ಬೆಂಗಳೂರು: ಮಹಿಳೆಯರಿಗೆ ಭರ್ಜರಿಯಾಗಿ ಖಾಸಗಿ ಹೊಟೇಲ್ ನಲ್ಲಿ , 2025 ರ ಗೃಹಶೋಭಾ ಕಾರ್ಯಕ್ರಮ ನಡೆಯಿತ್ತು. ಗೃಹ ಶೋಭಾ, ಡೆಲ್ಲಿಪ್ರೆಸ್, ಪ್ರಜಾಪ್ರಗತಿ ಮತ್ತು ಪ್ರಗತಿ ಟಿವಿ, ಎಚ್ ಡಿ ಎಫ್ ಸಿ, ಸಿಲ್ಕ್ ಮಾರ್ಕ್ ಇಂಡಿಯಾ, ಕೆಎಂಎಫ್ ನಂದಿನಿ, GRT ಜ್ಯುವೆಲ್ಲರಿ, ಗ್ರೀನ್ ಅರವೆಲ್ಲ ಬ್ಯೂಟಿ ಕಡೆಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ವರ್ಷ ಮಹಿಳೆಯರಿಗಾಗಿ ಈ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರು ಖುಷಿಯಿಂದ ಭಾಗಿ ಆಗಿದ್ರು. ಇನ್ನೂ ಕಾರ್ಯಕ್ರಮದಲ್ಲಿ ಮಕ್ಕಳ ಶಿಕ್ಷಣಕ್ಕೆ ಸಾಲ, ಹಣ ಸಂಗ್ರಹಣೆ ಸೇರಿದಂತೆ ಅನೇಕ ಮಾಹಿತಿಯನ್ನು ಹೆಚ್ ಡಿ ಎಫ್ ಸಿ ಕಡೆಯಿಂದ SIP ಸಹೇಲಿ ಸೆಷನ್ ಗಿರಿಜಾರಾಣಿ ಕಾವಡಪು ಮಾಹಿತಿಯನ್ನು ನೀಡಿದರು. ಇನ್ನೂ ಮಹಿಳೆಯರಿಗಾಗಿ ಮಹಿಳೆಯ ಬ್ಯೂಟಿ, ಮಹಿಳೆಯರ ಸ್ಕಿನ್ ಕೇರ್, ಬ್ಯೂಟಿ ಟಿಪ್ಸ್ ಗಳ ಬಗ್ಗೆ ಅನಿತಾ ಶರ್ಲಿ ಮಾಹಿತಿ ನೀಡಿದರು, ಹಾಗೆ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸ್ತ್ರೀ ಸ್ವಾಸ್ಥ್ಯ ಹಾಗು ಆರೋಗ್ಯ ಸುಧಾರಣೆ ಬಗ್ಗೆ ಡಾಕ್ಟರ್ ಭಾವನ ಪ್ರಸಾದ್ ಮಹಿಳೆಯರಲ್ಲಿ ಅರಿವು ಮೂಡಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಸಿಲ್ಕ್ ಸ್ಯಾಲರಿ, ಸೇವಿಂಗ್ಸ್, ಬ್ಯೂಟಿಗೆ ಸಂಬಂಧಪಟ್ಟಂತೆ ಕಾರ್ಯಕ್ರಮ ಬಂದ ಮಹಿಳೆಯರಿಗೆ ಪ್ರಶ್ನೆಗಳನ್ನು ಕೇಳಲಾಯಿತು. ವಿಜೇತರಿಗೆ ಕಾರ್ಯಕ್ರಮದಲ್ಲಿ ಗಿಫ್ಟ್ ಕೊಡುವುದರ ಮೂಲಕ ಗೌರವಿಸಿದರು. ಕಾರ್ಯಕ್ರಮದಲ್ಲಿ ಡೆಲ್ಲಿ ಪ್ರೆಸ್ ಹಾಗೂ ಗೃಹಶೋಭಾ ದಕ್ಷಿಣ ಭಾರತದ ಮುಖ್ಯಸ್ಥರು ಶಂಕರ್ ಸೀರಿದಂತೆ ಅನೇಕ ಗಣ್ಯರು ಭಾಗಿ ಆಗಿದ್ರು…