cancer ನಿಂದ ಪುರುಷರ ಲೈ*ಗಿಕ ಸಮಸ್ಯೆ ತಡೆಗಟ್ಟುವ ವರೆಗೆ; ಈ ತರಕಾರಿಯೇ best ಮೆಡಿಸಿನ್..!

cancer ನಿಂದ ಪುರುಷರ ಲೈ*ಗಿಕ ಸಮಸ್ಯೆ ತಡೆಗಟ್ಟುವ ವರೆಗೆ; ಈ ತರಕಾರಿಯೇ best ಮೆಡಿಸಿನ್..!

ಸಿಹಿ ಕುಂಬಳದ ಆರೋಗ್ಯ ಪ್ರಯೋಜನ: ಸಿಹಿ ಕುಂಬಳದ ಬೀಜವನ್ನು ಜನ ಯಥೇಚ್ಛವಾಗಿ ಸೇವನೆ ಮಾಡುವುದನ್ನು ನೋಡಿರಬಹುದು. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಹಾಗಾಗಿ ಇದರ ಸೇವನೆ ಮಾಡುತ್ತಾರೆ. ಆದ್ರೆ ಅದರಕ್ಕಿಂತ ಹೆಚ್ಚಿನ ಪ್ರಯೋಜನ ಸಿಹಿ ಕುಂಬಳದಲ್ಲಿಯೇ ಇದೆ ಎಂಬುದು ಜನರಿಗೆ ತಿಳಿದಿಲ್ಲ. ಹೌದು, ನೈಸರ್ಗಿಕ ಆಹಾರಗಳ ಪೈಕಿ ಸಿಹಿ ಕುಂಬಳಕಾಯಿ ಮನುಷ್ಯನ ಬೆಸ್ಟ್ ಫ್ರೆಂಡ್. ಸಾಮಾನ್ಯವಾಗಿ ವರ್ಷಪೂರ್ತಿ ದೊರೆಯುವ ಈ ತರಕಾರಿ ಪುರುಷರ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಹೇಗೆ ಅಂತೀರಾ?

ಆರೋಗ್ಯ ಪ್ರತಿಯೊಬ್ಬ ಮನುಷ್ಯನಿಗೂ ಅವಶ್ಯಕ. ಇದನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುವ ಅಗತ್ಯವಿಲ್ಲ. ಆದರೆ ನಾವು ಮಾಡುವಂತಹ ಕೆಲಸಗಳನ್ನು ಸರಿಯಾಗಿ ಮಾಡಿದರೆ ಸಾಕಾಗುತ್ತದೆ. ಹಾಗೆಯೇ ಪ್ರತಿನಿತ್ಯ ಯೋಗ, ವ್ಯಾಯಾಮ ಧ್ಯಾನ ಮಾಡುವದರ ಜೊತೆ ಜೊತೆಗೆ ಉತ್ತಮ ಆಹಾರ ಪದ್ದತಿ ಅನುಸರಿಸುವುದು ಕೂಡ ಬಹಳ ಮುಖ್ಯವಾಗುತ್ತದೆ. ಇನ್ನು ನೈಸರ್ಗಿಕ ಆಹಾರಗಳ ಪೈಕಿ ಸಿಹಿ ಕುಂಬಳಕಾಯಿ ಮನುಷ್ಯನ ಬೆಸ್ಟ್ ಫ್ರೆಂಡ್ ಎಂದರೆ ತಪ್ಪಾಗಲಾರದು. ಆದರೆ ಇವುಗಳ ಬಗ್ಗೆ ಸರಿಯಾದ ಮಾಹಿತಿ ಇರದ ಕಾರಣ ಇವುಗಳ ಸೇವನೆ ಮಾಡುವುದಕ್ಕೆ ಜನ ಅಷ್ಟು ಮುತುವರ್ಜಿ ವಹಿಸುವುದಿಲ್ಲ. ಕೆಲವೆಡೆ ಚೀನಿಕಾಯಿ ಎಂದೂ ಕರೆಯಲ್ಪಡುವ ಸಿಹಿ ಕುಂಬಳಕಾಯಿ ವರ್ಷಪೂರ್ತಿ ಲಭ್ಯವಿದ್ದು ಪೋಷಕಾಂಶಗಳಿಂದ ಕೂಡಿರುತ್ತವೆ. ನಿಜ ಹೇಳಬೇಕೆಂದರೆ ಇದರಿಂದ ಪುರುಷರ ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ಸಿಗುತ್ತದೆ. ಹೇಗೆ ಅಂತೀರಾ?

