ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಜುಲೈ 2 47ನೇ ಜನ್ಮದಿನ. ಈ ಬಾರಿ ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ‘ಪಿನಾಕ’ ಮತ್ತು ‘ಯುವರ್ ಸಿನ್ಸಿಯರ್ಲಿ’ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿರುವುದರಿಂದ ಅವರು ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯವಿಲ್ಲ. ಆದಾಗ್ಯೂ, ಅಭಿಮಾನಿಗಳು ಮನೆಗೆ ಬಾರದೆ, ಬದಲಾಗಿ ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ತಮ್ಮ ಆಶೀರ್ವಾದವನ್ನು ಕಳುಹಿಸುವಂತೆ ಅವರು ವಿನಂತಿಸಿದ್ದಾರೆ.

ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಜುಲೈ 2 ಜನ್ಮದಿನ. ಅವರಿಗೆ 47 ವರ್ಷ ತುಂಬಲಿದೆ. ಪ್ರತಿ ಬಾರಿ ಬರ್ತ್ಡೇ ಬಂದಾಗ ಅಭಿಮಾನಿಗಳು ಅವರ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ನೋಡುತ್ತಾರೆ. ಆ ರೀತಿ ಕಾದು ಕುಳಿತ ಅಭಿಮಾನಿಗಳಿಗೆ ಈ ಬಾರಿ ನಿರಾಸೆ ಆಗಿದೆ. ಈ ವರ್ಷ ಬರ್ತ್ಡೇನ ಫ್ಯಾನ್ಸ್ ಜೊತೆ ಆಚರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗಣೇಶ್ ಹೇಳಿದ್ದಾರೆ. ಇದು ಫ್ಯಾನ್ಸ್ಗೆ ಬೇಸರ ಮೂಡಿದೆ.
ಅಭಿಮಾನಿಗಳಿಗೆ ನೆಚ್ಚಿನ ನಟನ ಬರ್ತ್ಡೇ ಬಂತು ಎಂದರೆ ಅದು ಹಬ್ಬವೇ ಸರಿ. ಆ ಸಂದರ್ಭದಲ್ಲಿ ಅಭಿಮಾನಿಗಳು ಹೀರೋ ಜೊತೆ ಕೇಕ್ ಕಟ್ ಮಾಡಿ, ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂದು ಬಯಸುತ್ತಾರೆ. ಈ ಬಾರಿ ಗಣೇಶ್ ಫ್ಯಾನ್ಸ್ ಕೂಡ ಈ ಅವಕಾಶಕ್ಕಾಗಿ ಕಾದಿದ್ದರು. ಆದರೆ, ಅವರಿಗೆ ನಿರಾಸೆ ಆಗಿದೆ. ಈ ಬಗ್ಗೆ ಗಣೇಶ್ ಪೋಸ್ಟ್ ಮಾಡಿದ್ದಾರೆ.

