ಬರಹ : ಡಾ. ಮೀನಾಕ್ಷಿ, ಮಕ್ಕಳತಜ್ಞೆ, ಅಶ್ವಿನಿ ಆಯುರ್ವೇದ ಆಸ್ಪತ್ರೆ
ಮಕ್ಕಳನ್ನು 3 ಅಲರ್ಜಿಗಳು ಹೆಚ್ಚಾಗಿ ಕಾಡುತ್ತವೆ. ಈ ಅಲರ್ಜಿಗಳ ರೋಗಲಕ್ಷಣಗಳು ಏನು? ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು ಎಂದು ತಿಳಿಯೋಣ
ಮಕ್ಕಳ ದೇಹ ಹಾಗು ಚರ್ಮ ಬಹಳ ಸೂಕ್ಷ್ಮವಾಗಿರುವ ಕಾರಣ ತ್ವರಿತವಾಗಿ ಅಲರ್ಜಿಗೆ ಒಳಗಾಗುತ್ತಾರೆ. ಇದಕ್ಕೆ ಮಾಲಿನ್ಯ, ಧೂಳು, ಮಣ್ಣು, ಕಲುಷಿತ ಆಹಾರಗಳು, ಅಡ್ಡಪರಿಣಾಮಗಳನ್ನು ಹೊಂದಿರುವ ಔಷಧಿಗಳು ಕಾರಣವಾಗಿರಬಹುದು.
ಕೆಲವು ಅಲರ್ಜಿಗಳನ್ನು ಮನೆ ಮದ್ದಿನ ಮೂಲಕ ಗುಣಪಡಿಸಬಹುದಾದರೂ, ಆರೋಗ್ಯಕ್ಕೆ ಅಪಾಯವನ್ನು ತಂದೊಡ್ಡುವ ಅಲರ್ಜಿಗಳು ಕೂಡ ಇವೆ ಎಂಬುದನ್ನು ನಾವು ಮರೆಯಬಾರದು.
1) ವಾತಾವರಣ ಅಲರ್ಜಿಗಳು
ವಾತಾವರಣ ಅಲರ್ಜಿಗಳು ಯಾವುದೇ ಸಮಯದಲ್ಲಿ ಸಂಭವಿಸಬಹುದು. ಇದು ಮಾಲಿನ್ಯಕಾರಕಗಳು, ಧೂಳು ಮತ್ತು ಹೊಗೆಗಳಿಂದ ಬರುವ ಕಲುಷಿತ ಗಾಳಿಯಿಂದ ಮಕ್ಕಳಿಗೆ ಅಲರ್ಜಿಯ ಯ ರೂಪದಲ್ಲಿ ಕಾಡಬಹುದು. ಇದು ಸುಮಾರು 40% ಮಕ್ಕಳ ಮೇಲೆ ಪರಿಣಾಮಬೀರುತ್ತದೆ.
ರೋಗಲಕ್ಷಣಗಳು…
ಮಗು ಒಂದು ವೇಳೆ ಹವಾಮಾನದಿಂದ ಅಲರ್ಜಿ ಹೊಂದಿದ್ದರೆ, ನೋಯುತ್ತಿರುವ ಗಂಟಲು
ಸೀನುವಿಕೆ ಮತ್ತು ಸ್ರವಿಸುವ ಮೂಗು ದೀರ್ಘಕಾಲದ ಕೆಮ್ಮು, ಒಣ ಮತ್ತು ನಾಯಿ ಕೆಮ್ಮು
ಕಣ್ಣುಗಳು ಮತ್ತು ಮೂಗು ತುರಿಕೆ ಉಬ್ಬಸ, ಆಯಾಸ, ಕಿವಿಸೋಂಕುಗಳು
ಆಸ್ತಮಾದ ಲಕ್ಷಣಗಳು ಕಂಡು ಬರುತ್ತವೆ.
2) ಚರ್ಮದ ಅಲರ್ಜಿ
ಮಕ್ಕಳ ಮೃದುವಾದ ಚರ್ಮವು ಬಹುಬೇಗ ಅಲರ್ಜಿಯನ್ನು ಪಡೆಯುತ್ತದೆ.
ರೋಗದ ಲಕ್ಷಣಗಳು
ಚರ್ಮದ ಶುಷ್ಕತೆ, ಚರ್ಮದ ಮೇಲೆ ಕೆಂಪು ದದ್ದು
ಮೊಣಕೈಗಳು, ಮೊಣಕಾಲುಗಳು ಮತ್ತು ಕಿವಿ ಮತ್ತು ಮಣಿಕಟ್ಟಿನ ಹಿಂಭಾಗದಲ್ಲಿ ದದ್ದುಗಳು ಸುಡುವ ಸಂವೇದನೆ.
3) ಆಹಾರ ಅಲರ್ಜಿ
ಆಹಾರ ಅಲರ್ಜಿ ಎಂದರೆ, “ಮಗುವು ನರ್ದಿಲಷ್ಟ ಆಹಾರವನ್ನು ಸೇವಿಸಿದ ನಂತರ ಅದಕ್ಕೆ ಪ್ರತಿಕ್ರಿಯಿಸಿದಾಗ ಅದನ್ನು ಆಹಾರ ಎಲರ್ಜಿ” ಎಂದು ಕರೆಯಲಾಗುತ್ತದೆ.
ರೋಗಲಕ್ಷಣಗಳು
ವಾಕರಿಕೆ, ವಾಂತಿ, ಸೆಳೆತ ಮತ್ತು ಅಸ್ವಸ್ಥತೆ,
ಅತಿಸಾರ, ಬಾಯಿಯಲ್ಲಿ ಊತ ಮತ್ತು ತುರಿಕೆ, ನಾಲಿಗೆ, ತುಟಿಗಳ ಬಳಿ ಅಥವಾ ಗಂಟಲಿನಲ್ಲಿ,
ಉಬ್ಬಸ, ಉಸಿರಾಟದ ತೊಂದರೆ, ಕೆಮ್ಮು ಅಥವಾ ಸ್ರವಿಸುವ ಮೂಗು ಸೇರಿವೆ.
ತೀವ್ರವಾದ ರೋಗಲಕ್ಷಣಗಳು ಗಂಟಲು, ಶ್ವಾಸಕೋಶಗಳು, ಬಾಯಿ, ಕರುಳು, ರ್ಮಿ, ಹೃದಯ ಅಥವಾ ಇತರ ಅಂಗಗಳ ಮೇಲೆ ಪರಿಣಾಮ ಬೀರಬಹುದು.
ವೈದ್ಯರನ್ನು ಯಾವಾಗ ನೋಡಬೇಕು?
ಈ ಮೇಲಿನ 3 ಅಲರ್ಜಿಗಳ ಲಕ್ಷಣಗಳು ಮಗುವಿನ ದೇಹದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಾಗ ತಕ್ಷಣವೇ ವೈದ್ಯರನ್ನು ಭೇಟಿ ನೀಡಲು ಸಲಹೆ ನೀಡುತ್ತೇನೆ.
ಕೆಲವೊಮ್ಮೆ ಮನೆಮದ್ದುಗಳು ಕೈ ಕೊಡಬಹುದು. ಈ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಹೋಗಲೇಬೇಕಾಗುತ್ತದೆ.
ರ್ವೇ ಸಾಮಾನ್ಯ ಪ್ರಪಂಚದಾದ್ಯಂತ 40 ರಿಂದ 50 ಪ್ರತಿಶತದಷ್ಟು ಶಾಲಾ ವಯಸ್ಸಿನ ಮಕ್ಕಳು ಕನಿಷ್ಠ ಒಂದು ಅಲರ್ಜಿ‍್ಜಿಯನ್ನು ಹೊಂದಿದ್ದಾರೆ.
ಈ ಅಲರ್ಜಿಗಳನ್ನು ನಮ್ಮ ಆಯುರ್ವೇದ ಪದ್ಧತಿ ಚಿಕಿತ್ಸೆ ಇಂದ ಹೋಗಲಾಡಿಸಬಹುದು.