ಅಮೆರಿಕ:ಅಮೆರಿಕದ ಮಿಚಿಗನ್ ರಾಜ್ಯದ ಗ್ರ್ಯಾಂಡ್ ಬ್ಲಾಂಕ್ ಪಟ್ಟಣದ ಚರ್ಚ್‌ನಲ್ಲಿ ಭಾನುವಾರ ನಡೆದ ಪ್ರಾರ್ಥನೆ ಶೋಕದಲ್ಲಿ ಮುಳುಗಿದಂತಾಯಿತು. ದಿ ಚರ್ಚ್ ಆಫ್ ಜೀಸಸ್ ಕ್ರೈಸ್ಟ್ ಆಫ್ ಲೇಟರ್-ಡೇ ಸೇಂಟ್ಸ್ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ 40 ವರ್ಷದ ವ್ಯಕ್ತಿಯೊಬ್ಬನು ಭೀಕರ ಗುಂಡಿನ ದಾಳಿ ನಡೆಸಿದ್ದು, 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಮತ್ತು 8 ಮಂದಿ ಗಾಯಗೊಂಡಿದ್ದಾರೆ.
ದಾಳಿ ನಂತರ ಬೆಂಕಿ ಹಚ್ಚಿದ ಶೂಟರ್!
ಘಟನೆಯಂತೆ, ಶೂಟರ್ ತನ್ನ ಕಾರಿನಲ್ಲಿ ಚರ್ಚ್‌ಗೆ ಡಿಕ್ಕಿ ಹೊಡೆದ ಬಳಿಕ ಕಟ್ಟಡದೊಳಗೆ ಪ್ರವೇಶಿಸಿ, ಅಸಾಲ್ಟ್ ರೈಫಲ್ ಬಳಸಿ ಅಚಾನಕ ಗುಂಡು ಹಾರಿಸಿದ್ದು, ನಂತರ ಚರ್ಚ್‌ಗೆ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೂಟರ್ ಯಾರು?
- ಶೂಟರ್‌ನನ್ನು ಥಾಮಸ್ ಜಾಕೋಬ್ ಸ್ಯಾನ್ಫೋರ್ಡ್ (40) ಎಂದು ಗುರುತಿಸಲಾಗಿದೆ
- ಬುರ್ಟನ್ ಮೂಲದ ನಿವೃತ್ತ ಯೋಧ
- ಇರಾಕ್ ಯುದ್ಧದಲ್ಲಿ ಸೇನೆಯ ಸೇವೆ ಸಲ್ಲಿಸಿದ್ದ ಹಿನ್ನೆಲೆ
- ದಾಳಿಯ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ
- ಪೊಲೀಸರ ಸ್ಪೆಷಲ್ ರೆಸ್ಪೋನ್ಸ್ ಟೀಮ್ (SRT) ದಾಳಿ ನಡೆಸಿ ಶೂಟರ್‌ನ್ನು ಗನ್ಫೈಟ್ನಲ್ಲಿ ಹೊಡೆದು ಹತ್ಯೆ ಮಾಡಿದೆ
ದಾಳಿಯಲ್ಲಿ ಗಾಯಗೊಂಡವರು
- ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದು, ಇವರಲ್ಲಿ ಮಕ್ಕಳೂ ಸೇರಿದ್ದಾರೆ
- ಆಸ್ಪತ್ರೆಯಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ
- ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ
ತನಿಖೆ ಮುಂದುವರಿದಿದೆ
ಸ್ಥಳಕ್ಕೆ ಧಾವಿಸಿದ ಎಟಿಎಫ್ (ATF) ಮತ್ತು ಎಫ್ಬಿಐ (FBI) ಅಧಿಕಾರಿಗಳು, ಶೂಟರ್‌ನ ಹಿನ್ನೆಲೆ, ಮಾನಸಿಕ ಸ್ಥಿತಿ ಹಾಗೂ ಹಿಂದಿನ ಕ್ರಿಮಿನಲ್ ರೆಕಾರ್ಡ್‌ಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.
For More Updates Join our WhatsApp Group :
