸಮಯದಲ್ಲಿ ಏನು ಮಾಡಬೇಕು ಎಂಬ ಗೊಂದಲ ಇದ್ದೆ ಇರುತ್ತದೆ. ಅದರಲ್ಲಿಯೂ ಚಿಕ್ಕ ಮಕ್ಕಳಿಗೆ ಹಲ್ಲಿನ ಆರೋಗ್ಯ ಬಹಳ ಮುಖ್ಯವಾಗುವುದರಿಂದ ಅವುಗಳ ಆರೈಕೆ ಮಾಡಬೇಕಾಗುತ್ತದೆ. ಏಕೆಂದರೆ ಮೊದಲ ಬರುವ ಹಾಲು ಹಲ್ಲುಗಳು ಭವಿಷ್ಯದಲ್ಲಿ ಬರುವ ಶಾಶ್ವತ ಹಲ್ಲುಗಳಿಗೆ ಅಡಿಪಾಯ ಇದ್ದಂತೆ. ಆದ್ದರಿಂದ, ಪೋಷಕರು ಚಿಕ್ಕ ವಯಸ್ಸಿನಿಂದಲೇ ಹಲ್ಲುಜ್ಜುವ ಅಭ್ಯಾಸವನ್ನು ಕಲಿಸುವುದು ಅವಶ್ಯಕ. ಹೀಗೆ ಮಾಡುವುದರಿಂದ, ಮುಂದೆ ಮಕ್ಕಳಿಗೆ ಹಲ್ಲಿಗೆ ಸಂಬಂಧ ಪಟ್ಟ ಸಮಸ್ಯೆಗಳು ಬರುವುದಿಲ್ಲ. ಆದರೆ ಕೆಲವು ತಂದೆ- ತಾಯಿಯರಿಗೆ ಮಕ್ಕಳ ಹಲ್ಲನ್ನು ಯಾವಾಗಿನಿಂದ ಉಜ್ಜಬೇಕು ಎಂಬುದು ತಿಳಿದಿರುವುದಿಲ್ಲ ಅಂತಹ ಗೊಂದಲಗಳಿಗೆ ಈ ಸ್ಟೋರಿಯಲ್ಲಿದೆ ಮಾಹಿತಿ.
ಸಾಮಾನ್ಯವಾಗಿ ಅನೇಕ ಪೋಷಕರು ತಮ್ಮ ಮಕ್ಕಳಿಗೆ ಹಲ್ಲು ಹುಟ್ಟಲು ಪ್ರಾರಂಭವಾದ ನಂತರವೇ ಹಲ್ಲುಜ್ಜಲು ಪ್ರಾರಂಭಿಸುತ್ತಾರೆ. ಅಂದರೆ ಸುಮಾರು ಒಂದು ವರ್ಷ ಕಳೆದ ನಂತರ. ಆದರೆ ಮಕ್ಕಳ ವೈದ್ಯೆಯಾಗಿರುವ ಕಾರುಣ್ಯ ಅವರು ಹೇಳುವ ಪ್ರಕಾರ, ಇದು ತಪ್ಪು. ಶಿಶುಗಳಿಗೆ ದಂತ ಆರೈಕೆ ಬಹಳ ಮುಖ್ಯ ಹಾಗಾಗಿ ಚಿಕ್ಕ ವಯಸ್ಸಿನಿಂದಲೇ ಈ ಅಭ್ಯಾಸ ಪ್ರಾರಂಭವಾಗಬೇಕು. ಏಕೆಂದರೆ ಹಾಲು ಹಲ್ಲುಗಳು ಬಲವಾಗಿ ಮತ್ತು ಸುಂದರವಾಗಿ ಬಂದರೆ ಮಾತ್ರ, ಭವಿಷ್ಯದಲ್ಲಿ ಶಾಶ್ವತ ಹಲ್ಲುಗಳು ಆರೋಗ್ಯಕರವಾಗಿರುತ್ತವೆ.
ಯಾವಾಗ ಪ್ರಾರಂಭಿಸಬೇಕು?
ಮಗುವಿಗೆ ಮೊದಲು ಹಲ್ಲುಗಳು ಕಾಣಿಸಿಕೊಂಡ ತಕ್ಷಣ ದಂತ ನೈರ್ಮಲ್ಯವನ್ನು ಪ್ರಾರಂಭಿಸಬೇಕು. ಇದು ಸಾಮಾನ್ಯವಾಗಿ ಸುಮಾರು 6 ತಿಂಗಳ ವಯಸ್ಸಿನಲ್ಲಿ ಸಂಭವಿಸುತ್ತದೆ. ಹಲ್ಲು ಬಂದ ತಕ್ಷಣ ಹಲ್ಲುಜ್ಜುವ ಅಭ್ಯಾಸವನ್ನು ಮಾಡಿಕೊಳ್ಳುವುದು ಬಹಳ ಮುಖ್ಯ.
ಹೇಗೆ ಮಾಡಬೇಕು?
ಶಿಶುಗಳಿಗೆ 0-1 ವರ್ಷದ ವರೆಗೆ ಫಿಂಗರ್ ಬ್ರಷ್ ಬಳಸಿ ಅಂದರೆ ನಿಮ್ಮ ಕೈಗಳನ್ನೇ ಬ್ರಷ್ ಆಗಿ ಬಳಸಿ. ಪೋಷಕರು ತಮ್ಮ ಬೆರಳನ್ನು ಹಲ್ಲು ಮತ್ತು ಒಸಡುಗಳನ್ನು ನಿಧಾನವಾಗಿ ಒರೆಸಲು ಬಳಸಬಹುದು. ಇದು ಹಲ್ಲುಗಳ ಮೇಲಿನ ಹಾಲಿನ ಶೇಷವನ್ನು ತೆಗೆದುಹಾಕಲು ಮತ್ತು ಒಸಡುಗಳಿಗೆ ಮಸಾಜ್ ಮಾಡಲು ಸಹಾಯ ಮಾಡುತ್ತದೆ. ಚಿಕ್ಕ ಮಕ್ಕಳಿಗೆ ಅಂದರೆ 1-3 ವರ್ಷದ ಮಕ್ಕಳಿಗೆ ಸಣ್ಣ ಬ್ರಷ್ ಹೆಡ್ ಮತ್ತು ದೊಡ್ಡ ಹ್ಯಾಂಡಲ್ ಹೊಂದಿರುವ ಟೂತ್ ಬ್ರಷ್ ಬಳಸಿ. ಈ ಬ್ರಷ್ ಅನ್ನು ಮಕ್ಕಳು ಸುಲಭವಾಗಿ ಹಿಡಿದು ಬಳಸಬಹುದು.
ಆದರೆ ಟೂತ್ಪೇಸ್ಟ್ ಅನ್ನು ಬಹಳ ಕಡಿಮೆ ಬಳಸಬೇಕು. ಬಳಸಲೇ ಬೇಕಾದರೆ ಅಕ್ಕಿಯ ಕಾಳಿನ ಗಾತ್ರದ ಪೇಸ್ಟ್ ಮಾತ್ರ ಬಳಸಿ. ಜೊತೆಗೆ ಮಕ್ಕಳು ಪೇಸ್ಟ್ ಅನ್ನು ನುಂಗದಂತೆ ನೋಡಿಕೊಳ್ಳಬೇಕು. ದಿನಕ್ಕೆ ಕನಿಷ್ಠ ಎರಡು ಬಾರಿ ಹಲ್ಲುಜ್ಜಿಸಬೇಕು, ಅದರಲ್ಲಿಯೂ ವಿಶೇಷವಾಗಿ ರಾತ್ರಿ ಮಲಗುವ ಮೊದಲು. ಸಿಹಿತಿಂಡಿ, ಚಾಕೊಲೇಟ್ಗಳು ಮತ್ತು ಸಕ್ಕರೆ ಹೊಂದಿರುವ ಪಾನೀಯಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ಈ ಅಭ್ಯಾಸವನ್ನು ಚಿಕ್ಕ ವಯಸ್ಸಿನಿಂದಲೇ ಕಲಿಸಿದರೆ, ಭವಿಷ್ಯದಲ್ಲಿ ಯಾವುದೇ ರೀತಿಯಲ್ಲಿ ದಂತಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರುವುದಿಲ್ಲ. ನಿಮ್ಮ ಮಕ್ಕಳು ಸುಂದರವಾಗಿ ನಾಗಬೇಕೆಂದರೆ ಈ ಮುನ್ನೆಚ್ಚರಿಕೆಗಳನ್ನು ಈಗಿನಿಂದಲೇ ಪ್ರಾರಂಭಿಸಿ.
For More Updates Join our WhatsApp Group :