ಲೇಖನ : ಪವಿತ್ರ, ತುಮಕೂರು
ಇದೆ ತಿಂಗಳ 17ರಂದು ವಾಲ್ಮೀಕಿ ಜಯಂತಿಯನ್ನು ದೇಶಾದ್ಯಂತ ಆಚರಿಸಲಾಗಿದೆ. ಇವರು ಒಬ್ಬ ಪೌರಾಣಿಕ ಕವಿಯಾಗಿದ್ದು, ಭಾರತದ ಆದಿ ಕವಿಯೆಂದೆ ಪ್ರಸಿದ್ದರು. ರಾಮಾಯಣವನ್ನು ಸ್ವತಃ ರಚಿಸಿ, ಅದರಲ್ಲಿ ತನ್ನನ್ನು ತಾನೇ ಪಾತ್ರಕ್ಕೆ ತಂದ ಮೊದಲ ಲೇಖಕ. ರಾಮಾಯಣವನ್ನು ಮೊದಲ ಮಹಾ ಕಾವ್ಯವೆಂದು ಕರೆಯಲಾಗಿದೆ. ಇವರು ಸುಮಾರು 500ಬಿಸಿಇ ವರ್ಷಗಳ ಹಿಂದೆ ಇದ್ದರು. ರಾಮನ ಸಮಕಾಲೀನರು ಎಂದು ಗುರುತಿಸಲಾಗಿದೆ.
ವಾಲ್ಮೀಕಿ ಋಷಿಯಾಗಿ ಬದಲಾದದ್ದು ಹೇಗೆ?
ಇವರ ಬಗೆಗೆ ಹಲವಾರು ದಂಥಕಥೆಗಳು ಇವೆ. ವಾಲ್ಮೀಕಿಯು ಭೃಗು ಗೋತ್ತರದ ಪ್ರಚೇತನೆಂದು, ಅಗ್ನಿಶರ್ಮನಾಗಿ ಜನಿಸಿ, ಒಮ್ಮೆ ನಾರದರನ್ನು ಭೇಟಿಯಾದರು. ನಾರದರ ಪ್ರೇರೇಪಣೆಯಂತೆ ತಪಸ್ಸನ್ನು ಪ್ರಾರಂಭಿಸಿ ‘ಮರಾ’ ಎಂದರೆ ಸಾವು ಎಂಬ ಪದವನ್ನ ಜಪಿಸಿದರು. ಬಹಳ ವರ್ಷಗಳ ಕಾಲ ತಪಸ್ಸು ಮಾಡಿದ ಪರಿಣಾಮವಾಗಿ ‘ಮರಾ’ ಪದವು ‘ರಾಮ’ ಎಂಬ ಪದವಾಗಿ ಬದಲಾಯಿತು ಮತ್ತು ಅಗ್ನಿಶರ್ಮನ ಸುತ್ತಲು ಇರುವೆಗಳ ದೊಡ್ಡ ಗೂಡು ರೂಪುಗೊಂಡು ಇವರಿಗೆ ವಾಲೀಕಿ ಎಂಬ ಹೆಸರುಬಂತು.
ಮತ್ತೊOದು ದಂತಕಥೆಯ ಪ್ರಕಾರ ಇವರು ಸುಮಾಲಿ ಎಂಬ ಕಳ್ಳನಾಗಿದ್ದು, ಅನರ್ಥ ಪ್ರದೇಶದಲ್ಲಿ ವಾಸವಿದ್ದರು. ಕಾಡಿನಲ್ಲಿ ಸಿಕ್ಕ ಜನರನ್ನು ದೋಚಿ, ಕುಟುಂಬದ ಹಸಿವನ್ನು ನೀಗಿಸುತಿದ್ದರು. ಒಮ್ಮೆ ನಾರದರು ಭೇಟಿಯಾಗಿ ನೀನು ಮಾಡುತ್ತಿರುವುದು ಪಾಪ ಕಾರ್ಯ, ಇದರಲ್ಲಿ ನಿನ್ನ ಕುಟುಂಬ ಪಾಪದ ಭಾಗವಾಗುವುದೇ ಕೇಳೆಂದಾಗ ತಂದೆತಾಯಿ, ಪತ್ನಿ, ಮಕ್ಕಳು, ಬಂದುಗಳಾಗಲಿ ಯಾರು ಪಾಪಕ್ಕೆ ಪಾಲುದಾರರಾಗಲು ಒಪ್ಪುವುದಿಲ್ಲ, ಆಗ ಮನಪರಿವರ್ತನೆಯಾಗಿ, ಧ್ಯಾನ ಮಾಡಲು ಗುರುವಿಗಾಗಿ ಹುಡುಕಾಟ ಮಾಡಲು, ಪುಲಹ ಋಷಿಯು ಧ್ಯಾನವನ್ನು ಹೇಳಿಕೊಟ್ಟನು. ತಪ್ಪಸ್ಸಿಗೆ ಕುಳಿತ ಸುಮಾಲಿಯ ಸುತ್ತ ಇರುವೆ ಬೆಟ್ಟಗಳು ಬೆಳೆದವು, ಪುಲಹು ಋಷಿ ಆ ಬೆಟ್ಟದಿಂದ ಮಂತ್ರ ಪಠಣದ ಶಬ್ದ ಕೇಳಿ, ಅದರಲ್ಲಿ ಇರುವ ಸುಮಾಲಿಯ ಕಂಡು ವಾಲೀಕದಲ್ಲಿ ಕುಳಿತು ಸಿದ್ದಿಗಳಿಸಿರುವ ನೀನು ವಾಲ್ಮೀಕಿ ಮಹರ್ಷಿಯಾಗೆಂದು ಆಶೀರ್ವಾದಿಸಿದರು.
