ಮಹಾಲಯ ಅಮಾವಾಸ್ಯೆ ಅಂಗವಾಗಿ ಅಮ್ಮನವರಿಗೆ ಹೂವಿನಅಲಂಕಾರ

ಮಹಾಲಯ ಅಮಾವಾಸ್ಯೆ ಅಂಗವಾಗಿ ಅಮ್ಮನವರಿಗೆ ಹೂವಿನಅಲಂಕಾರ

ದೇವನಹಳ್ಳಿ : ದೇವನಹಳ್ಳಿ ತಾಲ್ಲೂಕು ವಿಜಯಪುರ ಹೋಬಳಿಯ ಗಡ್ಡದನಾಯಕನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ದುರ್ಗಾ ಮಹೇಶ್ವರಿ ಅಮ್ನನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ವಿಜಯಪುರ ಹೋಬಳಿಯ ಗಡ್ಡದನಾಯಕನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಭಕ್ತರ ಆರಾಧ್ಯ ದೇವಿ ದುರ್ಗಾ ಮಹೇಶ್ವರಿ ದೇವಾಲಯದಲ್ಲಿ ಪ್ರತಿ ತಿಂಗಳ ಅಮಾವಾಸ್ಯೆಗೆ ಹೋಮ ಹವನಾದಿಗಳನ್ನು ಮಾಡಿಸುವ ಪ್ರತೀತಿ ಇದ್ದು ಮಹಾಲಯ ಅಮಾವಾಸ್ಯೆ ಅಂಗವಾಗಿ ಅಮ್ಮನವರಿಗೆ ಹೂವಿನಅಲಂಕಾರ ಮತ್ತು ಪ್ರತ್ಯಂಗೀರ ಹೋಮ ಭಕ್ತಾದಿಗಳ ನಡುವೆ ನಡೆಯಿತು.

ದುರ್ಗಾ ಮಹೇಶ್ವರಿ ದೇವಾಲಯ ಪ್ರಧಾನ ಅರ್ಚಕ ಮತ್ತು ಧರ್ಮಾಧಿಕಾರಿ ನಾಗರಾಜಪ್ಪ ಸ್ವಾಮಿಗಳು ಮಾತನಾಡಿ, ಮಹಾಲಯ ಅಮಾವಾಸ್ಯೆ ಆದ್ದರಿಂದ ಮುಂಜಾನೆ ಗೋಪೂಜೆಯಿಂದ ಪ್ರಾರಂಭಗೊAಡು ದುರ್ಗಾ ಕವಚ ಹೋಮ, ಪ್ರತ್ಯಂಗೀರ ಹೋಮ ಗುರುವಾರದಿಂದ ನವರಾತ್ರಿ ಮಹೋತ್ಸವ ಅಂಗವಾಗಿ ದೇವಿಗೆ ಪ್ರತಿದಿನ ವಿವಿಧ ಅಲಂಕಾರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ವಿಶೇಷವಾಗಿ ೧೦ ರಂದು ದುರ್ಗಾಷ್ಟಮಿ ಅಂಗವಾಗಿ ಆನೆ ಅಂಬಾರಿ ಉತ್ಸವ , ಆಗಮಿಸಿದ ಭಕ್ತಾದಿಗಳಿಗೆ ವಸ್ತ್ರ ದಾನ ಮಾಡಲಾಗುತ್ತದೆ, ಆಯುಧ ಪೂಜೆ ದಿನ ಪಲ್ಲಕ್ಕಿ ಉತ್ಸವ ನಡೆಯುತ್ತದೆ ಎಂದು ತಿಳಿಸಿದರು.

ನವರಾತ್ರಿಯ ೯ ದಿನಗಳಂದು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಿಗೆ ವಿವಿಧ ಅಲಂಕಾರ ಮತ್ತು ಪ್ರತಿ ದಿನ ಪ್ರಸಾದ ವಿನಿಯೋಗ ಮಾಡಲಾಗುತ್ತದೆ ಪ್ರತಿ ದಿನ ನಡೆಯುವ ಪೂಜಾ ಕೈಂಕರ್ಯಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲು ದೇವಾಲಯ ಸಮಿತಿ ಕೋರಿದೆ.

Leave a Reply

Your email address will not be published. Required fields are marked *