ಬೆಂಗಳೂರಿನಲ್ಲಿ ಆರ್ಸಿಬಿ-ಕೆಕೆಆರ್ ನಡುವೆ ಹೈವೋಲ್ಟೇಜ್ ಪಂದ್ಯ: Namma Metro ಸೇವೆ ವಿಸ್ತರಣೆ: ಸಯಮಗಳ ಮಾಹಿತಿ ತಿಳಿಯಿರಿ

ಬೆಂಗಳೂರಿನಲ್ಲಿ ಆರ್ಸಿಬಿ-ಕೆಕೆಆರ್ ನಡುವೆ ಹೈವೋಲ್ಟೇಜ್ ಪಂದ್ಯ: Namma Metro ಸೇವೆ ವಿಸ್ತರಣೆ: ಸಯಮಗಳ ಮಾಹಿತಿ ತಿಳಿಯಿರಿ

ಬೆಂಗಳೂರು: ಭಾರತ-ಪಾಕಿಸ್ತಾನ ನಡುವೆ ಯುದ್ಧ ಸಂಘರ್ಷ ಹಿನ್ನೆಲೆ ಅರ್ಧಕ್ಕೆ ರದ್ದಾಗಿದ್ದ ಐಪಿಎಲ್ 2025 ಮತ್ತೆ ಇಂದಿನಿಂದ (ಮೇ 17) ಆರಂಭವಾಗುತ್ತಿದೆ. ಮೊದಲ ಪಂದ್ಯ ಆರ್ಸಿಬಿ-ಕೆಕೆಆರ್ ನಡುವೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹಿನ್ನೆಲೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಮ್ಮ ಮೆಟ್ರೋ ಸೇವೆಯನ್ನು ವಸ್ತರಿಸಿದೆ. ಹಾಗಾದ್ರೆ ಎಷ್ಟು ಗಂಟೆಯಿಂದ ಎಲ್ಲಿಯವರೆಗೂ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಉಳಿದ ಪಂದ್ಯಗಳು ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮೇ 17, 23ರಂದು ಬೆಂಗಳೂರಲ್ಲಿ ಐಪಿಎಲ್ ಪಂದ್ಯಾವಳಿ ನಿಗದಿ ಆಗಿದೆ. ಈ ಪಂದ್ಯಾವಳಿ ವೀಕ್ಷಣೆಗೆ ತೆರಳುವಂತಹ ವೀಕ್ಷಕರ ಅನುಕೂಲಕ್ಕೆ ತಕ್ಕಂತೆ ನಮ್ಮ ಮೆಟ್ರೋ ಮಧ್ಯರಾತ್ರಿಯವರೆಗೆ ಸೇವೆಯನ್ನು ವಿಸ್ತರಣೆ ಮಾಡಿದೆ. ಬಿಎಂಆರ್ಸಿಎಲ್ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2025 ಪಂದ್ಯಗಳಿಗೆ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ. ಮೇ 17 ಹಾಗೂ 23, 2025ರಂದು ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಆದ್ದರಿಂದ ಈ ದಿನಗಳಂದು ನಮ್ಮ ಮೆಟ್ರೋ ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ ವೈಟ್ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದವರ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೆಟ್ರೋ ನಿಲ್ದಾಣದವರೆಗೂ ರೈಲು ಸೇವೆಯನ್ನು ಮಧ್ಯರಾತ್ರಿ 1ರ ವರೆಗೆ ವಿಸ್ತರಣೆ ಮಾಡಿದೆ.

ಮೆಜೆಸ್ಟಿಕ್ನಿಂದ ಈ ಎಲ್ಲಾ ನಾಲ್ಕು ಮಾರ್ಗಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 1.35 ಕ್ಕೆ ಹೊರಡಲಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ಮೊದಲಲ್ಲ.. ಹಿಂದಿನಿಂದಲೂ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯವಳಿ ವೇಳೆ ಬಿಎಂಆರ್ಸಿಎಲ್ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡುತ್ತಲೇ ಬಂದಿದೆ.

Leave a Reply

Your email address will not be published. Required fields are marked *