ಗುಬ್ಬಿ: ಗುಬ್ಬಿ ಹಾಗೂ ತಿಪಟೂರು ತಾಲೂಕಿನಲ್ಲಿ ಶನಿವಾರ ಹಾಗೂ ಭಾನುವಾರ ಕಾರ್ ರೇಸ್ಗಳ ಅಬ್ಬರ ನೋಡಬಹುದಾಗಿದೆ. ಇದುವರೆಗೂ ಸುಮಾರು ಕರ್ನಾಟಕ 1000 ರ್ಯಾಲಿ 48 ನೇ ವರ್ಷದ ಕ್ರೀಡೆಯನ್ನು ಗುಬ್ಬಿ ಗಡಿಭಾಗದ ಕಾರೇ ಕುರ್ಚಿಯಲ್ಲಿ ಚಾಲನೆ ನೀಡಲಾಯಿತು.
ಎರಡು ದಿನಗಳ ಕಾಲ ನಡೆಯುವಂತಹ ಕಾರ್ ರೇಸ್ ಸ್ಪರ್ಧೆಯಲ್ಲಿ 56 ಕಾರುಗಳು ಭಾಗವಹಿಸುತ್ತಿದ್ದು, ದೇಶದ ಹಲವು ರಾಜ್ಯಗಳಿಂದ ಈ ಒಂದು ಸ್ಪರ್ಧೆಗೆ ಸ್ಪರ್ದಾಳುಗಳು ಆಗಮಿಸಿದ್ದಾರೆ. ಎರಡು ದಿನಗಳ ಕಾಲ ನಡೆಯುವಂತಹ ಈ ಸ್ಪರ್ಧೆಯು ಗುಬ್ಬಿ ತಾಲೂಕಿನ ತೀರ್ಥರಾಮ ಹಾಗೂ ತಿಪಟೂರು ತಾಲೂಕಿನ ಹತ್ತಿಹಾಳು ಎರಡು ಭಾಗಗಳಲ್ಲಿ ನಡೆಯುತ್ತದೆ. ಶನಿವಾರ ಬೆಳಗ್ಗೆ 8 ಕ್ಕೆ ಆರಂಭವಾಗುತ್ತಿದ್ದು, ಪ್ರತಿ ವರ್ಷವೂ ಸಹ ಇದೇ ಭಾಗದಲ್ಲಿ ನಡೆಸುತ್ತಾ ಬಂದಿರುವಂತಹ ಕರ್ನಾಟಕ 1000 ರ್ಯಾಲಿಯು ತುಮಕೂರು ಜಿಲ್ಲೆಯಲ್ಲಿ ಸುಮಾರು 25 ನೇ ಬಾರಿ ನಡೆಯುತ್ತಿದೆ. ಜಿಲ್ಲಾ ಆಡಳಿತ ತಾಲೂಕು ಆಡಳಿತ ಪೊಲೀಸ್ ಇಲಾಖೆ ಇಲ್ಲಿನ ಸಾರ್ವಜನಿಕರು ಅತ್ಯಂತ ಹೆಚ್ಚಿನ ರೀತಿಯಲ್ಲಿ ನಮಗೆ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ಖಂಡಿತವಾಗಿ ಶನಿವಾರ ಮತ್ತು ಭಾನುವಾರ ನಡೆಯುವಂತಹ ಈ ಒಂದು ಸ್ಪರ್ಧೆಗೆ ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಆಗಮಿಸಿ ಪ್ರೋತ್ಸಾಹವನ್ನ ನೀಡಬೇಕು. ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಕರ್ನಾಟಕ 1000 ರ್ಯಾಲಿ ಅಧ್ಯಕ್ಷ ಗೌತಮ್ ಶಾಂತಪ್ಪ, ಉಪಾಧ್ಯಕ್ಷ ಬಾಸ್ಕರ್ ಗುಪ್ತ, ಜಗದೀಶ್, ಸೇರಿದಂತೆ ಇನ್ನಿತರರು ತಿಳಿಸಿದರು.