‘ಪಟಾಕಿ’ ಅವಘಡಗಳಿಗೆ ಬೆಂಗಳೂರಿನ ಆಸ್ಪತ್ರೆಗಳು ಸಜ್ಜು, ದಿನದ 24 ಗಂಟೆಯೂ ಸೇವೆ.!

'ಪಟಾಕಿ' ಅವಘಡಗಳಿಗೆ ಬೆಂಗಳೂರಿನ ಆಸ್ಪತ್ರೆಗಳು ಸಜ್ಜು, ದಿನದ 24 ಗಂಟೆಯೂ ಸೇವೆ.!

ಬೆಂಗಳೂರು : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅವಘಡಗಳು ನಡೆಯುವ ಹಿನ್ನೆಲೆ ಬೆಂಗಳೂರಿನ ಆಸ್ಪತ್ರೆಗಳು ಸಜ್ಜಾಗಿದ್ದು, ದಿನದ 24 ಗಂಟೆಯೂ ಸೇವೆ ಒದಗಿಸಲಿದೆ.

ಪಟಾಕಿ ಸಿಡಿತದಿಂದ ಕಣ್ಣಿಗೆ ತೊಂದರೆಯಾದರೆ ಕೂಡಲೇ ಚಿಕಿತ್ಸೆ ನೀಡಲು ಮಿಂಟೋ ನೇತ್ರಾಲಯ ಹಾಗೂ ವಿಕ್ಟೋರಿಯಾ ಆಸ್ಪತ್ರೆ ಸಜ್ಜಾಗಿದೆ.

ಪುರುಷರಿಗೆ 10, ಮಹಿಳೆಯರಿಗೆ 10 , ಮಕ್ಕಳಿಗಾಗಿ 15 ಸೇರಿ ಒಟ್ಟು 35 ಬೆಡ್ ಗಳನ್ನು ಒಳರೋಗಿಗಳಿಗಾಗಿ ಮೀಸಲಿಡಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೂಡ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಕಣ್ಣಿಗೆ ಹಾನಿ ಮಾಡಿಕೊಂಡವರಿಗೆ ಹಾಗೂ ಸುಟ್ಟು ಗಾಯಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ .ಮಿಂಟೋ ಕಣ್ಣಿನ ಆಸ್ಪತ್ರೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದಿನದ 24 ಗಂಟೆಯೂ ಸೇವೆ ಒದಗಿಸುತ್ತಿದೆ.ಪಟಾಕಿಯಿಂದ ಗಾಯಗೊಂಡು ಬರುವವರಿಗೆ ಮಿಂಟೋ ಆಸ್ಪತ್ರೆ ಪ್ರತ್ಯೇಕ ವಾರ್ಡ್ ಸಿದ್ದಪಡಿಸಿದೆ. ಹಾಗೂ ಇದಕ್ಕೆ ಬೇಕಾದ ಐ ಡ್ರಾಪ್ ಸೇರಿ ವಿವಿಧ ಔಷಧಿಗಳನ್ನು ತರಿಸಿಕೊಂಡಿದೆ. ವೈದ್ಯರಿಗೆ ರಜೆ ತೆಗೆದುಕೊಳ್ಳದಂತೆ ಆಸ್ಪತ್ರೆ ಸೂಚನೆ ನೀಡಿದೆ.

Leave a Reply

Your email address will not be published. Required fields are marked *