ಕನ್ನಡದ ರೀಲ್ಸ್‌ ಸ್ಟಾರ್‌ ಸಮೀರ್‌ ವಿರುದ್ಧ ಎಫ್‌ಐಆರ್‌, ಯಾಕೆ..?

ಕನ್ನಡದ ರೀಲ್ಸ್ ಸ್ಟಾರ್ ಸಮೀರ್ ವಿರುದ್ಧ ಎಫ್ಐಆರ್, ಯಾಕೆ..?

ಕನ್ನಡ ಖ್ಯಾತ ರೀಲ್ಸ್‌ ಸ್ಟಾರ್‌ ಹಾಗೂ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಮೀರ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈ ವಿಚಾರವನ್ನು ಸ್ವತಃ ಸಮೀರ್‌ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಪ್ರತಿ ದಿನದ ಆಗು ಹೋಗುಗಗಳನ್ನು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಸಮೀರ್‌, ಇದೀಗ ತಮ್ಮ ವಿರುದ್ಧ ಎಫ್‌ಐಆರ್‌ ಆಗಿರುವ ಬಗ್ಗೆ ಕೂಡ ಮಾಹಿತಿ ಹಂಚಿಕೊಂಡಿದ್ದು, ಈ ಮೂಲಕ ಒಂದು ಎಚ್ಚರಿಕೆಯನ್ನು ಎಲ್ಲರಿಗೂ ನೀಡಿದ್ದಾರೆ.

ನನ್ನ ಮೇಲೆ ಚೆನ್ನಪಟ್ಟಣ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಆಗಿದೆ. ಇದು ಒಂದು ಜಾಗೃತಿ ಮೂಡಿಸುವ ವಿಡಿಯೋ ಕೂಡ ಹೌದು. ಈ ವಿಚಾರದ ಬಗ್ಗೆ ನನಗೆ ಐಡಿಯಾನೇ ಇರಲಿಲ್ಲ. ಹೀಗಾಗಿ ಇಷ್ಟೆಲ್ಲಾ ನಡೆದು ಹೋಯ್ತು. ಬೇರೆಯವರು ಎಚ್ಚರಿಕೆಯಿಂದ ಇರಲು ಈ ವಿಡಿಯೋ ಮಾಡುತ್ತಿದ್ದೇನೆ’ ಎಂದು ಸಮೀರ್‌ ಹೇಳಿದ್ದಾರೆ.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಓವರ್‌ ಸ್ಟೀಡ್‌ ಆಗಿ ಕಾರು ಚಲಾಯಿಸಿದಕ್ಕೆ ಎಫ್‌ಐಆರ್‌ ಆಗಿದೆ. ಈ ಬಗ್ಗೆ ಮೊದಲು ಐಡಿಯಾ ಇರಲಿಲ್ಲ. ಬೆಂಗಳೂರು- ಮೈಸೂರು ಹೆದ್ದಾರಿ ಎಐ ಕ್ಯಾಮರಾ ಇದೆ. ಸ್ಟೀಡ್‌ ಬ್ರೇಕ್‌ ಮಾಡಿದರೆ ಇಷ್ಟೆಲ್ಲಾ ಆಗುತ್ತದೆ ಅಂತಾ ಗೊತ್ತಿರಲಿಲ್ಲ. ಮೊದಲೆಲ್ಲಾ ದಂಡ ಹಾಕುತ್ತಾರೆ ಅಂದುಕೊಂಡಿದ್ದೆ. ಆದರೆ ಈಗ ದಂಡ ಅಲ್ಲ. ನೇರವಾಗಿ ಎಫ್‌ಐಆರ್‌ ಆಗಿದೆ’ ಎಂದರು.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಹೋಗುವಾಗ ಕಾರಿನ ವೇಗ 120-130 ದಾಟಿದರೆ ಎಫ್‌ಐಆರ್‌ ಆಗುತ್ತದೆ. 100 ಮೇಲೆ ದಾಟಿದರೆ ನಿಮಗೆ ದಂಡ ಬೀಳುತ್ತದೆ. ಇದನ್ನು ನೀವು ಯಾವತ್ತೂ ತಲೆಯಲ್ಲಿ ಇಟ್ಟುಕೊಳ್ಳಿ. ಜೊತೆಗೆ ಸೀಟ್‌ ಬೆಲ್ಟ್‌. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ನೀವು ಸೀಟ್‌ ಬೆಲ್ಟ್‌ ಹಾಕಲೇಬೇಕು. ನನಗೂ ಹೀಗೆ ಆಗಿ ಈಗ ಎಲ್ಲಾ ಸೇರಿ ಎಫ್‌ಐಆರ್‌ ಆಗಿದೆ. ನೀವು ಈ ಕಡೆ ಓಡಾಡುವವರಾಗಿದ್ದರೆ ಟ್ರಾಫಿಕ್‌ ರೂಲ್ಸ್‌ಗಳನ್ನು ತಿಳಿದುಕೊಳ್ಳಿ’ ಎಂದು ಸಮೀರ್‌ ಹೇಳಿದ್ದಾರೆ.

ಈ ಮೂಲಕ ಸಮೀರ್‌ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಚಲಿಸುವವರು ಎಲ್ಲಾ ರೀತಿಯ ಸಂಚಾರಿ ನಿಯಮಗಳನ್ನು ಪಾಲಿಸಿ. ಸಂಚಾರಿ ಪೊಲೀಸರ ಬದಲಿಗೆ ಈಗ ಎಐ ಕ್ಯಾಮರಾಗಳಿದ್ದು, ಯಾರು ಕೂಡ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಬಚಾವ್‌ ಆಗಲು ಸಾಧ್ಯವಿಲ್ಲ ಎನ್ನುವ ಎಚ್ಚರಿಕೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಮೀರ್‌ ಈ ವಿಡಿಯೋಗೆ ಅನೇಕರು ಕಮೆಂಟ್ ಮಾಡಿದ್ದು, ಈ ಉಪಯುಕ್ತವಾದ ಮಾಹಿತಿ ನೀಡಿದಕ್ಕೆ ಧನ್ಯವಾದ ತಿಳಿಸಿದ್ದಾರೆ.

Leave a Reply

Your email address will not be published. Required fields are marked *