ಸರ್ಕಾರದಿಂದ ಸಾರಿಗೆ ನೌಕರರಿಗೆ ಸಿಹಿ ಸುದ್ದಿ: ಸಿಗಲಿದೆ ಹೊಸ ಸೌಲಭ್ಯ

ಸರ್ಕಾರದಿಂದ ಸಾರಿಗೆ ನೌಕರರಿಗೆ ಸಿಹಿ ಸುದ್ದಿ: ಸಿಗಲಿದೆ ಹೊಸ ಸೌಲಭ್ಯ

ಬೆಂಗಳೂರು : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (KKRTC) ಖಾಲಿ ಇರುವ ಹುದ್ದೆಗಳ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೆ ರಾಜ್ಯ ಸರ್ಕಾರ ಮಹತ್ವ ಒಪ್ಪಂದ ಮಾಡಿಕೊಳ್ಳುವ ಮೂಲಕ ಸಾರಿಗೆ ನೌಕರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಖುದ್ದು ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ಕೆನರಾ ಬ್ಯಾಂಕ್ ಜೊತೆಗೆ ಮಂಗಳವಾರ ಮಹತ್ವದ ಒಪ್ಪಂದ ನಡೆಯಿತು.

ಇಂದು ನಡೆದ ಒಪ್ಪಂದದ ಪ್ರಕಾರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ಎಲ್ಲಾ ನೌಕರರು ವೇತನ ಖಾತೆಗಳನ್ನು ಕೆನರಾ ಬ್ಯಾಂಕಿನ “ಪೇ-ರೋಲ್ ಪ್ಯಾಕೇಜ್ ಸ್ಕೀಮ್” ಅಡಿಯಲ್ಲಿ ತೆರೆಯಬಹುದು. ಅದರಿಂದ ಸರ್ಕಾರ ನೀಡಲು ಉದ್ದೇಶಿಸಿರುವ ಸೌಲಭ್ಯವನ್ನು ನೌಕರರು ಯಾವುದೇ ಶುಲ್ಕ ಪಾವತಿಸದೇ ಪಡೆಯಬಹುದಾಗಿದೆ.

ಕರ್ನಾಟಕ ಸಾರಿಗೆ ಇಲಾಖೆ ಹಾಗೂ ಮುಜರಾಯಿ ಖಾತೆಯ ಸಚಿವ ರಾಮಲಿಂಗಾ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ KKRTC ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಮತ್ತು ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ವಿಜಯಕುಮಾರ್ ಅವರು ಒಡಂಬಡಿಕೆಗೆ ಸಹಿ ಹಾಕಿದರು. 1ಕೋಟಿ ರೂ. ಅಪಘಾತ ವಿಮೆ ಸೌಲಭ್ಯ ಈ ಸಾರಿಗೆ ನಿಗಮ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಪಘಾತಗಳು, ಅದರಿಂದಾಗುವ ಸಾವು-ನೋವುಗಳನ್ನು ಸಾರಿಗೆ ಇಲಾಖೆ ಗಮನಿಸಿ ಈ ರೂ.1.00ಕೋಟಿ ಗಳ ಅಪಘಾತ ವಿಮೆ ಸೌಲಭ್ಯ ಒದಗಿಸಲು ಮುಂದಾಗಿದೆ. ನಿಗಮದ ನೌಕರರ ವೈಯಕ್ತಿಕ ಮತ್ತು ಕರ್ತವ್ಯ ನಿರತ ಸಮಯದಲ್ಲಿ ಅಪಘಾತದಿಂದಾಗಿ ನೌಕರರು ಮೃತರಾದರೆ ಅವರ ಕುಟುಂಬಕ್ಕೆ ರೂ.1ಕೋಟಿ ಗಳ ಅಪಘಾತ ವಿಮೆಯ ಪರಿಹಾರ ಮೊತ್ತ ನೀಡಲಾಗುತ್ತದೆ.

ನೌಖರರು ಡೆಬೀಟ್ ಕಾರ್ಡ್ ಹೊಂದಿದಲ್ಲಿ ರೂ.6.00ಲಕ್ಷ ದಿಂದ ರೂ.14.00ಲಕ್ಷ ಹಾಗೂ ಪ್ರೀಮಿಯಂ ರಹಿತ ರೂ.1.00ಲಕ್ಷ ದಿಂದ ರೂ.6.00 ಲಕ್ಷಗಳವರೆಗೆ ಉಚಿತ “Term Insurance” ಪಾಲಿಸಿಯನ್ನು ಫಲಾನುಭವಿಗಳಿಗೆ (ಸಂತ್ರಸ್ತ) ನೀಡಲಾಗುವುದು ಎಂದು ಈ ವೇಳೆ ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದರು.

