ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭಾರೀ ಡ್ರಗ್ಸ್ ಜಾಲ ಬಯಲಾಗಿದ್ದು, 7.80 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಬ್ಬಗೋಡಿಯಲ್ಲಿ ನೆಲೆಸಿದ್ದ ನೈಜೀರಿಯಾ ಮೂಲದ ಕೆವಿನ್ ರೋಜರ್ ಮತ್ತು ಥಾಮಸ್ ನವೀದ್ ಚೀಮ್ ಎಂಬವರಿಗೆ ಬಂಧನ ಬಿದ್ದಿದ್ದು, ಡೆಲ್ಲಿ ಮತ್ತು ಮುಂಬೈ ಮೂಲಕ ಡ್ರಗ್ಸ್ ತರಿಸುತ್ತಿದ್ದ ಮಾಹಿತಿ ಸಿಕ್ಕಿದೆ.
ಎಷ್ಟೆಲ್ಲಾ ಡ್ರಗ್ಸ್ ಜಪ್ತಿ ಮಾಡಲಾಗಿದೆ?
- 3.8 ಕೆ.ಜಿ. ಎಂಡಿಎಂಎ ಕ್ರಿಸ್ಟಲ್
- ಎಂಡಿಎಂಎ ಬ್ರೌನ್ ಮತ್ತು ವೈಟ್ ಡ್ರಗ್ಸ್
- 82 ಎಕ್ಸ್ಟೆಸಿ ಟ್ಯಾಬ್ಲೆಟ್ಗಳು (42 ಗ್ರಾಂ ತೂಕ)
- 23 ಕೆ.ಜಿ. ಗಾಂಜಾ
- 482 ಗ್ರಾಂ ಹೈಡ್ರೋ ಗಾಂಜಾ
ಟಾರ್ಗೆಟ್ ಯಾರು? ಹೇಗೆ ವ್ಯವಹಾರ?
- ಟೀಂ ಟೆಕ್ಕಿಗಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಹೈ-ಪ್ರೊಫೈಲ್ ಗ್ರಾಹಕರನ್ನು ಟಾರ್ಗೆಟ್ ಮಾಡುತ್ತಿತ್ತು
- ಡ್ರಗ್ಸ್ ಹಣವನ್ನು ಆನ್ಲೈನ್ ಮೂಲಕ ಸ್ವೀಕರಿಸಿ
- ಪರಿಚಿತ ಸ್ಥಳಗಳಲ್ಲಿ ಪಾರ್ಸೆಲ್ ಇಟ್ಟು GPS ಲೊಕೇಶನ್ ಶೇರ್ ಮೂಲಕ ಡಿಲಿವರಿ
- ಸಿಸಿಬಿ ಮತ್ತು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ
ಬ್ಯಾಂಗ್ ಬ್ಯಾಂಗ್! ಬೆಂಗಳೂರಿನ ಹೊರವಲಯದಲ್ಲಿ ರಾಬರಿ ಗ್ಯಾಂಗ್ ಸೆರೆ
3 ದಿನಗಳಲ್ಲಿ 37 ಕಳ್ಳತನ; ಅಪ್ರಾಪ್ತರು ಸೇರಿ 7 ಮಂದಿ ಪೊಲೀಸರ ಹಿಡಿತಕ್ಕೆ
ಬೆಂಗಳೂರು ಗ್ರಾಮಾಂತರ:
ಬ್ಯಾಂಗರೆಯ ಹೊರವಲಯದಲ್ಲಿ ಭೀತಿಯುಂಟುಮಾಡುತ್ತಿದ್ದ ರಾಬರಿ ಗ್ಯಾಂಗ್ ಒಂದನ್ನು ಪೊಲೀಸರು ಬಂಧಿಸಿದ್ದಾರೆ. ಆರು ಅಪ್ರಾಪ್ತರು ಮತ್ತು ಓರ್ವ ಅಪರಾಧ ಹಿನ್ನೆಲೆಯ ವ್ಯಕ್ತಿ ಸೇರಿದ್ದ ಈ ತಂಡ ಕೇವಲ ಮೂರು ದಿನಗಳಲ್ಲಿ 37 ಕಳ್ಳತನ ಮಾಡಿದ್ದರೆಂದು ಶಾಕ್ ಮಾಡಿಸುವ ಮಾಹಿತಿ ಸಿಕ್ಕಿದೆ.
ಕೃತ್ಯಗಳ ಮಾದರಿ ಹೇಗಿತ್ತು?
- ಮೂರು ಬೈಕ್ ಬಳಸಿಕೊಂಡು ಟೀಂ ರಾತ್ರಿ ವೇಳೆ ಸುತ್ತಾಡುತ್ತಿತ್ತು
- ಕಾರು ಮತ್ತು ಲಾರಿಗಳನ್ನು ಅಡ್ಡಹಾಕಿ ಚಾಕು ತೋರಿಸಿ ಸುಲಿಗೆ
- ಮೊಬೈಲ್, ಹಣ ಎಗರಿಸುತ್ತಿದ್ದರು
- ಹಣ ಕೊಡದಿದ್ದರೆ ಚಾಕು ಹಾಕಿ ಪರಾರಿಯಾಗುತ್ತಿದ್ದರು
ತನಿಖೆ: ಸಿಸಿ ಕ್ಯಾಮರಾ ದೃಶ್ಯದಿಂದ ಪತ್ತೆ
- ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಪ್ರಕರಣಗಳ ಹಿಂದೆ ಒಂದೇ ಗ್ಯಾಂಗ್ ಇರೋದು ಗುರುತಿಸಿದರು
- ವಿಶೇಷ ತಂಡ ರಚಿಸಿ ಗ್ಯಾಂಗ್ ಸೆರೆ
- 9 ಮೊಬೈಲ್ ಫೋನ್ಗಳು ವಶ
For More Updates Join our WhatsApp Group :




