ನವದೆಹಲಿ: ಒಲಿಂಪಿಕ್ಸ್ 2024 ರ ಕುಸ್ತಿ ಫೈನಲ್ ನಿಂದ ತೂಕ ಹೆಚ್ಚಳದ ಕಾರಣ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಅಥವಾ ರಾಜ್ಯಸಭಾ ಸದಸ್ಯತ್ವ ನೀಡಬೇಕೆಂದು ತೃಣಮೂಲ ಕಾಂಗ್ರೆಸ್ ಆಗ್ರಹಿಸಿದೆ.
ಒಲಿಂಪಿಕ್ಸ್ ನಲ್ಲಿ ಆಕೆಯ ಕುಸ್ತಿ ಪ್ರದರ್ಶನವನ್ನು ಪರಿಗಣಿಸಿ ಆಕೆಗೆ ಭಾರತ ರತ್ನ ನೀಡಬೇಕು ಎಂದು ಟಿಎಂಸಿ ಹೇಳಿದೆ.
ವಿನೇಶ್ ಫೋಗಟ್ ಅನರ್ಹಗೊಂಡಿರುವುದಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಕ್ರಿಯಿಸಿ, ದುರದೃಷ್ಟಕರ ಎಂದು ಹೇಳಿದ್ದರು ಅಷ್ಟೇ ಅಲ್ಲದೇ ಭಾರತದ 1.4 ಬಿಲಿಯನ್ ಜನತೆಗೆ ಆಕೆ ಚಾಂಪಿನ್ ಗಳ ಚಾಂಪಿಯನ್ ಹಾಗೂ ದೇಶದ ಹೆಮ್ಮೆ ಎಂದು ಹೇಳಿದ್ದರು.
ಸರ್ಕಾರ ಹಾಗೂ ವಿಪಕ್ಷಗಳು ಒಗ್ಗೂಡಿ ವಿನೇಶ್ ಗೆ ಭಾರತ ರತ್ನ ಅಥವಾ ರಾಷ್ಟ್ರಪತಿಗಳ ಮೂಲಕ ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಬಗ್ಗೆ ನಿರ್ಧರಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ಆಗ್ರಹಿಸಿದೆ.