ಹೊಸಕೋಟೆ : ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಸಹಚರನ ಬಂಧಿಸಿದ ಟಿ.ಎಸ್.ಹಳ್ಳಿ ಪೊಲೀಸರು.ಮನೆ ಕಳ್ಳತನ ಮಾಡಿ ಚಿನ್ನ ಹಾಗೂ ಬೆಳ್ಳಿಯೊಂದಿಗೆ ಪರಾರಿಯಾಗಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಸಹಚರ ಸೂರಿ ಅಲಿಯಾಸ್ ಸೈಕೋ ಸೂರಿ, ಸುಬ್ರಮಣಿ, ಮಾರುತಿ ಈ ಆರೋಪಿಗಳನ್ನು ತಿರುಮಲಶೆಟ್ಟಿಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬOಧಿತ ಆರೋಪಿ ಸೂರಿ ನಟೋರಿಯಸ್ ದಂಡುಪಾಳ್ಯ ಗ್ಯಾಂಗ್‌ನ ಆರೋಪಿ ತಿಮ್ಮನ ಸಂಬOಧಿಯಾಗಿದ್ದು ಈತ ಮುಖ್ಯ ವೃತ್ತಿ ಕಳ್ಳತನ, ಹೈವೇ ರಾಬರಿ, ಕುರಿ ಕಳ್ಳತನ ಸೇರಿದಂತೆ 30ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
ಬOಧಿತ ಆರೋಪಿಗಳು ಹೊಸಕೋಟೆ ತಾಲ್ಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ ಮನೆಯ ಬೀಗ ಒಡೆದು ಸುಮಾರು 1೦ ಲಕ್ಷ ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿ ದೋಚಿ ಪರಾರಿಯಾಗಿದ್ದರು. ಆರೋಪಿಯ ಸುಳಿವು ಪತ್ತೆ ಹಚ್ಚಿ ಡಿವೈಎಸ್ಪಿ ಅಣ್ಣಾ ಸಾಹೇಬ್ ಪಾಟೀಲ್ ನೇತೃತ್ವದಲ್ಲಿ ತಿರುಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯ ಪಿಐ ಸುಂದರ್ ಹಾಗೂ ತಂಡದವರು ತಮಿಳುನಾಡಿನ ತಳಿಯ ದೇವದುರ್ಗ ಬೆಟ್ಟದಲ್ಲಿ ಅವಿತು ಕುಳಿತಿದ್ದ ಕಳ್ಳರ ಗ್ಯಾಂಗ್ ಪತ್ತೆ ಹಚ್ಚಿ ಸಿನಿಮೀಯ ರೀತಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿOದ 1೦ ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ಕಾರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳ ಪತ್ತೆಯ ತನಿಖೆಯಲ್ಲಿ ಪಿ.ಎಸ್.ಐ. ನಾರಾಯಣಸ್ವಾಮಿ, ಎ.ಎಸ್.ಐ. ವೆಂಕಟೇಶ್, ಸಿಬ್ಬಂದಿಗಳಾದ ಮಂಜುನಾಥ್, ನಟರಾಜ್, ಲಕ್ಷೀಕಾಂತ್, ದೇವೆಂದ್ರ ಬಡಿಗೇರ್, ಮುರ್ತೋಜ, ಅಕ್ಷಯ್ ಹಾಗೂ ಇತರರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.