ಇಂದು ಮಧ್ಯಾಹ್ನ ಹಾಸನಾಂಬ ದೇವಾಲಯದ ಬಾಗಿಲು ಓಪನ್

ಇಂದು ಮಧ್ಯಾಹ್ನ ಹಾಸನಾಂಬ ದೇವಾಲಯದ ಬಾಗಿಲು ಓಪನ್

ಹಾಸನ: ಗುರುವಾರ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಮುಖ್ಯ ಅರ್ಚಕ ನಾಗರಾಜ್ ನೇತೃತ್ವದ ಎಂಟು ಪುರೋಹಿತರ ಗುಂಪಿನ ನಿರಂತರ ಧಾರ್ಮಿಕ ಕ್ರಿಯೆಗಳ ನಡುವೆ ಪ್ರಸಿದ್ಧ ಅಧಿದೇವತೆ ಹಾಸನಾಂಬ ದೇವಸ್ಥಾನದ ಬಾಗಿಲು ತೆರೆಯಲಿದೆ.

ಜಿಲ್ಲಾಧಿಕಾರಿಗಳು ಮತ್ತು ದೇವಸ್ಥಾನದ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ದಶಕಗಳಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಮುಖ್ಯ ಅರ್ಚಕರು ಬಾಗಿಲಿಗೆ ಪೂಜೆ ಸಲ್ಲಿಸಿದ ನಂತರ ಬಾಗಿಲು ತೆರೆಯುತ್ತಾರೆ. ಏತನ್ಮಧ್ಯೆ, ಒಂಬತ್ತು ದಿನಗಳ ಹಾಸನಾಂಬೆ ಉತ್ಸವಕ್ಕೆ ಜಿಲ್ಲಾಡಳಿತವು ಸೂಕ್ತ ವ್ಯವಸ್ಥೆ ಮಾಡಿದೆ.

ಸಾಮಾನ್ಯ ಸರತಿ ಸಾಲು, ವಿಐಪಿ ಪಾಸ್ ಹೊಂದಿರುವ ಭಕ್ತರು ಮತ್ತು ವಿಐಪಿಗಳ ವಾಹನಗಳಿಗೆ ಪ್ರವೇಶ ಮತ್ತು ನಿರ್ಗಮನ ಜಿಲ್ಲಾಡಳಿತ ವ್ಯವಸ್ಥಿತಗೊಳಿಸಿದೆ. ಎಲ್ಲಾ ಭಕ್ತರಿಗೆ ಲಡ್ಡು ಮತ್ತು ಪ್ರಸಾದವನ್ನು ವಿತರಿಸಲು ದೇವಾಲಯದ ಪಕ್ಕದಲ್ಲಿ 24 ಕೌಂಟರ್‌ಗಳನ್ನು ಸ್ಥಾಪಿಸಿದೆ. ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಸಿದ್ದಗಂಗಾ ಮತ್ತು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಆಗಮಿಸಲಿದ್ದಾರೆ. ಅಕ್ಟೋಬರ್ 24 ರಿಂದ ನವೆಂಬರ್ 3ರವರೆಗೆ ದೇವಾಲಯದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಈ ನಡುವೆ ನೈವೇದ್ಯದ ಸಂದರ್ಭ ಹೊರತು ಪಡಿಸಿ ದಿನದ 24 ಗಂಟೆಯೂ ದರ್ಶನಕ್ಕೆ ಅವಕಾಶವಿರುತ್ತದೆ” ಎಂದು ದೇಗುಲದ ಪ್ರಧಾನ ಅರ್ಚಕರು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *