ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಯುಗಾಂತ್ಯವಾಗುತ್ತಿದ್ದು. ಬೆಂಗಳೂರಿಗೆ ಗ್ರೇಟರ್ ಬೆಂಗಳೂರು ಆಡಳಿತವನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಪರಿಚಯಿಸಿದ್ದು. ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪಾಲಿಕೆಗೆ ಚುನಾವಣೆ ನಡೆಸುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಇನ್ನು ರಾಜ್ಯದ ಪ್ರಮುಖ ಆದಾಯ ಸಂಗ್ರಹ ಪ್ರದೇಶಗಳಲ್ಲಿ ಒಂದಾಗಿರು ಹಾಗೂ ಪ್ರಮುಖ ಪಾಲಿಕೆಯಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಚುನಾವಣೆಯನ್ನೇ ನಡೆಸಿಲ್ಲ. ಆದರೆ, ಇದೀಗ ಬೆಂಗಳೂರಿಗೆ ಕನ್ನಡ ಬಿಟ್ಟು ಬೇರೆ ಭಾಷೆಗಳ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಾಗುವ ಆತಂಕ ಎದುರಾಗಿದೆ.

ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆದು ಬರೋಬ್ಬರಿ 5 ವರ್ಷಗಳೇ ಆಗಿವೆ. ಇದೀಗ ರಾಜ್ಯ ಸರ್ಕಾರವು ಚುನಾವಣೆ ನಡೆಸುವುದಾಗಿ ಗುಡ್ನ್ಯೂಸ್ ನೀಡಿದೆಯಾದರೂ ಚುನಾವಣೆಯ ಬೆನ್ನಲ್ಲೇ ಬೆಂಗಳೂರು ಕನ್ನಡಿಗರ ಕೈತಪ್ಪುವ ಆತಂಕ ಎದುರಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ಕನ್ನಡಿಗರ ಅಸ್ತಿತ್ವ ಪ್ರಶ್ನೆ ಎದುರಾಗಿದೆ. ದಿನೇ ದಿನ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪರಭಾಷಿಕರ ಹಾವಳಿ ಹೆಚ್ಚಾಗುತ್ತಿದೆ ಎನ್ನುವ ವಿಷಯ ಚರ್ಚೆಯಾಗುತ್ತಿರುವಾಗಲೇ ಬೆಂಗಳೂರಿನ ವಿಭಜನೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದು ಕನ್ನಡಿಗರಲ್ಲಿ ಆತಂಕ ಸೃಷ್ಟಿಗೆ ಕಾರಣವಾಗಿದೆ.
ಬೆಂಗಳೂರು ಮೂರು ಭಾಗ ಅಸ್ತಿತ್ವಕ್ಕೆ ಕುತ್ತು: ಬೆಂಗಳೂರನ್ನು ಮೂರು ಭಾಗವಾಗಿ ವಿಭಜನೆ ಮಾಡುವುದರಿಂದ ಕನ್ನಡಿಗರ ಅಸ್ತಿತ್ವಕ್ಕೆ ಕುತ್ತು ಬರಲಿದೆ ಎನ್ನುವ ಚರ್ಚೆ ನಡೆದಿದೆ. ಬೆಂಗಳೂರಿನ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಪರಭಾಷಿಕರ ಸಂಖ್ಯೆ ಹೆಚ್ಚಾಗಿದೆ. ಮುಂದೆ ಬೆಂಗಳೂರು ಪಾಲಿಕೆ ಮೂರು ಅಥವಾ ಐದು ವಿಭಜನೆಯಾದರೆ, ಕನ್ನಡಿಗರಿಗೆ ಹಿನ್ನಡೆ ಆಗಲಿದೆ ಎನ್ನುವ ಆತಂಕ ಶುರುವಾಗಿದೆ. ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಹಾಗೂ ಬೆಂಗಳೂರು ಪಶ್ಚಿಮ ಎನ್ನುವ ಹೆಸರು ಇರಲಿದೆ. ಯಾವಾಗ ರಾಜ್ಯ ಸರ್ಕಾರವು ಮೂರು ಅಥವಾ ಐದು ಪಾಲಿಕೆಗಳನ್ನು ಮಾಡುವ ಉದ್ದೇಶವಿದೆ ಎನ್ನುವ ಸುಳಿವನ್ನು ನೀಡಿದೆಯೋ ಅಂದಿನಿಂದಲೇ ಬೆಂಗಳೂರಿನಲ್ಲಿ ಕನ್ನಡಿಗರಿಗೆ ಹಿನ್ನೆಡೆ ಆಗಲಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಗ್ರೇಟರ್ ಬೆಂಗಳೂರಿನಲ್ಲಿ ಇರುವ ಪ್ರಮುಖ ಶಿಫಾರಸ್ಸುಗಳೇನು ? * ಬೆಂಗಳೂರು ಮಹಾನಗರ ಪಾಲಿಕೆಯನ್ನು 7 ಭಾಗಗಳಾಗಿ ವಿಭಜನೆ ಮಾಡುವುದು.
* ಈ ರೀತಿ ವಿಭಜನೆಯಾಗುವ ಪಾಲಿಕೆಗಳಿಗೆ ಪ್ರತಿ ಪಾಲಿಕೆಗೂ 100ರಿಂದ 125 ವಾರ್ಡ್ಗಳನ್ನು ರಚನೆ ಮಾಡುವುದು. ಆದರೆ ಈ ರೀತಿ ರಚನೆ ಮಾಡುವ ನಿರ್ಧಾರವನ್ನು ಸರ್ಕಾರಕ್ಕೆ ಬಿಡಲಾಗಿದೆ. * ಗ್ರೇಟರ್ ಬೆಂಗಳೂರು ಜಾರಿಯಿಂದ ಬೆಸ್ಕಾಂ, ಜಲಮಂಡಳಿ, ಮೆಟ್ರೋ ಹಾಗೂ ಬಿಬಿಎಂಪಿ ನಡುವೆ ಸಮನ್ವಯತೆ. * ಗ್ರೇಟರ್ ಬೆಂಗಳೂರು ಅಥಾರಿಟಿಯಿಂದ ತಿಂಗಳಿಗೆ ಒಮ್ಮೆಯಾದರೂ ಸಭೆ ನಡೆಸಬೇಕು.
* ಪ್ರತಿ ಮೂರು ತಿಂಗಳಿಗೆ ಒಮ್ಮೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ನಿರ್ಧಾರ. * ಈಗ ಮೇಯರ್ ಅವಧಿಯು 1 ವರ್ಷ ಇದೆ. ಇನ್ಮುಂದೆ ಪಾಲಿಕೆಗಳ ಮೇಯರ್ ಅವಧಿಯು 30 ತಿಂಗಳು ಆಗಲಿದೆ / ಮಾಡಲು ಶಿಫಾರಸ್ಸು ಮಾಡಲಾಗಿದೆ. * ಹೊಸ ಪಾಲಿಕೆಗಳಿಗೆ ಬೇರೆ ಜಿಲ್ಲೆಗಳನ್ನು ಸೇರಿಸುವುದಿಲ್ಲ. * ಕೆಎಂಸಿ ಕಾಯ್ದೆ ಪ್ರಕಾರವೇ ಹೊಸ ಪಾಲಿಕೆ ರಚನೆಯಾಗಲಿದೆ. * ಪಾಲಿಕೆ ಸಮೀದಲ್ಲಿರುವ ಅಭಿವೃದ್ಧಿ ಆಗಿರುವ ಗ್ರಾಮಗಳನ್ನು ಸೇರಿಸುವುದಕ್ಕೆ ಇದರಲ್ಲಿ ಅವಕಾಶವಿದೆ. * ಜೂನ್ 30ರ ಒಳಗಾಗಿ ವಾರ್ಡ್ಗಳ ಗಡಿ ಗುರುತಿಸಲು ಶಿಫಾರಸ್ಸು. * ಪ್ರತಿ ಪಾಲಿಕೆಯ ಇಂಟ್ರನಲ್ ಆಡಿಟ್. ಭ್ರಷ್ಟಾಚಾರ ಕಡಿವಾಣಕ್ಕೆ ವಿಜಿಲಿನ್ಸ್ ಸ್ಥಾಪನೆ ಆಗಲಿದೆ.