ಸಿಹಿ ಕುಂಬಳಕಾಯಿ ಅಥವಾ ಕೆಂಪು ಕುಂಬಳಕಾಯಿ ಇದು ಪೌಷ್ಟಿಕಾಂಶ ಭರಿತ ತರಕಾರಿಯಾಗಿದೆ. ಇದು ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಕಾರಿ. ಮಾತ್ರವಲ್ಲ ಪುರುಷರ ಫಲವತ್ತತೆ ಹೆಚ್ಚಿಸಲು ಕೂಡ ಇದು ಸಹಾಯ ಮಾಡುತ್ತದೆ. ಇಂಡಿಯನ್ ಜರ್ನಲ್ ಆಫ್ ಯೂರಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸಿಹಿ ಕುಂಬಳಕಾಯಿ ಬೀಜ ಸೇವನೆಯು ಪ್ರಾಸ್ಟೇಟ್ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ಪುರುಷರ ಲೈಂಗಿಕ ಆರೋಗ್ಯಕ್ಕೆ ಬಹಳ ಮುಖ್ಯವಾಗಿದ್ದು ಇದನ್ನು ಸಾಮಾನ್ಯವಾಗಿ ಪ್ರಾಸ್ಟೇಟ್ ಗ್ರಂಥಿಯನ್ನು ಬಲಪಡಿಸಲು ಮತ್ತು ಪುರುಷರಲ್ಲಿನ ಆರೋಗ್ಯಕರ ಹಾರ್ಮೋನ್ ಕಾರ್ಯವನ್ನು ಉತ್ತೇಜಿಸಲು ಬಳಸಲಾಗುತ್ತದೆ.

ಸಿಹಿ ಕುಂಬಳಕಾಯಿಯ ಪ್ರಯೋಜನಗಳು:

ಕಣ್ಣಿನ ಆರೋಗ್ಯ:

ಸಿಹಿ ಕುಂಬಳಕಾಯಿಯಲ್ಲಿರುವ ಬೀಟಾ ಕ್ಯಾರೋಟಿನ್ ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು.

ಕ್ಯಾನ್ಸರ್ ತಡೆಗಟ್ಟುವಿಕೆ:

ಸಿಹಿ ಕುಂಬಳಕಾಯಿ ಬೀಜಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿರುವುದರಿಂದ, ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಹೃದಯದ ಆರೋಗ್ಯ:

ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಕರಗುವ ನಾರುಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ.

ಚಯಾಪಚಯ ಶಕ್ತಿ ವೃದ್ಧಿ:

ಸಿಹಿ ಕುಂಬಳಕಾಯಿ ಬೀಜಗಳು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ:

ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದೆ.

ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ:

ಸಿಹಿ ಕುಂಬಳಕಾಯಿ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹಾಗಾಗಿ ಸಿಹಿ ಕುಂಬಳಕಾಯಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಹಾಗಂತ ಅಗತ್ಯಕ್ಕಿಂತ ಹೆಚ್ಚು ಇದರ ಸೇವನೆ ಮಾಡಬೇಡಿ. ಬದಲಾಗಿ ನಿಯಮಿತವಾಗಿ ಇದರ ಸೇವನೆ ಮಾಡಿ. ಇದರಿಂದ ಸಿಗುವ ಪ್ರಯೋಜನಗಳನ್ನು ಪಡೆದುಕೊಳ್ಳಿ.

Leave a Reply

Your email address will not be published. Required fields are marked *