OC, CC ಇಲ್ಲದೇ ಆನ್ ಲೈನ್​​ ನಲ್ಲಿಯೇ ಬೆಸ್ಕಾಂನಿಂದ ವಿದ್ಯುತ್​​ ಹೊಸ ಸಂಪರ್ಕ ಪಡೆಯಿರಿ. |  Bescom

OC, CC ಇಲ್ಲದೇ ಆನ್ ಲೈನ್​​ ನಲ್ಲಿಯೇ ಬೆಸ್ಕಾಂನಿಂದ ವಿದ್ಯುತ್​​ ಹೊಸ ಸಂಪರ್ಕ ಪಡೆಯಿರಿ. |  Bescom

ಬೆಂಗಳೂರು :ಕಳೆದ ನಾಲ್ಕೂ ಚಿಲ್ಲರೆ ತಿಂಗಳಿಂದ ಬೆಸ್ಕಾಂ(ನಿಂದ ಹೊಸ ವಿದ್ಯುತ್ ಸಂಪರ್ಕ ಪಡೆಯುವುದಕ್ಕೆ ಇದ್ದ ಒದ್ದಾಟ ಮುಗಿದಿದೆ.  ವಿದ್ಯುತ್​ ಹೊಸ ಸಂಪರ್ಕಕ್ಕೆ ಆನ್​​ಲೈನ್​​ಲೇ ಅರ್ಜಿ ಸಲ್ಲಿಸಿ ಕಲೆಕ್ಷನ್ ಪಡೆದುಕೊಳ್ಳಬಹುದಾಗಿದೆ. ಆದರೆ ಈ ಬಗ್ಗೆ ಸರ್ಕಾರದಿಂದಾಗಲೀ ಬೆಸ್ಕಾಂನಿಂದಾಗಲೀ ಅಧಿಕೃತವಾದ ಹೇಳಿಕೆ ಬಂದಿಲ್ಲ ಅಥವಾ ತಿಳಿದುಬಂದಿಲ್ಲ. ಗ್ರಾಹಕರೊಬ್ಬರು ಮಾಹಿತಿ ಹಂಚಿಕೊಂಡಿದ್ದು, ತಾವು ಈಗಾಗಲೇ ಪಡೆದಂಥ ತಾತ್ಕಾಲಿಕ ಸಂಪರ್ಕಕ್ಕೆ ಶಾಶ್ವತವಾಗಿ ಸೇವೆಗಾಗಿ ಅಪ್ಲೈ ಮಾಡಿದಂಥ ದಾಖಲೆಯನ್ನು ಸಹ ಕೊಟ್ಟಿದ್ದಾರೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಸ್ವತಃ ಅವರಿಗೇ ಕೆಲವು ಪ್ರಶ್ನೆಗಳು ಇವೆ. ಮೊದಲನೆಯದಾಗಿ ಬೆಸ್ಕಾಂ ಸೇವೆಗಳನ್ನು ಈ ಹಿಂದೆ ಗುತ್ತಿಗೆದಾರರ ಮೂಲಕವೇ ಅಪ್ಲೈ ಮಾಡಬೇಕಿತ್ತು. ಇನ್ನು ಎರಡನೆಯದು ಆಕ್ಯುಪೆನ್ಸಿ ಸರ್ಟಿಫಿಕೇಟ್ (ಒಸಿ), ಕಂಪ್ಲೀಷನ್ ಸರ್ಟಿಫಿಕೇಟ್ (ಸಿಸಿ) ಇಲ್ಲದೆ ಬೆಸ್ಕಾಂ ಸಂಪರ್ಕವನ್ನು ನೀಡುವುದನ್ನೇ ನಿಲ್ಲಿಸಿಬಿಟ್ಟಿತ್ತು. ಹೀಗೆ ಏಕಾಏಕಿ ತಮ್ಮ ಗಮನಕ್ಕೆ ಬಂದ ಸಂಗತಿಯನ್ನು ಮಾಧ್ಯಮದ ಗಮನಕ್ಕೂ ತಂದು, ಇತರರಿಗೆ ಸಹಾಯ ಆಗಲಿ ಮತ್ತು ತಮಗಿರುವ ಸಂದೇಹ ನಿವಾರಣೆ ಆಗಲಿ ಎಂಬುದು ಅವರ ಇರಾದೆಯಾಗಿತ್ತು.

ಈ ಮೇಲ್ಕಂಡ ವೆಬ್ ಅಡ್ರೆಸ್ ಕ್ಲಿಕ್ ಮಾಡಿದಲ್ಲಿ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅದರಲ್ಲಿ ಎರಡು ಆಯ್ಕೆಗಳು ಇವೆ. ಸಿಂಗಲ್ (ಏಕ), ಮಲ್ಟಿಪಲ್ (ಬಹು) ಎಂದಿದೆ.

  • ಒಂದು ವೇಳೆ ಈಗಾಗಲೇ ತಾತ್ಕಾಲಿಕ ಸಂಪರ್ಕ ತೆಗೆದುಕೊಂಡಿದ್ದಲ್ಲಿ ಅದರ ಖಾತೆ ಮಾಹಿತಿಯನ್ನು, ಖಾತೆ ಸಂಖ್ಯೆಯನ್ನು ನಮೂದಿಸಬೇಕು.
  •  ಆ ನಂತರ ಅರ್ಜಿದಾರರ ಹೆಸರು, ಇಮೇಲ್ ಐಡಿ, ಫೋನ್ ನಂಬರ್, ಪಾನ್- ಡ್ರೈವಿಂಗ್ ಲೈಸೆನ್ಸ್- ಪಾಸ್ ಪೋರ್ಟ್- ಟ್ಯಾನ್- ಆಧಾರ್ ಇವುಗಳ ಪೈಕಿ ಒಂದರ ಸಂಖ್ಯೆಯನ್ನು ನಮೂದಿಸಬೇಕು.
  •  ಮನೆಯ ವಿಳಾಸದ ವಿವರಗಳು ಹಾಕಬೇಕು.
  •  ಗ್ರಾಹಕರನ್ನು ಸಂಪರ್ಕಿಸುವ ಸಲುವಾಗಿ ವಿಳಾಸದ ಮಾಹಿತಿ ಒದಗಿಸಬೇಕು.
  •  ಸಂಪರ್ಕ ಪಡೆಯಲು ಇಚ್ಛಿಸುವ ಸ್ಥಳದ ಅಕ್ಷಾಂಶ, ರೇಖಾಂಶದ ಮಾಹಿತಿ ಹಾಗೂ ಮನೆಯನ್ನು ಕಟ್ಟಿರುವುದು ಎಷ್ಟು ಚದರಡಿ ಎಂಬುದನ್ನು ಚದರ ಮೀಟರ್ ಲೆಕ್ಕದಲ್ಲಿ ನಮೂದಿಸಬೇಕು.
  •  ಆನಂತರ ಇತರೆ ಮಾಹಿತಿಗಳು ಎಂಬ ಪೇಜ್ ನಲ್ಲಿ ಯಾವುದಕ್ಕೆ ವಿದ್ಯುತ್ ಸಂಪರ್ಕ ಬೇಕಾಗಿದೆ (ಉದಾ: ಮನೆ, ವಾಣಿಜ್ಯ ಉದ್ದೇಶವೋ, ಇವಿಸಿ ಸ್ಟೇಷನ್ ಹೀಗೆ ಮೂರು ಆಯ್ಕೆಗಳಿವೆ), ಸ್ಥಳ ಎಲ್ಲಿದೆ, ಉಪವಿಭಾಗ ಕಚೇರಿ ಯಾವುದು, ಸೆಕ್ಷನ್ ಆಫೀಸ್ ಯಾವುದು, ಎಷ್ಟು ಲೋಡ್, ಯಾವ ಫೇಸ್, ಎಇಎಚ್ ಅಥವಾ ಎಇಎಚ್ ಅಲ್ಲದ್ದ, ಎಷ್ಟು ವೊಲ್ಟೇಜ್ ಮತ್ತು ಯಾವ ರೀತಿಯ ಪವರ್ ಎಂಬ ವಿವರಗಳನ್ನು ಭರ್ತಿ ಮಾಡಬೇಕು.
  • ಕೊನೆಯದಾಗಿ ಐಡೆಂಟಿಟಿ ಪ್ರೂಫ್ ಆಗಿ ಪಾನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಅಥವಾ ಪಾಸ್ ಪೋರ್ಟ್ ಅಥವಾ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಇವುಗಳ ಪೈಕಿ ಒಂದನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಬೇಕು. ಪ್ರೂಫ್ ಆಫ್ ಆಕ್ಯುಪೆನ್ಸಿ ಅಂತ ಸೇಲ್ ಡೀಡ್ ಅಥವಾ ಖಾತಾ ಪ್ರಮಾಣ ಪತ್ರ ಅಥವಾ ತೆರಿಗೆ ಪಾವತಿಸಿದ ಪ್ರಮಾಣಪತ್ರವನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಬೇಕು.
  •  ಇನ್ನು ಕಂಪ್ಲಿಷನ್ ಸರ್ಟಿಫಿಕೇಟ್ ಅಂತ ಇದೇ ಪುಟದಲ್ಲಿದೆ. ಆದರೆ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತುಂಬುವುದು ಕಡ್ಡಾಯ ಅಲ್ಲ.

ಇಲ್ಲಿ ನೆನಪಿರಬೇಕಾದ ಮುಖ್ಯ ಸಂಗತಿ ಏನೆಂದರೆ, ಇಲ್ಲಿರುವ ಎಲ್ಲ ಮಾಹಿತಿಗಳನ್ನು ಕಡ್ಡಾಯವಾಗಿ ಭರ್ತಿ ಮಾಡಲೇಬೇಕು ಎಂದಿಲ್ಲ. ಕೆಲವು ಆಪ್ಷನಲ್ ಆಗಿದೆ. ಇನ್ನು ಕೆಲವು ಕಡ್ಡಾಯವಾಗಿದೆ. ಈ ಎಲ್ಲ ಮಾಹಿತಿ ಭರ್ತಿ ಮಾಡಿದ ಮೇಲೆ ಆನ್ ಲೈನ್ ನಲ್ಲಿಯೇ ಶುಲ್ಕ ಪಾವತಿಸಬೇಕು.

ಈ ಹಿಂದೆ ಬೆಸ್ಕಾಂ ಗುತ್ತಿಗೆದಾರರ ಮೂಲಕವೇ ಹೊಸದಾಗಿ ಸಂಪರ್ಕಕ್ಕಾಗಿ ಅಪ್ಲೈ ಮಾಡಬೇಕಿತ್ತು. ಆದರೆ ಈಗ ಇಲ್ಲಿನ ಮಾಹಿತಿಗಳನ್ನು ಮನೆಯ ಮಾಲೀಕರೇ ಭರ್ತಿ ಮಾಡಬಹುದು ಹಾಗೂ ಅಪ್ಲೈ ಮಾಡಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *