ದಿನ ಕಳೆದಂತೆ ಚಿನ್ನದ ಮೇಲಿನ ಆಸೆ ಜನರಿಗೆ ಕಡಿಮೆಯಾಗುತ್ತಿಲ್ಲ. ಮತ್ತೊಂದೆಡೆ ಚಿನ್ನದ ದರವೂ ಇಳಿಯುತ್ತಿಲ್ಲ. ಮದುವೆ ಹಾಗೂ ಹಬ್ಬದ ಸೀಸನ್ ಶುರುವಾಗುತ್ತಿದ್ದಂತೆ ಚಿನ್ನದ ದರ ಕೂಡ ಸದ್ದಿಲ್ಲದೆ ಏರಿಕೆ ಕಾಣುತ್ತಿದೆ. ಕಳೆದ ಒಂದು ತಿಂಗಳಿಂದ ಬ್ರೇಕ್ ಪಡೆದಿದ್ದ ಮದುವೆ ಸಮಾರಂಭಗಳು ಅದ್ಧೂರಿಯಾಗಿ ನೆರವೇರುತ್ತಿವೆ. ಈ ಹಿನ್ನೆಲೆ ಚಿನ್ನ ಖರೀದಿ ಭರಾಟೆ ಕೂಡ ಜೋರಾಗಿದೆ. ಹಾಗಾದರೆ ಇಂದಿನ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ? ಎಂಬುದನ್ನು ಮುಂದೆ ತಿಳಿಯಿರಿ..
ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ ನೋಡುವುದಾದರೆ, 1 ಗ್ರಾಂ.ಗೆ 8,652 ರೂಪಾಯಿ ಇದೆ. 8 ಗ್ರಾಂಗೆ 69,216 ರೂಪಾಯಿ ಇದೆ. 10 ಗ್ರಾಂ ಚಿನ್ನಕ್ಕೆ 86,520 ರೂಪಾಯಿ ದರವಿದೆ. 100 ಗ್ರಾಂ ಚಿನ್ನದ ಬೆಲೆ 8,65,200 ರೂಪಾಯಿ ಇದೆ
ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 7,931 ರೂಪಾಯಿ ಇದೆ. 8 ಗ್ರಾಂಗೆ 63,448 ರೂಪಾಯಿ, 10 ಗ್ರಾಂಗೆ 79,310 ರೂಪಾಯಿ, 100 ಗ್ರಾಂಗೆ 7,93,100 ರೂಪಾಯಿ ಇದೆ. ಪ್ರತಿ ಗ್ರಾಂ 18 ಕ್ಯಾರೆಟ್ ಚಿನ್ನದ ದರವು 8,652 ರೂಪಾಯಿ ಇದ್ದರೆ, 8 ಗ್ರಾಂಗೆ 51,912 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 6,48,900 ರೂಪಾಯಿವರೆಗೆ ಇದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿನ ಏರಿಕೆಯಿಂದಾಗಿ ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳು ವರ್ಷವಿಡೀ ಏರುಗತಿಯಲ್ಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀವು ಚಿನ್ನವನ್ನು ಖರೀದಿಸಲು ಹಲವು ಸ್ಥಳಗಳಿದ್ದು, ಪ್ರಮುಖವಾಗಿ ಎಂಜಿ ರಸ್ತೆಯಲ್ಲಿ ಹಲವು ಆಭರಣ ಮಳಿಗೆಗಳಿವೆ. ಜಯನಗರದಲ್ಲಿ ಭೀಮಾ ಜ್ಯುವೆಲರ್ಸ್, ಆರ್.ಆರ್ ಗೋಲ್ಡ್ ಪ್ಯಾಲೇಸ್, ಡಿಕನ್ಸನ್ ರಸ್ತೆಯಲ್ಲಿ ಜೋಸ್ ಅಲುಕ್ಕಾಸ್, ನಗರದಾದ್ಯಂತ ಇರುವ ತನಿಷ್ಕ್ ಮಳಿಗೆಗಳು ಚಿನ್ನದ ಖರೀದಿಗೆ ಸೂಕ್ತ ಸ್ಥಳಗಳು. ನೀವು ಚಿನ್ನದ ಆಭರಣಗಳನ್ನು ಆನ್ಲೈನ್ನಲ್ಲಿಯೂ ಖರೀದಿಸಬಹುದು.