ಭಾರತೀಯ ರಿಸರ್ವ್ ಬ್ಯಾಂಕ್ ಆಗಾಗ ತನ್ನ ನಿಯಮಗಳಿಗೆ ಅನುಸಾರವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಸದ್ಯ, ನಿಯಮಗಳನ್ನು ಅನುಸರಿಸದೆ ಹಿನ್ನೆಲೆ ಲಖನೌ ಮೂಲದ ಬ್ಯಾಂಕ್ ಒಂದರ ಪರವಾನಗಿಯನ್ನು ರದ್ದುಗೊಳಿಸಿರುವುದಾಗಿ ಮಾಹಿತಿ ನೀಡಿದೆ. ಸದ್ಯ ಬ್ಯಾಂಕಿನ ಪರವಾನಗಿ ರದ್ದುಗೊಳಿಸಿದ ಬಳಿಕ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಸಾಕಷ್ಟು ಬಂಡವಾಳ ಮತ್ತು ಹಣದ ಹರಿವು ಇಲ್ಲದ ಕಾರಣ ನೀಡಿ ಲಕ್ನೋ ಮೂಲದ ಹೆಚ್ಸಿಬಿಎಲ್ ಸಹಕಾರಿ ಬ್ಯಾಂಕಿನ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸೋಮವಾರ ರದ್ದುಗೊಳಿಸಿದೆ.
ಸದ್ಯ ಇಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರು ಈ ಬ್ಯಾಂಕಿನಲ್ಲಿರುವ ತಮ್ಮ ಹಣ ಮರಳಿ ಸಿಗುತ್ತದೆಯೇ ಎಂಬ ಪ್ರಶ್ನೆ ಇದ್ದಾಗ, ರಿಸರ್ವ್ ಬ್ಯಾಂಕ್ ಗ್ರಾಹಕರಿಗೆ ತಮ್ಮ ಠೇವಣಿಗಳನ್ನು ಪೂರ್ಣವಾಗಿ ಪಡೆಯುವುದಾಗಿ ಭರವಸೆ ನೀಡಿದೆ.
ಗ್ರಾಹಕರಿಗೆ ಹಣ ಮರುಪಾವತಿಸಲು ರಿಸರ್ವ್ ಬ್ಯಾಂಕ್ ಸುಮಾರು 22 ಕೋಟಿ ರೂಪಾಯಿಗಳನ್ನು ಒದಗಿಸಿದೆ. ರಿಸರ್ವ್ ಬ್ಯಾಂಕ್ ಒದಗಿಸಿದ ಮಾಹಿತಿಯ ಪ್ರಕಾರ, ಎಚ್ಸಿಬಿಎಲ್ ಬ್ಯಾಂಕ್ 1949 ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಹಲವಾರು ನಿಯಂತ್ರಕ ಅವಶ್ಯಕತೆಗಳನ್ನು ಪಾಲಿಸಲು ವಿಫಲವಾಗಿದೆ ಎಂದು ಕಂಡುಬಂದಿದೆ.
ಇದರಿಂದಾಗಿ, ಠೇವಣಿ ಹಿಂಪಡೆಯುವಿಕೆ ಮತ್ತು ಕ್ಲಿಯರಿಂಗ್ ಚೆಕ್ಗಳು ಸೇರಿದಂತೆ ಎಲ್ಲಾ ಬ್ಯಾಂಕ್ ಚಟುವಟಿಕೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರ್ಥಿಕ ಪರಿಸ್ಥಿತಿ ಸ್ಥಿರವಾಗಿಲ್ಲದ ವಿವಿಧ ಸಹಕಾರಿ ಮತ್ತು ನಗರ ಬ್ಯಾಂಕುಗಳ ಹಕ್ಕುಗಳನ್ನು ರದ್ದುಗೊಳಿಸಲು ರಿಸರ್ವ್ ಬ್ಯಾಂಕ್ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆ ನಿಟ್ಟಿನಲ್ಲಿ ತೀವ್ರ ನಷ್ಠದಲ್ಲಿದ್ದ ಹಾಗೂ ಅಕೌಂಟ್ಸ್ ಸರಿಯಾಗಿ ಮ್ಯಾನೇಜ್ ಮಾಡದ ಹಿನ್ನೆಲೆ ಹೆಚ್ಸಿಬಿಎಲ್ ಬ್ಯಾಂಕ್ನ ಪರವಾನಗಿ ರದ್ದುಗೊಳಿಸಿದ್ದಾರೆ.
ಪಂಜಾಬ್ನ ಜಲಂಧರ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಬನ್ ಕೋಆಪರೇಟಿವ್ ಬ್ಯಾಂಕ್, ಅಹಮದಾಬಾದ್ನ ಮರ್ಚಂಡೈಸ್ ಕೋಆಪರೇಟಿವ್ ಬ್ಯಾಂಕ್ ಮತ್ತು ಔರಂಗಾಬಾದ್ನ ಅಜಂತಾ ಅರ್ಬನ್ ಕೋಆಪರೇಟಿವ್ ಬ್ಯಾಂಕ್ಗಳ ಪರವಾನಗಿಗಳನ್ನು ಇತ್ತೀಚೆಗೆ ರದ್ದುಗೊಳಿಸಲಾಗಿದೆ ಎಂಬುದು ಗಮನಾರ್ಹ.