ಅಂಗನ್ಯೂನ್ಯತೆ ಒಳಗಾದರೂ ಪರಿಹಾರ ಸೌಲಭ್ಯ ಒಂದು ವೇಳೆ ಅಪಘಾತ ಬಳಿಕ ಬದುಕುಳಿದು, ಅಂಗಾಂಗ ಕಳೆದುಕೊಂಡಲ್ಲಿ. ಅಂತಹ ನೌಕರರಿಗೆ ಗಣನೀಯ ಮೊತ್ತದಷ್ಟು ಪರಿಹಾರ ಮೊತ್ತ ನೀಡಲು ಈ ಯೋಜನೆಯನ್ನು ರೂಪಿಸಲಾಗಿದೆ ಎಂದರು. KKRTC ನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುರಕ್ಷಿತ, ವಿತವ್ಯಯ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ನೌಕರರ ಕಲ್ಯಾಣಕ್ಕಾಗಿ ಅನೇಕ ಯೋಜನೆ ಜಾರಿಗೆ ತರಲಾಗಿದೆ. ಇನ್ನೂ ಈ ಅಪಘಾತ ವಿಮೆ ವ್ಯಾಪ್ತಿಗೆ ನಿಗಮ ನೌಕರದಿಂದ ಎಸ್.ಬಿ.ಐ ಹಾಗೂ ಯೂನಿಯನ್ ಬ್ಯಾಂಕಿನಲ್ಲಿ ವೇತನ ಪಡೆಯುತ್ತಿರುವ ನೌಕರರು ಒಳಪಡುತ್ತಾರೆ ಎಂದು ಅವರು ಮಾಹಿತಿ ನೀಡಿದರು.

ಈ ಬ್ಯಾಂಕ್ನಿಂದ ವೇತನ ಪಡೆಯುವ ನೌಕರರಿಗೆ ವಿಮೆ ಸೌಲಭ್ಯ ಈ ಮೇಲೆ ತಿಳಿಸಲದಾ ಬ್ಯಾಂಕುಗಳನ್ನು ಬಿಟ್ಟು ಕೆನರಾ ಬ್ಯಾಂಕಿನಲ್ಲಿ ವೇತನ ಪಡೆಯುತ್ತಿರುವ ಸುಮಾರು 3000 ನೌಕರರಿಗೆ ಇಂದಿನ ಒಪ್ಪಂದದ ಮೂಲಕ ಒಂದು ಕೋಟಿ ರೂ.ಅಪಘಾತ ವಿಮೆಯ ಸೌಲಭ್ಯ ವಿಸ್ತರಿಸಲಾಗಿದೆ. ನೌಕರರಿಗೆ ಏನು ಆರ್ಥಿಕ ಅಗತ್ಯವಿದೆ ಎಂಬುದನ್ನು ಮನಗಂಡು, ಕೆನರಾ ಬ್ಯಾಂಕ್ ಅಧಿಕಾರಿಗಳ ಜೊತೆಗೆ ಚರ್ಚಿಸಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಪಘಾತ ವಿಮೆ ಸೌಲಭ್ಯ ಜಾರಿಗೆ ತರಲಾಗಿದೆ. ನೌಕರರ ಇತರ ನೈರ್ಸಗಿಕ

ಸಾವು ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ ಕೆನರಾ ಬ್ಯಾಂಕ್ನಿಂದ ಪ್ರೀಮಿಯಂ ರಹಿತ ರೂ.6.00 ಲಕ್ಷಗಳವರೆಗೆ ಉಚಿತ “Term Insurance” ಪಾಲಿಸಿ ನೀಡುತ್ತದೆ. ನೌಕರರ ಮಕ್ಕಳ ವಿಧ್ಯಾಬ್ಯಾಸ, ಗೃಹ ಸಾಲ ಹಾಗೂ ವೈಯಕ್ತಿಕ ಮತ್ತು ವಾಹನ ಸಾಲಗಳಲ್ಲಿ ವಿಶೇಷ ಬಡ್ಡಿ ದರ ನೀಡುತ್ತಾರೆಂದು ಕೆಕೆಆರ್ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರರು ತಿಳಿಸಿದರು.

Leave a Reply

Your email address will not be published. Required fields are marked *