ತುರುವೇಕೆರೆ: ರೇಷ್ಮೆ ಸಾಕಾಣಿಕೆ ಹಾಗೂ ಕೊಬ್ಬರಿ ತುಂಬಿದ್ದ ಶೆಡ್ಗೆ ಭಾನುವಾರ ತಡರಾತ್ರಿ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ತಾಲ್ಲೂಕಿನ ಕಳ್ಳನಕೆರೆ ಗ್ರಾಮದಲ್ಲಿ ನಡೆದಿದೆ. ಕಸಬಾ ಹೋಬಳಿ ಕಳ್ಳನಕೆರೆ ಗ್ರಾಮದಲ್ಲಿ ಶಿಗೊಡ ನಂಜಪ್ಪ ಎಂಬ ರೈತ ತೋಟದ ಮನೆಯ ರೇಷ್ಮೆ ಫಾರಂ ಹೌಸ್ ಶೆಡ್ನಲ್ಲಿ ರೇಷ್ಮೆ ಸಾಕಾಣಿಕೆ ಮಾಡುತ್ತಿದ್ದು, ಅದೇ ಶೆಡ್ ಮೇಲೆ ಸುಮಾರು 15 ರಿಂದ 20 ಸಾವಿರ ಕೊಬ್ಬರಿ ತುಂಬಿದ್ದರು.
ಶೆಡ್ಗೆ ಭಾನುವಾರ ಮಧ್ಯರಾತ್ರಿ ಬೆಂಕಿ ತಗುಲಿ ಉರಿಯುತ್ತಿದ್ದದನ್ನು ಪಕ್ಕದ ತೋಟದಲ್ಲಿ ವಾಸವಿದ್ದ ಮನೆಯವರು ನೋಡಿ ತಕ್ಷಣ ಮಾಲೀಕರಿಗೆ ವಿಚಾರ ಮುಟ್ಟಿಸಿದ್ದಾರೆ. ತಕ್ಷಣ ಅಗ್ನಿಶಾಮಕ ವಾಹನಕ್ಕೆ ಕರೆಮಾಡಿ ಕರೆಸಿ, ಬೆಂಕಿ ನಂದಿಸುವಷ್ಟರಲ್ಲಿ ರೇಷ್ಮೆ ಚಂದ್ರಿಕೆ, ಸೊಳ್ಳೆ ಪರದೆ, ಸ್ಪೈಯರ್ ಮಿಷನ್ ಸೇರಿದಂತೆ ರೇಷ್ಮೆ ಸಾಕಾಣಿಕಾ ಸಾಮಗ್ರಿಗಳು ಹಾಗೂ ಶೆಡ್ನಲ್ಲಿದ್ದ ಸುಮಾರು 15 ರಿಂದ 20 ಸಾವಿರ ಕೊಬ್ಬರಿ, ರೇಷ್ಮೆ ಮನೆಯ ರೂಫಿಂಗ್ ಬೆಂಕಿಗಾಹುತಿಯಾಗಿದೆ. ಸುಮಾರು 12 ರಿಂದ 15 ಲಕ್ಷ ರೂಪಾಯಿ ರೈತ ನಂಜಪ್ಪನವರಿಗೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, ಪಟ್ಟಣದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.