ತುಮಕೂರು ಜಿಲ್ಲೆಯ ಕ್ರೀಡಾಪಟುಗಳಿಗೆ ಗುಡ್ ನ್ಯೂಸ್ : ದಸರಾ ಕ್ರೀಡಾಕೂಟಕ್ಕೆ ಡೇಟ್ ಫಿಕ್ಸ್

ತುಮಕೂರು ಜಿಲ್ಲೆಯ ಕ್ರೀಡಾಪಟುಗಳಿಗೆ ಗುಡ್ ನ್ಯೂಸ್ : ದಸರಾ ಕ್ರೀಡಾಕೂಟಕ್ಕೆ ಡೇಟ್ ಫಿಕ್ಸ್

ತುಮಕೂರು : ಜಿಲ್ಲೆಯ 10 ತಾಲ್ಲೂಕುಗಳಲ್ಲಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಸೆಪ್ಟೆಂಬರ್ 21 ರಿಂದ 24ರವರೆಗೆ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.           

ದಸರಾ ಕ್ರೀಡಾಕೂಟದ ಸ್ಪರ್ಧೆಗಳು ಸೆಪ್ಟೆಂಬರ್ 21ರಂದು ಜಿಲ್ಲೆಯ ಪಾವಗಡ ಹಾಗೂ ಕೊರಟಗೆರೆ ತಾಲ್ಲೂಕು ಕ್ರೀಡಾಂಗಣ; ಸೆಪ್ಟೆಂಬರ್ 23ರಂದು ಕುಣಿಗಲ್ ತಾಲ್ಲೂಕು ಕ್ರೀಡಾಂಗಣ, ಶಿರಾ ತಾಲ್ಲೂಕಿನ ಶ್ರೀ ವಿವೇಕಾನಂದ ತಾಲ್ಲೂಕು ಕ್ರೀಡಾಂಗಣ, ಚಿ.ನಾ.ಹಳ್ಳಿ ತಾಲ್ಲೂಕು ಕ್ರೀಡಾಂಗಣ ಹಾಗೂ ತುರುವೇಕೆರೆ  ತಾಲ್ಲೂಕು ಕ್ರೀಡಾಂಗಣ; ಸೆ.24ರಂದು  ತಿಪಟೂರು ಕಲ್ಪತರು ತಾಲ್ಲೂಕು ಕ್ರೀಡಾಂಗಣ, ತುಮಕೂರು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ, ಗುಬ್ಬಿ ಸರ್ಕಾರಿ  ಪದವಿ ಪೂರ್ವ ಕಾಲೇಜು ಮೈದಾನ ಹಾಗೂ ಮಧುಗಿರಿ ರಾಜೀವ್ ಗಾಂಧಿ ತಾಲ್ಲೂಕು ಕ್ರೀಡಾಂಗಣದಲ್ಲಿ  ನಡೆಯಲಿದ್ದು, ಆಸಕ್ತ ಕ್ರೀಡಾಕೂಟ ನಡೆಯುವ ಒಂದು ದಿನ ಮುಂಚಿತವಾಗಿ ನೋಂದಾಯಿಸಿಕೊಳ್ಳತಕ್ಕದ್ದು.

ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಪಾವಗಡ ಮೊ.ಸಂ.9741626791; ಕೊರಟಗೆರೆ-8217043366; ಕುಣಿಗಲ್-7259938630; ಶಿರಾ-9731526412; ಚಿ.ನಾ.ಹಳ್ಳಿ-9880440175; ತುರುವೇಕೆರೆ-6363406839; ತಿಪಟೂರು-8660356249; ತುಮಕೂರು-6360720198; ಗುಬ್ಬಿ-7619626939/9901009501; ಮಧುಗಿರಿ-9535340677ನ್ನು ಸಂಪರ್ಕಿಸಬಹುದಾಗಿದೆ. 

ತಾಲ್ಲೂಕು ಮಟ್ಟದಲ್ಲಿ ಆಯೋಜಿಸುವ ಸ್ಪರ್ಧೆಗಳ ವಿವರ

ಅಥ್ಲೆಟಿಕ್ಸ್ ಸ್ಪರ್ಧೆ:  ಪುರುಷ ವಿಭಾಗದಲ್ಲಿ 100, 200, 400, 800, 1500, 5000, 10000 ಮೀ. ಓಟ,  110 ಮೀ. ಹರ್ಡಲ್ಸ್ 4×100 ಮೀ. ರಿಲೇ, 4×400 ಮೀ. ರಿಲೇ. ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ(ಟ್ರಿಪಲ್ ಜಂಪ್), ಗುಂಡು ಎಸೆತ, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ. ಮಹಿಳಾ ವಿಭಾಗದಲ್ಲಿ 100, 200, 400, 800, 1500, 3000 ಮೀ. ಓಟ, 100 ಮೀ ಹರ್ಡಲ್ಸ್, 4×100 ಮೀ. ರಿಲೇ, 4×400 ಮೀ. ರಿಲೇ. ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ (ಟ್ರಿಪಲ್ ಜಂಪ್), ಗುಂಡು ಎಸೆತ, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ ಪಂದ್ಯಗಳು ನಡೆಯಲಿವೆ.

ಗುಂಪು ಕ್ರೀಡಾ ಸ್ಪರ್ಧೆ :   ಪುರುಷ ವಿಭಾಗದಲ್ಲಿ ಕಬಡ್ಡಿ, ಖೋ-ಖೋ, ವಾಲಿಬಾಲ್, ಥ್ರೋಬಾಲ್,  ಫುಟ್ಬಾಲ್, ಯೋಗ ಸ್ಪರ್ಧೆಗಳು ನಡೆಯಲಿವೆ.    ಮಹಿಳಾ ವಿಭಾಗದಲ್ಲಿ ಕಬಡ್ಡಿ, ಖೋ-ಖೋ, ವಾಲಿಬಾಲ್, ಥ್ರೋಬಾಲ್, ಯೋಗ(ವೀರಭದ್ರಾಸನ,                                                      ಜಾನು ಶಿರಶಾಸನ, ಹಲಾಸನ ಮತ್ತು ಧನುರಾಸನ).

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಆಯಾ ತಾಲ್ಲೂಕು ಕ್ರೀಡಾಪಟುಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ನೊಂದಿಗೆ ತಮ್ಮ ತಾಲ್ಲೂಕಿನಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸತಕ್ಕದ್ದು.  ದಸರಾ ಕ್ರೀಡಾಕೂಟದಲ್ಲಿ ಒಮ್ಮೆ  ಒಂದು ತಾಲ್ಲೂಕಿನಿಂದ ಸ್ಪರ್ಧಿಸಿದ ಸ್ಪರ್ಧಿಗಳು (ಸೋಲಿರಲಿ/ ಗೆಲುವಿರಲಿ) ರಾಜ್ಯದ ಬೇರೆ ಯಾವುದೇ ತಾಲ್ಲೂಕಿನಿಂದ ಮತ್ತೊಮ್ಮೆ ಸ್ಪರ್ಧಿಸುವಂತಿಲ್ಲ. ಕ್ರೀಡಾಪಟುಗಳು ಸ್ಪರ್ಧಾ ದಿನಾಂಕಗಳಂದು ಬೆಳಿಗ್ಗೆ 9 ಗಂಟೆಗೆ ಹಾಜರಿರಬೇಕು. ಸ್ಪರ್ಧಿಗಳು ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು.   ಕ್ರೀಡಾಪಟುಗಳಿಗೆ ಮಧ್ಯಾಹ್ನದ ಲಘು-ಉಪಹಾರದ ವ್ಯವಸ್ಥೆ ಕಲ್ಪಿಸಲಾಗುವುದು.

ತುಮಕೂರು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ನೇರವಾಗಿ ಆಯೋಜಿಸುವ ಸ್ಪರ್ಧೆಗಳು :

ಮೇಲಿನ ಎಲ್ಲಾ 7 ಸ್ಪರ್ಧೆಗಳ ಜೊತೆಗೆ ಬಾಸ್ಕೆಟ್ ಬಾಲ್, ಕುಸ್ತಿ, ಹಾಕಿ,  ಬ್ಯಾಡ್ ಮಿಂಟನ್, ಬಾಲ್ ಬ್ಯಾಡ್ಮಿಂಟನ್, ಹ್ಯಾಂಡ್ ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್ ಸೇರಿದಂತೆ 15 ಕ್ರೀಡೆಗಳನ್ನು ಆಯೋಜಿಸಲಾಗುವುದು. (ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪಾದ ಹಸ್ತಾನಸ, ಆಕರ್ಣ ಧನುರಾಸನ, ಊರ್ದೈ ಧನುರಾಸನ ಮತ್ತು ಅರ್ಧ ಮತ್ಸೇಂದ್ರಿಯ ಆಸನ).  ಟೆನ್ನಿಸ್, ನೆಟ್ಬಾಲ್ ಮತ್ತು ಈಜು ಸ್ಪರ್ಧೆಗಳ ಆಸಕ್ತ   ಕ್ರೀಡಾಪಟುಗಳನ್ನು ನೇರವಾಗಿ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿ ವಿಭಾಗ ಮಟ್ಟಕ್ಕೆ ಕಳುಹಿಸಿ ಕೊಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಮಂಜುನಾಥ್ (ಮೊ.ಸA.9741691379) ಅವರನ್ನು ಸಂಪರ್ಕಿಸಬೇಕೆOದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *