ಕೊಡಗು || ಗ್ಲಾಸ್ ಬ್ರಿಡ್ಜ್ಗಳನ್ನು ಮುಚ್ಚುವಂತೆ ಆಗ್ರಹ : ಮಾಲೀಕರಿಗೆ ಸಂಕಷ್ಟ

ಕೊಡಗು || ಗ್ಲಾಸ್ ಬ್ರಿಡ್ಜ್ಗಳನ್ನು ಮುಚ್ಚುವಂತೆ ಆಗ್ರಹ : ಮಾಲೀಕರಿಗೆ ಸಂಕಷ್ಟ

ಕೊಡಗುಜಿಲ್ಲೆಯಲ್ಲಿ ತಲೆ ಎತ್ತಿರುವ ಹಾಗೂ ತಲೆ ಎತ್ತಲಿರುವ ಗ್ಲಾಸ್ ಬ್ರಿಡ್ಜ್ಗಳ ವಿರುದ್ಧ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ನಡೆಸುತ್ತಿರುವ ಹೋರಾಟ ಮುಂದುವರೆದಿದೆ. ಇದೀಗ, ಹೋರಾಟಗಾರರು ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ. ತಲೆ ಎತ್ತಿರುವ ಗ್ಲಾಸ್ ಬ್ರಿಡ್ಜ್ಗಳನ್ನು ಬಂದ್ ಮಾಡಿಸುವಂತೆ ಆಗ್ರಹಿಸಲಿದ್ದಾರೆ. ಇದರಿಂದಾಗಿ ಕೊಟ್ಯಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ಗ್ಲಾಸ್ ಬ್ರಿಡ್ಜ್ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ.

ಕೊಡಗು ಜಿಲ್ಲೆಯ ಪ್ರವಾಸೋಧ್ಯಮ ಕಳೆದ ಕೆಲವು ತಿಂಗಳಿನಿಂದ ಹೊಸತನಕ್ಕೆ ತೆರದುಕೊಳ್ಳುತ್ತ್ತಿದೆ. ಹಾರಂಗಿ ಅಡ್ವೆಂಚರ್ ವಾಟರ್ ಗೇಮ್ಸ್, ಗ್ರೇಟರ್ ರಾಜಾಸೀಟ್ ಅಡ್ವೆಂಚರ್ಸ್ ಗೇಮ್ಸ್ ಹೀಗೆ ಹತ್ತು ಹಲವು ಚಟುವಟಿಕೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಇದೀಗ ಅವುಗಳ ಸಾಲಿಗೆ ಸೇರಿರುವುದು ಗ್ಲಾಸ್ ಬ್ರಿಡ್ಜ್ಗಳು. ಈಗಾಗಲೇ ಜಿಲ್ಲೆಯ ಎರಡು ಕಡೆ ಗ್ಲಾಸ್ ಬ್ರಿಡ್ಜ್ಗಳು ತಲೆ ಎತ್ತಿವೆ. ಈ ಗ್ಲಾಸ್ ಬ್ರಿಡ್ಜ್ಗಳು ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆದಿವೆ.

 ಜೂನ್ ಮತ್ತು ಜುಲೈ ತಿಂಗಳಲ್ಲಿ ಭಾರೀ ಮಳೆ ಬಂದ ಸಂದರ್ಭದಲ್ಲಿ ಹಲವು ಕಡೆ ಲಘು ಭೂ ಕುಸಿತಗಳು ಸಂಬವಿಸಿದ್ದವು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ ರಾಜಾ ಗ್ಲಾಸ್ ಬ್ರಿಡ್ಜ್ಗಳನ್ನು ಮುಚ್ಚುವಂತೆ ಆದೇಶಿಸಿದ್ದರು. ಅದರಂತೆ ಜಿಲ್ಲೆಯ ಎರಡು ಗ್ಲಾಸ್ ಬ್ರಿಡ್ಜ್ಗಳು ಬಂದ್ ಆಗಿದ್ದವು. ಮುಂದಿನ ಆದೇಶದವರೆಗೆ ಗ್ಲಾಸ್ ಬ್ರಿಡ್ಜ್ಗಳನ್ನು ತೆರೆಯದಂತೆ ಸೂಚಿಸಿದ್ದರು. ಈ ಎರಡು ಗ್ಲಾಸ್ ಬ್ರಿಡ್ಜ್ಗಳು ಹಾಗೂ ತಲಕಾವೇರಿ ಮತ್ತು ಭಾಗಮಂಡಲ ಬಳಿಯ ಗ್ಲಾಸ್ ಬ್ರಿಡ್ಜ್ಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಧೋಳ್ಪಾಡಿ ಯಶ್ವಂತ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದಕ್ಕೆ ಪರಿಸರವಾದಿಗಳಿಂದಲೂ ಬೆಂಬಲ ವ್ಯಕ್ತವಾಗಿದೆ.  ಉಡತ್ ಮೊಟ್ಟೆಯ ಪಪ್ಪಿಸ್ ಗ್ಲಾಸ್ ಬ್ರಿಡ್ಜ್ನಿಂದಾಗಿ ಮಡಿಕೇರಿ-ಭಾಗಮಂಡಲ ರಸ್ತೆಯಲ್ಲಿ ವಿಪರೀತ ಟ್ರಾಫಿಕ ಜಾಮ್ ಆಗಿದೆ. ಅಪಘಾತಗಳಾಗುತ್ತಿವೆ. ಈ ಪ್ರದೇಶ 2018ರಲ್ಲಿ ಭೂ ಕುಸಿತಕ್ಕೆ ತುತ್ತಾಗಿದ್ದು, ಇಲ್ಲಿ ಗ್ಲಾಸ್ ಬ್ರಿಡ್ಜ್ ಬೇಡವೇ ಬೇಡ ಎಂದು ದುರುದಾರರು ಒತ್ತಾಯಿಸಿದ್ದಾರೆ. ಇಲ್ಲಿನ ವಾತಾವರಣ ಗ್ಲಾಸ್ ಬ್ರಿಡ್ಜ್ನ್ನು ತಡೆಯುವಷ್ಟು ಸಶಕ್ತವಾಗಿಲ್ಲ. ಹಾಗಾಗಿ ಇಲ್ಲಿ ಭೂ ಕುಸಿತವಾದರೆ ಬೆಟ್ಟದ ತಪ್ಪಲಿನ ಮನೆಗಳು ಕಾಫಿ ತೋಟಗಳಿಗೆ ಅಪಾರ ಹಾನಿಯಾಗುತ್ತದೆ ಎಂದು ಪರಿಸರವಾದಿಗಳು ಹೇಳಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಮುಂದಿನ ಆದೇಶದವರೆಗೆ ಗ್ಲಾಸ್ ಬ್ರಿಡ್ಜ್ಗಳ ಪ್ರವೇಶ ನಿರ್ಬಂಧಿಸಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *