ತುಮಕೂರಿನಲ್ಲಿ ಅರಣ್ಯ ಹಾಗೂ ವನ್ಯಜೀವಿ ಛಾಯಾಚಿತ್ರಗಳ ಸ್ಪರ್ಧೆ ; ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ 

ತುಮಕೂರಿನಲ್ಲಿ ಅರಣ್ಯ ಹಾಗೂ ವನ್ಯಜೀವಿ ಛಾಯಾಚಿತ್ರಗಳ ಸ್ಪರ್ಧೆ ; ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ

ತುಮಕೂರು : ತುಮಕೂರು ಅರಣ್ಯ ಇಲಾಖೆಯು ಪರಿಸರ ಆಸಕ್ತರ ಸಹಯೋಗದೊಂದಿಗೆ 2024ನೇ ಸಾಲಿನ ವನ್ಯಜೀವಿ ಸಪ್ತಾಹ (ಅಕ್ಟೋಬರ್ 2-8)ದ ಅಂಗವಾಗಿ ಅರಣ್ಯ ಹಾಗೂ ವನ್ಯಜೀವಿ ಛಾಯಾಚಿತ್ರಗಳ ಸ್ಪರ್ಧೆ  ಹಾಗೂ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಛಾಯಾಗ್ರಾಹಕರು Forest Landscape, Birds, Insects, Reptiles and Mammalsಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ತುಮಕೂರು ಜಿಲ್ಲೆಯಲ್ಲಿಯೇ ತೆಗೆದಿರತಕ್ಕದ್ದು. ಛಾಯಚಿತ್ರದ ಅಳತೆ 12”x18” (A3 size) ಇರಬೇಕು. ಛಾಯಾಚಿತ್ರಗಳನ್ನು ಸೆಪ್ಟೆಂಬರ್ 20ರೊಳಗಾಗಿ  E-MAIL ID: Wildweektumakuru@gmail.comಗೆ ಸಲ್ಲಿಸಬೇಕು.

ಛಾಯಾಚಿತ್ರಗಳೊಂದಿಗೆ ಸ್ವರ್ಧಿಯ ಹೆಸರು, ಮೊಬೈಲ್ ನಂಬರ್, ಛಾಯಾಚಿತ್ರ ತೆಗೆದ ಸ್ಥಳವನ್ನು ಕಡ್ಡಾಯವಾಗಿ ನಮೂದಿಸಬೇಕು. ಛಾಯಾಚಿತ್ರಗಳ ಆಯ್ಕೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮ. ಸ್ಪರ್ಧೆಯ ವಿಜೇತರಿಗೆ ಆಕರ್ಷಕ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವುದು. ಆಯ್ಕೆಯಾದ ಛಾಯಾಚಿತ್ರಗಳನ್ನು ಸಾರ್ವಜನಿಕ ಪ್ರದರ್ಶನಕ್ಕಿಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಉಪ ವಲಯ ಅರಣ್ಯಾಧಿಕಾರಿ ಸುಮನ್ (9019588155) ಹಾಗೂ ವಿಪಿನ್ ರಾಯ್(9901087984) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ತುಮಕೂರು ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ತಿಳಿಸಿದ್ದಾರೆ.

Leave a Reply

Your email address will not be published. Required fields are marked *