ವಾಲ್ಮೀಕಿ ತನ್ನ ದಿನನಿತ್ಯದ ಅಭ್ಯಂಜನಕ್ಕೆ ಗಂಗಾ ನದಿಗೆ ಹೋಗಿದ್ದರು. ಆಗ ಎರಡು ಹಂಸ ಪಕ್ಷಿಗಳು ಪ್ರಣಯದಲ್ಲಿ ಇದ್ದುದ್ದನ್ನು ಕಂಡು ಸಂತೋಷಿಸಿದರು. ಆಸಮಯದಲ್ಲಿ ಇದ್ದಕ್ಕಿದಂತೆ ಒಂದು ಬಾಣ ಗಂಡು ಹಂಸಕ್ಕೆ ತಗುಲಿ ಸಾವನ್ನಪ್ಪಿತು. ಹೆಣ್ಣು ಹಂಸ ಇದನ್ನು ಕಂಡು ಸಂಕಟದಿAದ ಕಿರುಚಿ, ದುಃಖತಪ್ತವಾಯಿತು, ಇದನ್ನ ನೋಡುತಿದ್ದ ವಾಲ್ಮೀಕಿಯು ಭೇಟೆಗಾರನಿಗೆ ಕ್ರೋಧ ಮತ್ತು ದುಃಖದಿಂದ ಸ್ವಯಂಪ್ರೆರಿತವಾಗಿ ಹೊರ ಹೊಮ್ಮಿದ ದ್ವಿಪದಿಯು ಮುದಲ ಶ್ಲೋಕವಾಗಿ ಪರೊಗಣಿಸಲಾಗಿದೆ. ರಾಮಾಯಣದಲ್ಲಿ 24,000 ಶ್ಲೋಕಗಳು ಇವೆ. ಅಯೋಧ್ಯೆ ರಾಮ, ಸೀತೆಯನ್ನು ಹೊತ್ತೊಯ್ಯುವ ರಾವಣ, ಸೀತೆಗಾಗಿ ಸಮುದ್ರ ದಾಟಿ ಲಂಕೆಗೆ ಬಂದು ರಾವಣನ ಸಂಹಾರ ಮಾಡಿದ ಕಥೆ ಇದೆ. ಅನುಮಾನದ ಕಾರಣಕ್ಕಾಗಿ ಕಾಡು ಪಾಲಾದ ರಾಣಿ ಸೀತೆಯನ್ನ ತನ್ನ ಆಶ್ರಮದಲ್ಲಿ ಸ್ವೀಕರಿಸಿ ಅವಳ ಅವಳಿ ಮಕ್ಕಳಾದ ಲವ ಕುಶರಿಗೆ ಶಿಕ್ಷಕರಾಗಿ ವಾಲ್ಮೀಕಿ ಕಾರ್ಯನಿರ್ವಹಿಸಿದ್ದಾರೆ.
ವಾಲ್ಮೀಕಿ ಜಯಂತಿಯನ್ನು ಅಶ್ವನಿ ಮಾಸದ ಪೂರ್ಣಿಮೆಯಂದು ದೇಶದ ವಿವಿಧೆಡೆ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಪರ್ಗತ್ ದಿವಸ್, ಅಥವಾ ಪರ್ಗಟ್ ದಿವಸ್ ಎಂದು ವಾಲ್ಮೀಕಿ ಪಂಥದವರು ಶೋಭಾ ಯಾತ್ರೆ ಮೆರವಣಿಗೆಯ ಮೂಲಕ ಆಚರಿಸಲಾಗಿದೆ. ಈ ದಿನವನ್ನ ತಮ್ಮ ಬೋಧನೆಗಳ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಲು ಜನರನ್ನು ಯಾವಾಗಲು ಪ್ರೇರೇಪಿಸಿದ ಮಹಾನ್ ಸಂತನಿಗೆ ಗೌರವವಾಗಿದೆ.