ಬೆಂಗಳೂರು: ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ತುಮಕೂರು ಜಿಲ್ಲೆಯಿಂದ ಅಧಿಕೃತ ವಾಗಿ ಪ್ರವಾಸ ಆರಂಭ .ಎಲ್ಲಾ ಹಿರಿಯ ಮುಖಂಡರು ಸಹಕಾರ ಕೊಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಮನವಿ ಮಾಡಿದರು.

ಪಕ್ಷವನ್ನು ಜನರ ಬಳಿಗೆ ಕರೆದೊಯ್ಯುವ ಉದ್ದೇಶದಿಂದ ಹಿರಿಯರು ಸೇರಿ ಪಕ್ಷದ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರೊಂದಿಗೆ ಜನತಾದಳ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಗವಾಗಿಯೇ ರಾಜ್ಯ ಪಕ್ಷ ಸಂಘಟನಾ ರಾಜ್ಯ ಪ್ರವಾಸ ಮತ್ತು ಮಿಸ್ ಕಾಲ್ ಅಭಿಯಾನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಇಂದಿನಿಂದ ಅಧಿಕೃತವಾಗಿ ಮಿಸ್ಡ್ ಕಾಲ್ ಅಭಿಯಾನದ ಮೂಲಕ ಸದಸ್ಯತ್ವ ನೋಂದಣಿ ಆರಂಭ ಮಾಡಿದ್ದೇವೆ. ರಾಜ್ಯ ಪ್ರವಾಸದ ವೇಳೆ ಪ್ರತಿ ಕಾರ್ಯಕರ್ತರನ್ನು ಭೇಟಿ ಮಾಡಿ. ಪಕ್ಷಕ್ಕಾಗಿ ದುಡಿಯುವ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.
ಕನಿಷ್ಠ ಐವತ್ತು ಲಕ್ಷ ಜನ ಸದಸ್ಯರಾಗಬೇಕು ಎಂಬ ಗುರಿ ಇಟ್ಟುಕೊಂಡು ಹೋಗೋಣ. ಮತ್ತೆ ಈ ಪಕ್ಷವನ್ನು ತಳ ಮಟ್ಟದಿಂದ ಪುಟಿದೇಳುವಂತೆ ಮಾಡಬೇಕು ಎಂಬ ನಿಟ್ಟಿನಲ್ಲಿ ಆ.16 ರವರೆಗೆ ರಾಜ್ಯ ಪ್ರವಾಸ ಹಮ್ಮಿಕೊಳ್ಳಲಾಗಿದೆ ನಿಮ್ಮ ಸಹಕಾರ ಇರಲಿ ಎಂದು ಮನವಿ ಮಾಡಿದರು.
ಚಿತ್ರರಂಗದಲ್ಲಿ ಅಣ್ಣಾವ್ರು, ರಾಜಕಾರಣದಲ್ಲಿ ಕುಮಾರಣ್ಣ- ಚಿತ್ರರಂಗದಲ್ಲಿ ಡಾ ರಾಜ್ ಕುಮಾರಣ್ಣ ಅವರಿಗೆ ಅಣ್ಣ ಅಂತ ಸ್ಥಾನ ಕೊಟ್ಟಿದ್ದರು. ರಾಜಕೀಯದಲ್ಲಿ ಕುಮಾರಸ್ವಾಮಿ ಅವರಿಗೆ ಜನರು ಸ್ಥಾನ ನೀಡಿದ್ದಾರೆ. ಅಪ್ಪಂದಿರ ದಿನಚರಣೆ ಆಚರಿಸೋಕ್ಕೆ ನನಗೆ ಒಳ್ಳೆ ಅವಕಾಶ ತಂದೆ ಅಂದ್ರೆ ನಮ್ಮ ಜೀವನದ ಬೆಳಕು. ನಾನು ನಮ್ಮ ತಂದೆಯಿಂದ ಹಲವು ವಿಚಾರಗಳನ್ನು ಹಾಗೆಯೇ ದೇವೇಗೌಡರ ರಾಜಕೀಯ ಕಾರ್ಯ ಕೆಲಸ ಕಲಿತಿದ್ದೇನೆ ಎಂದು ತಿಳಿಸಿದರು.
ಕೆಂಪುಕೋಟೆ ಮೇಲೆ ತ್ರಿವರ್ಣದ್ವಜ ಹಾರಿಸಿದ HDD ಈಶ್ವರನ ವರ ಪುತ್ರ – ಒಬ್ಬ ರೈತನ ಮಗ ದೇಶದ ಉನ್ನತ ಹುದ್ದೆ ಅಲಂಕರಿಸಿದರು ದೇವೇಗೌಡರನ್ನ ಈಶ್ವರನ ಪುತ್ರ ಎಂದೇ ಹೇಳಬಹುದುರಾಜ್ಯದ ಬಗ್ಗೆ ಅವರಿಗೆ ಇದ್ದ ಬದ್ದತೆ ನೋಡಿದ್ರೆ ಹಲವು ಜನರಿಗೆ ಮಾರ್ಗದರ್ಶನ ಆಗುವಂತದ್ದು ಎಂದರು. ನನ್ನ ಒಳಗೆ ಆತಂಕವಿದೆ ಎಲ್ಲರೂ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ನಾನು ಪಕ್ಷದ ಸಂಘಟನೆಗೆ ಮೊದಲು ಹಾಜರಾತಿ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.