ರೇಂಜ್ ಗೆ ರಾಗಿ ಮುದ್ದೆ ತಿಂದವರನ್ನು ಎಲ್ಲಾದರೂ ನೋಡಿದ್ದೀರಾ..!

ಬೆಂಗಳೂರು: ಸರ್ಜಾಪುರದಲ್ಲಿ ಭಾನುವಾರ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಕುಣಿಗಲ್, ಮಂಡ್ಯ, ಮಾಲೂರು ತಾಲೂಕಿನ 40ಕ್ಕೂ ಹೆಚ್ಚು ಮಂದಿ 200 ರೂ. ಪ್ರವೇಶ ಶುಲ್ಕ ಪಾವತಿಸಿ ಭಾಗವಹಿಸಿದ್ದರು. ಭಾಗವಹಿಸುವವರಿಗೆ 30 ನಿಮಿಷಗಳಲ್ಲಿ ಚಿಕನ್ ಕರಿಯೊಂದಿಗೆ ಗರಿಷ್ಠ ಸಂಖ್ಯೆಯ ರಾಗಿ ಮುದ್ದೆಗಳನ್ನು ತಿನ್ನಲು ಸವಾಲು ಹಾಕಲಾಯಿತು.

ರಾಗಿ ಮುದ್ದೆ

ಭಾಗವಹಿಸುವವರಿಗೆ ಸ್ಪರ್ಧೆಯ ಆರಂಭದಲ್ಲಿ ತಲಾ ಅರ್ಧ ಕೆಜಿ ತೂಕದ ಎರಡು ರಾಗಿ ಮುದ್ದೆಯನ್ನ ನೀಡಲಾಯಿತು. ಅವರು ತಿಂದು ಮುಗಿಸಿದ ನಂತರ ಅವರಿಗೆ ಹೆಚ್ಚಿನ ರಾಗಿ ಮುದ್ದೆಗಳನ್ನ ನೀಡಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ಜನರಿಗೆ ಸಂಘಟಕರು ಒಂದು ಕುರಿ ಮತ್ತು ಎರಡು ಕೋಳಿಗಳನ್ನು ಬಹುಮಾನವಾಗಿ ನೀಡಿದರು.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ಹರೀಶ್ ಅವರು ಅರ್ಧ ಗಂಟೆಯಲ್ಲಿ 13 ರಾಗಿ ಮುದ್ದೆಗಳನ್ನು ತಿನ್ನುವ ಮೂಲಕ ಸ್ಪರ್ಧೆಯಲ್ಲಿ ಗೆದ್ದರು. ಶ್ರೀನಿವಾಸ್ ಮತ್ತು ಆನಂದ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸುವವರು ತಿನ್ನುವುದನ್ನು ವೀಕ್ಷಿಸಲು ಸುತ್ತಮುತ್ತಲಿನ ಹಲವಾರು ಜನರು ಜಮಾಯಿಸಿದರು.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *