ಸಿಮೆಂಟ್ ಶೀಟ್‌ನಲ್ಲೂ ಗೂಡು ಕಟ್ಟುತ್ತೆ ಜೇನು

ಕೃಷಿಕರು ತನಗೆ ಅಗತ್ಯವಿರುವ ವಸ್ತುಗಳನ್ನು ತಾನೇ ಬೆಳೆಯುವ ಹಾಗೂ ತಯಾರಿಸುವಂತಹ ಸಾಮರ್ಥ್ಯವಿರುವವರು. ಈ ಕಾರಣಕ್ಕಾಗಿಯೇ ಕೃಷಿಕ ತನ್ನ ಅಗತ್ಯತೆಗಳಿಗಾಗಿ ಬೇರೆಯವರನ್ನು ಆಶ್ರಯಿಸುವುದು ಅತಿ ವಿರಳವೂ ಆಗಿದೆ. ಇಂಥಹುದೇ ಒರ್ವ ಕೃಷಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದಾರೆ. ಮಂಗಗಳ ಹಾವಳಿಗೆ ಕೋವಿ, ಅಡಿಕೆಗೆ ಔಷಧಿ ಸಿಂಪಡಿಸಲು ಹೊಸ ವಿನೂತನ ಯಂತ್ರ ಸಿದ್ಧಪಡಿಸಿರುವ ಈ ಕೃಷಿಕ ಇದೀಗ ಕಡಿಮೆ ಖರ್ಚಿನ ಜೇನುಪೆಟ್ಟಿಗೆಯನ್ನು ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪೆರ್ನಾಜೆಯ ಕೃಷಿಕ ಕುಮಾರ್ ಪೆರ್ನಾಜೆ ಈ ವಿನೂತನ ಪ್ರಯತ್ನ ಮಾಡಿದ್ದಾರೆ.

‘ಶಬರಿಮಲೆ ಭಕ್ತರಿಗೆ ತೀವ್ರ ತೊಂದರೆ – ಕೂಡಲೇ ಪರಿಹರಿಸಿ’ ಕೇರಳ ಸಿಎಂಗೆ ಪತ್ರ ತನ್ನ ಹೆಸರಿನಲ್ಲಿ ಇರುವ ಸಣ್ಣ ಜಮೀನಿನಲ್ಲಿ ತನಗೆ ಬೇಕಾದಂತೆ ಕೃಷಿ ಮಾಡಿಕೊಂಡು ಬದುಕುತ್ತಿರುವ ವಿಶೇಷ ಕೃಷಿಕ. ಜಮೀನಿನಲ್ಲಿ ಸ್ವಲ್ಪ ಅಡಿಕೆ, ಸ್ವಲ್ಪ ತೆಂಗು, ಬಾಳೆ, ಕರಿಮೆಣಸು, ಕಾಫಿ, ಜೇನು ಹೀಗೆ ಎಲ್ಲಾ ಪ್ರಕಾರದ ಬೆಳೆಗಳನ್ನು ಬೆಳೆಯುತ್ತಿರುವ ಇವರು ಒರ್ವ ಪ್ರಗತಿಪರ ಕೃಷಿಕರೂ ಆಗಿದ್ದಾರೆ. ತನ್ನ ಕೃಷಿಗೆ ಬೇಕಾದ ಸಲಕರಣೆಗಳನ್ನು ತಾವೇ ತಯಾರಿಸಿಕೊಳ್ಳುತ್ತಿರುವ ಇವರು ಮೊದಲಿಗೆ ಪರಿಚಯಿಸಿದ್ದು, ತನ್ನ ಅಡಿಕೆ ತೋಟಗಳಿಗೆ ಮರದ ಬುಡದಲ್ಲೇ ನಿಂತು ಔಷಧಿ ಬಿಡುವ ಸರಳ ತಂತ್ರವನ್ನು. ತೀಸ್ರಿ ಬಾರ್ ಮೋದಿ ಸರ್ಕಾರ್! ಬಿಜೆಪಿಗೆ ‘ಹ್ಯಾಟ್ರಿಕ್’ ಗ್ಯಾರಂಟಿ ಕಾಂಗ್ರೆಸ್ ಮತ್ತೆ ಹೊಗೆ! ಬಳಿಕ ತೋಟಗಳಿಗೆ ಲಗ್ಗೆಯಿಡುವ ಮಂಗಗಳನ್ನು ಓಡಿಸಲು ಇವರು ಕೋವಿಯನ್ನು ಹೋಲುವ ಪಟಾಕಿ ಸಿಡಿಸುವ ಗನ್ ಕೂಡಾ ಮಾಡಿದ್ದಾರೆ.

ಆದರೆ ಇದೀಗ ತನ್ನ ಉಪಕಸುಬಾದ ಜೇನು ಸಾಕಾಣಿಕೆಗೂ ಹೊಸ ತಂತ್ರವನ್ನು ಇವರು ಪರಿಚಯಿಸಿದ್ದಾರೆ. ಹೆಚ್ಚಾಗಿ ಜೇನು ಪೆಟ್ಟಿಗೆಗಳನ್ನು ಮರದಲ್ಲೇ ತಯಾರಿಸಲಾಗುತ್ತಿದ್ದು, ಮರದ ಬದಲಿಗೆ ಇದೀಗ ಇವರು ಸಿಮೆಂಟ್ ಶೀಟನ್ನು ಬಳಸಿ ಪೆಟ್ಟಿಗೆ ತಯಾರಿಸಿದ್ದಾರೆ. ಮರದ ಜೇನಿನ ಪೆಟ್ಟಿಗೆಗೆ ೩ ರಿಂದ ೩,೫೦೦ ರೂಪಾಯಿ ಖರ್ಚಾದರೆ, ಸಿಮೆಂಟ್ ಶೀಟ್‌ನಲ್ಲಿ ತಯಾರಿಸಿದ ಪೆಟ್ಟಿಗೆಗೆ ಕೇವಲ ೧ ಸಾವಿರ ಖರ್ಚಾಗುತ್ತಿದೆ. ಅಲ್ಲದೆ ಮರದ ಪೆಟ್ಟಿಗೆಗಳಿಗೆ ಬರುವ ಗೆದ್ದಲು ಹಾಗೂ ಇರುವೆಗಳ ಕಾಟವೂ ಈ ಪೆಟ್ಟಿಗೆಗಳಿಗಿಲ್ಲ. ಮಳೆಗಾಲದಲ್ಲೂ ಮಳೆ ನೀರಿನ ಸಮಸ್ಯೆ ಇದಕ್ಕಿಲ್ಲ ಎನ್ನುವುದು ಪೆರ್ನಾಜೆಯವರ ಅಭಿಪ್ರಾಯವಾಗಿದೆ. ತುಮಕೂರು: ೮ ವರ್ಷಗಳಿಂದ ಹೆಣ್ಣು ಸಿಗುತ್ತಿಲ್ಲ: ಕನ್ಯಾಭಾಗ್ಯ ಯೋಜನೆ ಜಾರಿ ಮಾಡಿ ಎಂದ ರೈತ ಸಿಮೆಂಟ್ ಶೀಟ್‌ನ ಪೆಟ್ಟಿಗೆಯ ಜೊತೆಗೆ ಕಬ್ಬಿಣದ ಸರಳುಗಳ ಮೂಲಕ ಅದನ್ನು ನಿಲ್ಲಿಸುವಂತಹ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಮೂಲಕ ಪೆರ್ನಾಜೆ ಪರಿಸರ ಉಳಿವಿಗೂ ತನ್ನ ಕೊಡುಗೆಯನ್ನು ನೀಡಿದ್ದಾರೆ.

ಲಕ್ಷಾಂತರ ಜೇನುಪೆಟ್ಟಿಗೆಗಳು ಪ್ರತಿವರ್ಷ ತಯಾರಾಗುತ್ತಿದ್ದು, ಇವುಗಳಿಗಾಗಿ ನೂರಾರು ಮರಗಳನ್ನು ಕಡಿಯಲಾಗುತ್ತಿದೆ. ಆದರೆ ಸಿಮೆಂಟ್ ಶೀಟ್‌ನಿಂದಾಗಿ ಈ ಮರಗಳ ಬಳಕೆ ತಪ್ಪಲಿದೆ ಎನ್ನುವ ವಿಶ್ವಾಸವೂ ವ್ಯಕ್ತವಾಗಿದೆ. ಸಿಮೆಂಟ್ ಶೀಟ್‌ನಿಂದ ತಯಾರಿಸಿದ ಪೆಟ್ಟಿಗೆಗಳು ಬಿಸಿಲಿನ ಶಾಖ ಹೆಚ್ಚಿಸಿದರೂ, ತಂಪು ಪ್ರದೇಶವಿರುವ ಗ್ರಾಮೀಣ ಭಾಗದಲ್ಲಿ ಈ ಪೆಟ್ಟಿಗೆಗಳು ಯಶಸ್ವಿಯಾಗಲಿದೆ ಎನ್ನುವ ಅಭಿಪ್ರಾಯವೂ ಇದೀಗ ಕೇಳಿ ಬರುತ್ತಿದೆ. ಯಾವುದೇ ಲಾಭ ಗಳಿಸುವ ಉದ್ಧೇಶವಿಲ್ಲದೆ ತನ್ನ ತೋಟಕ್ಕೆ ಬೇಕಾದ ಸಲಕರಣೆಗಳನ್ನು ಮಾಡುತ್ತಿರುವ ಕುಮಾರ್ ಪೆರ್ನಾಜೆ ಕೃಷಿಯಲ್ಲಿ ಹೊಸತನವನ್ನೂ ಪರಿಚಯಿಸಿದವರಾಗಿದ್ದಾರೆ. ಇದೀಗ ಸಿಮೆಂಟ್ ಶೀಟ್‌ನ ಜೇನು ಪೆಟ್ಟಿಗೆಯ ಮೂಲಕ ಮತ್ತೊಮ್ಮೆ ಪೆರ್ನಾಜೆ ಸುದ್ದಿಯಲ್ಲಿದ್ದಾರೆ.

Pragati TV Social Connect for more latest u

One thought on “ಸಿಮೆಂಟ್ ಶೀಟ್‌ನಲ್ಲೂ ಗೂಡು ಕಟ್ಟುತ್ತೆ ಜೇನು

Leave a Reply

Your email address will not be published. Required fields are marked *