ಬೆಂಗಳೂರು : ಪೊಲೀಸ್ ಇಲಾಖೆಯ ಫಾಲೋಯರ್ ಹುದ್ದೆಯಿಂದ ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾ ನಿರೀಕ್ಷಕರು ಹುದ್ದೆಯಲ್ಲಿನ 93,449 ಅಧಿಕಾರಿ / ಸಿಬ್ಬಂದಿಗಳಿಗೆ ವಿಶೇಷ ಗುಂಪು ವಿಮಾ ಮೊತ್ತ ₹20 ಲಕ್ಷದಿಂದ ₹50 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.
ಎಫ್ಐಆರ್ ನೋಂದಣಿಯಿಂದ ಪ್ರಕರಣದ ವಿಲೇವಾರಿವರೆಗಿನ ಕಾರ್ಯ ಶೀಘ್ರವಾಗಿ ನಿರ್ವಹಿಸಲು ಮತ್ತು ನಾಗರಿಕರಿಗೆ ಹೆಚ್ಚಿನ ಸೇವೆಗಳನ್ನು ಒದಗಿಸಲು ಪೊಲೀಸ್ ಐ.ಟಿ. ವಿ2 ತಂತ್ರಾಂಶ ವಿನ್ಯಾಸ ಸುಳ್ಳು ಸುದ್ದಿಗಳ ಮೇಲೆ ನಿಗಾ ವಹಿಸಲು ವಿವಿಧ ಇಲಾಖೆಗಳ ಮತ್ತು ಸಾಮಾಜಿಕ ವಲಯಗಳ ಪ್ರತಿನಿಧಿಗಳನ್ನು ಒಳಗೊಂಡ MDCC ಸಮಿತಿ ರಚನೆ
ಸಂಪುಟದ ಸಚಿವರನ್ನು ಒಳಗೊಂಡಂತೆ ಸೈಬರ್ ಕ್ರೈಮ್ಗಳ ನಿರ್ವಹಣೆಯ ಮೇಲುಸ್ತುವಾರಿಗಾಗಿ ವಿಶೇಷ ಅಧಿಕಾರಿ ಸಮಿತಿ (SPECIAL EMPOWERED COMMITTEE) ರಚನೆ ಮಾಡಲಾಗಿದೆ.