GTA Video Game || ವಿಡಿಯೋ ಗೇಮ್ ಪ್ರಯರಿಗೆ ಶಾಕ್ : GTA VI ರಿಲೀಸ್ ಡೇಟ್ ಅನೌನ್ಸ್ ಮುಂದೂಡಿಕೆ

GTA Video Game || ವಿಡಿಯೋ ಗೇಮ್ ಪ್ರಯರಿಗೆ ಶಾಕ್ : GTA VI ರಿಲೀಸ್ ಡೇಟ್ ಅನೌನ್ಸ್ ಮುಂದೂಡಿಕೆ

ಬಹುನಿರೀಕ್ಷಿತ ಗೇಮ್ ಗ್ರ್ಯಾಂಡ್ ಥೆಫ್ಟ್ ಆಟೋ VI (GTA VI) ಬಗ್ಗೆ ಕಂಪನಿ ಅಪ್ಡೇಟ್ ನೀಡಿದೆ. ಈ ಗೇಮ್ ಬಿಡುಗಡೆಗಾಗಿ ಕಾಯುತ್ತಿರುವ ಅಭಿಮಾನಿಗಳು ಇನ್ನೂ ಒಂದು ವರ್ಷ ಕಾಯಬೇಕಾಗುತ್ತದೆ. GTA VI ಅನ್ನು ಮೇ 26, 2026 ರಂದು ಬಿಡುಗಡೆ ಮಾಡಲಾಗುವುದು ಎಂದು ರಾಕ್ಸ್ಟಾರ್ ಗೇಮ್ಸ್ ಅಧಿಕೃತವಾಗಿ ಘೋಷಿಸಿದೆ. ಈ ಮೊದಲು ಈ ಆಟವು ಸೆಪ್ಟೆಂಬರ್ 2025 ರಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಈಗ ಡೆವಲಪರ್ಗಳು ಅದನ್ನು ಇನ್ನಷ್ಟು ಸುಧಾರಿಸಲು ಹೆಚ್ಚುವರಿ ಸಮಯವನ್ನು ಕೇಳಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಮೇ 2 ರಂದು ಬಿಡುಗಡೆಯಾದ ಹೇಳಿಕೆಯಲ್ಲಿ ಕಂಪನಿಯು ಗೇಮ್ ಅನ್ನು ಉತ್ತಮ ಗುಣಮಟ್ಟದಲ್ಲಿ ಪ್ರಸ್ತುತಪಡಿಸಲು ಬಯಸುತ್ತದೆ. ಈ ಹೆಚ್ಚುವರಿ ಸಮಯವು ಅಂತಿಮ ಸ್ಪರ್ಶವನ್ನು ನೀಡಲು ಸಹಾಯ ಮಾಡುತ್ತದೆ. ಅಭಿಮಾನಿಗಳ ತಾಳ್ಮೆ ಮತ್ತು ಬೆಂಬಲಕ್ಕೆ ರಾಕ್ಸ್ಟಾರ್ ಧನ್ಯವಾದ ಅರ್ಪಿಸುತ್ತಿದೆ ಎಂದು ಹೇಳಿದೆ.

ರಾಕ್ಸ್ಟಾರ್ ಗೇಮ್ಸ್ನಿಂದ ಅಧಿಕೃತ ಹೇಳಿಕೆ: ಈ ದಿನಾಂಕವು ನೀವು ನಿರೀಕ್ಷಿಸಿದ್ದಕ್ಕಿಂತ ದೂರದಲ್ಲಿದೆ ಎಂದು ನಮಗೆ ತಿಳಿದಿದೆ. ನಮ್ಮನ್ನು ಕ್ಷಮಿಸಿ.. GTA VI ಸುತ್ತಲಿನ ಉತ್ಸಾಹ ಮತ್ತು ನಿರೀಕ್ಷೆ ನಮಗೆ ಸ್ಪೂರ್ತಿದಾಯಕವಾಗಿದೆ. ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳುವ ಮೂಲಕ ನೀವು ನಿರೀಕ್ಷಿಸಿದ ಅನುಭವವನ್ನು ನಿಮಗೆ ನೀಡಲು ನಮಗೆ ಸಾಧ್ಯವಾಗುತ್ತದೆ ಎಂದು ನಾವು ಭರವಸೆ ನೀಡುತ್ತೇವೆ ಅಂತಾ ರಾಕ್ಸ್ಟಾರ್ ಗೇಮ್ಸ್ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ವಿಳಂಬದಿಂದ ಅಭಿಮಾನಿಗಳು ನಿರಾಶೆಗೊಂಡಿದ್ದರೂ ಗೇಮ್ನ್ನು ಹೆಚ್ಚು ಪ್ರಬುದ್ಧ ಮತ್ತು ಶಕ್ತಿಯುತವಾಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಡಿಸೆಂಬರ್ 2023 ರಲ್ಲಿ ಬಿಡುಗಡೆಯಾದ ಮೊದಲ ಟ್ರೇಲರ್ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿತು. ಇದರಿಂದ ಅದರ ಜನಪ್ರಿಯತೆಯನ್ನು ಅಳೆಯಬಹುದು. ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ GTA VI ಕಥೆಯು ಆಧುನಿಕ ವೈಸ್ ಸಿಟಿಯಲ್ಲಿ ನಡೆಯಲಿದ್ದು, ಮೊದಲ ಬಾರಿಗೆ ಇದರಲ್ಲಿ ಮಹಿಳಾ ಮುಖ್ಯ ಪಾತ್ರ ‘ಲೂಸಿಯಾ’ ಕಾಣಿಸಿಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *