ಬೆಂಗಳೂರು : ಉಪಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳಲ್ಲು ನಿಲ್ಲಲಿವೆ ಎಂಬ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ.
ಗೃಹಲಕ್ಷ್ಮಿ ನಿಲ್ಲಿಸುವುದು ಅಂದರೆ ಹಣೆಯಲ್ಲಿ ಬರೆದಿಲ್ಲ. ಮಹಿಳೆಯರ ಬದುಕಿಗೆ ನೆರವಾಗಲೆಂದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಗಲಾಗಿದೆ. ಅದನ್ನು ನಿಲ್ಲಿಸಲು ಬಿಜೆಪಿ, ಎನ್ ಡಿಎ ಮಿತ್ರಪಕ್ಷಗಳು ಹೊರಟಿವೆ ಎಂದರು
ಇನ್ನು ಕಾಂಗ್ರೆಸ್ 700 ಕೋಟಿ ರೂ ಹೊಡೆದಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪ ಮಾಡಿದ್ದಾರೆ. ಪ್ರಧಾನಿ ಮೋದಿ ಹೇಳಿದ್ದು ಎಲ್ಲವೂ ಸುಳ್ಳು. ಜನರು ಹುಷಾರಾಗಿರಬೇಕು ಎಂದು ಹೇಳಿದ್ದಾರೆ.