ಡಿ.9ರಿಂದ ಜಿಟಿಟಿಸಿ ಪರೀಕ್ಷೆ: ಪ್ರವೇಶ ಪತ್ರ ಬಿಡುಗಡೆ, ಡೌನ್ಲೋಡ್ ಹೇಗೆ!

ಡಿ.9ರಿಂದ ಜಿಟಿಟಿಸಿ ಪರೀಕ್ಷೆ: ಪ್ರವೇಶ ಪತ್ರ ಬಿಡುಗಡೆ, ಡೌನ್ಲೋಡ್ ಹೇಗೆ!

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ( KEA) ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ ಕೇಂದ್ರಕ್ಕೆ (GTTC) ಸಂಬಂಧಿಸಿದಂತೆ ಪ್ರವೇಶ ಟಿಕೆಟ್ (GTTC Admit Card) ಬಿಡುಗಡೆ ಮಾಡಿದೆ. ಜಿಟಿಟಿಸಿ ನೇಮಕಾತಿಗೆ ಪ್ರವೇಶ ಬಯಸುವ, ಪರೀಕ್ಷೆಗೆ ಹಾಜರಾಗುವವರು ಕೆಇಎ ವೆಬ್ಸೈಟ್ನಲ್ಲಿ ಅಪ್ಲೋಡ್ ಆಗಿರುವ ಹಾಲ್ ಟಿಕೆಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಪ್ರಾಧಿಕಾರವು ಹಲವು ವಾರಗಳ ಹಿಂದೆ ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ ಕೇಂದ್ರದ (GTTC) ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದರು. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗಾಗಿ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ. ಅಧಿಕೃತ ವೆಬ್ಸೈಟ್ನಲ್ಲಿ GTTC ಪ್ರವೇಶ ಟಿಕೆಟ್ ಡೌನ್ಲೋಡ್ ವಿಧಾನ ಇಲ್ಲಿದೆ.

GTTCಯ ವಿವಿಧ ಹುದ್ದೆಗಳ ನೇಮಕಾತಿಗೆ ಇದೇ ಡಿಸೆಂಬರ್ 9ರಿಂದ 14ರವರೆಗೆ ಲಿಖಿತ ಪರೀಕ್ಷೆ ನಡೆಯಲಿದೆ. ಈ ಸಂಬಂಧ ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು KEA ವೆಬ್ ಸೈಟ್ ಗೆ ಭೇಟಿ ನೀಡಬೇಕು. ಬೆಂಗಳೂರು ಕೇಂದ್ರಗಳಲ್ಲಿ ಮಾತ್ರವೇ ಪರೀಕ್ಷೆಗಳು ನಡೆಯಲಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾಹಿತಿ ನೀಡಿದೆ. ಪರೀಕ್ಷೆ ವಿಷಯ-ದಿನಾಂಕ ಜಿಟಿಟಿಸಿ ಹುದ್ದೆಗಳಿಗೆ ಡಿಸೆಂಬರ್ 09ರಂದು ಸಹಾಯಕ, ಡಿಸೆಂಬರ್ 10 ರಂದು ತಂತ್ರಜ್ಞರು, ಪ್ರಾಧ್ಯಾಪಕರ ವಿವಿಧ ಪರೀಕ್ಷೆ ಜರುಗಲಿವೆ. ಡಿಸೆಂಬರ್ 11ರಂದು ಹಾಗೂ 14 ರಂದು ವಿವಿಧ ಪರೀಕ್ಷೆಗಳು ಜರುಗಲಿವೆ. ಪರೀಕ್ಷೆಗಳು ನಿಗದಿ ದಿನಾಂಕದಂತೆ ಬೆಳಗ್ಗೆ 10.30ರಿಂದ 12.30 ಹಾಗೂ ಮಧ್ಯಾಹ್ನ 2.30ರಿಂದ 4.30ಕ್ಕೆ ಪರೀಕ್ಷೆ ನಡೆಯಲಿವೆ.

ಪ್ರವೇಶ ಪತ್ರ ಡೌನ್ಲೋಡ್ ವಿಧಾನಗಳು, ಲಿಂಕ್ ಅಭ್ಯರ್ಥಿಗಳು ಮೊದಲು https://cetonline.karnataka.gov.in/kea/ ವೆಬ್ಸೈಟ್ಗೆ ಭೇಟಿ ನೀಡಬೇಕು. ಬಳಿಕ ಅಲ್ಲಿ ಕಾಣುವ ಜಿಟಿಟಿಸಿ ಪ್ರವೇಶ ಪತ್ರ ಡೌನ್ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಪರೀಕ್ಷೆ ಹಾಗೂ ಅಪ್ಲಿಕೇಷನ್ ನಂಬರ್ ಹಾಗೂ ನಿಮ್ಮ ಹೆಸರು ನಮೂದಿಸಬೇಕು. ಬಳಿಕ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದರೆ ಪರದೆ ಮೇಲೆ ಪ್ರವೇಶ ಪತ್ರ ಕಾಣಿಸುತ್ತದೆ. ಅದರ ಪಿಡಿಎಫ್ ಪ್ರತಿ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *