ಕಮಕ್​-ಕಿಮಕ್​ ಅನ್ನೋ ಹಂಗಿಲ್ಲ : ದರ್ಶನ್​ ಆ್ಯಂಡ್​ ಗ್ಯಾಂಗ್​ಗೆ ಎಷ್ಟು ತಿಂಗಳು ಜೈಲು ಫಿಕ್ಸ್

ದರ್ಶನ್, ಪವಿತ್ರಾ ಬೇಲ್ ರದ್ದು ಮತ್ತೆ ಜೈಲು ಪಾಲು, ಸರ್ಕಾರಿ ವಕೀಲರು ಹೇಳಿದ್ದೇನು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿ ಆದೇಶ ಹೊರಡಿಸಿದೆ. ಜಾಮೀನು ರದ್ದಾದ ಹಿನ್ನೆಲೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಕೋರ್ಟ್​ಗೆ  ಸರೆಂಡರ್ ಆಗಬೇಕಿದೆ. ಡಿ ಗ್ಯಾಂಗ್​ಗೆ ಮತ್ತೆ ಎಷ್ಟು ತಿಂಗಳು ಜೈಲು ಫಿಕ್ಸ್​ ಗೊತ್ತಾ? 

ದರ್ಶನ್​​ಗೆ ಎಷ್ಟು ತಿಂಗಳು ಜೈಲು ಫಿಕ್ಸ್

ಜಾಮೀನು ಪಡೆದು ಹೊರ ಬಂದ ಡಿ ಗ್ಯಾಂಗ್ ಇದೀಗ ಮತ್ತೆ ಜೈಲು ಪಾಲಾಗಬೇಕಿದೆ. ಜಾಮೀನು ರದ್ದಾಗಿ ಮತ್ತೆ ಜೈಲು ಹಕ್ಕಿಯಾದವರು ಕನಿಷ್ಠ ಅಂದ್ರೆ 6 ತಿಂಗಳ ಜೈಲಿನಲ್ಲೇ ಕಾಲ ಕಳೆಯಬೇಕಿದೆ. ಈಗ ಬಂಧನ ಆಗಿ ಒಳಗೆ ಹೋದ್ರೆ ದರ್ಶನ್​ಗೆ 6 ತಿಂಗಳು ಜೈಲೇ ಫಿಕ್ಸ್ ಆಗಲಿದೆ ಎನ್ನಲಾಗ್ತಿದೆ.

ಆರು ತಿಂಗಳು ಜೈಲೇ ಗತಿ!

ಸುಪ್ರೀಂ ಆದೇಶವನ್ನ ಪ್ರಶ್ನಿಸಿ ತ್ರಿಸದಸ್ಯ ಪೀಠಕ್ಕೆ ಅರ್ಜಿ ಹಾಕಲು ಅವಕಾಶ ಇದೆ. ಆದ್ರೆ ತ್ರಿಸದಸ್ಯ ಪೀಠಕ್ಕೆ ಅರ್ಜಿ ಅಡ್ಮಿಟ್ ಆಗುವುದೇ ಕಡಿಮೆ ಎಂದು ವರದಿ ಆಗಿದ್ದು, ಹೀಗಾಗಿ ದರ್ಶನ್ ಆ್ಯಂಡ್ ಗ್ಯಾಂಗ್​ಗೆ ಬಹುತೇಕ ಆರು ತಿಂಗಳು ಜೈಲೇ ಗತಿಯಾಗಿದೆ. ಆರು ತಿಂಗಳ ಬಳಿಕ ಬದಲಾದ ಸನ್ನಿವೇಶ ಎಂದು ಜಾಮೀನಿಗೆ ನಟ ದರ್ಶನ್ ಅರ್ಜಿ ಹಾಕಬಹುದು.

14 ತಿಂಗಳ ಹಿಂದಿನ ರೇಣುಕಾಸ್ವಾಮಿ ಕೊಲೆ ಪ್ರಕರಣ ಶೀಘ್ರವೇ ಇತ್ಯರ್ಥವಾಗುವ ಸಾಧ್ಯತೆ ಇದೆ. ಕೊಲೆಯ ಗಂಭೀರತೆಯನ್ನು ಪರಿಗಣಿಸಿ, ಟ್ರಯಲ್ ಕೋರ್ಟ್​ನಲ್ಲಿ ಸಾಕ್ಷ್ಯಗಳ ವಿಚಾರಣೆಯು ಬಹಳ ತ್ವರಿತವಾಗಿ ನಡೆಯಬೇಕು ಎಂದು ಸುಪ್ರೀಂ  ನ್ಯಾಯಪೀಠವು ತನ್ನ ತೀರ್ಪಿನಲ್ಲಿ ತಿಳಿಸಿದೆ ಎನ್ನಲಾಗ್ತಿದೆ.

ನಟ ದರ್ಶನ್ಗೆ ಬಿಗ್ಶಾಕ್

ಡೆವಿಲ್ ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿ ಆಗಿದ್ದ ದರ್ಶನ್​ಗೆ ಈಗ ಬಿಗ್ ಶಾಕ್ ಆಗಿದ್ದು. ಮತ್ತೆ ದಾಸ ಜೈಲು ಪಾಲಾಗ್ತಿದ್ದಾರೆ. ದರ್ಶನ್ ಜೊತೆ ಪವಿತ್ರಾ ಗೌಡ, A6, ಜಗದೀಶ್ ಅಲಿಯಾಸ್ ಜಗ್ಗ, A7 ಅನುಕುಮಾರ್ ಅಲಿಯಾಸ್ ಅನು, ಎ14 ಪ್ರದೂಶ್, ಎ11 ನಾಗರಾಜು ಅಲಿಯಾಸ್ ನಾಗ, ಎ12 , ಲಕ್ಷ್ಮಣ್ ಜಾಮೀನು ಕೂಡ ರದ್ದಾಗಿದೆ.

ಹೈಕೋರ್ಟ್ ಆದೇಶದಲ್ಲಿ ದೋಷ

‘ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ಕೆಲ ಕಾರಣಗಳಿಂದ ಜಾಮೀನು ನೀಡಿದ್ದಾರೆ’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಜೈಲಲ್ಲಿ ಐಷಾರಾಮಿ ಜೀವನ ನಡೆಸಿದ ದರ್ಶನ್ ಬಗ್ಗೆಯೂ ಸುಪ್ರೀಂ ಕಿಡಿಕಾರಿದೆ. ಜೈಲು ಸೂಪರಿಂಟೆಂಡ್​ನನ್ನು ಸಸ್ಪೆಂಡ್ ಮಾಡಬೇಕಿತ್ತು’ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ. ಸುಪ್ರೀಂಕೋರ್ಟ್​​ನ ನ್ಯಾ.ಜೆ.ಬಿ.ಪರ್ದಿವಾಲಾ, ಆರ್.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠದಿಂದ ಈ ಆದೇಶ ಹೊರಬಿದ್ದಿದೆ.

Leave a Reply

Your email address will not be published. Required fields are marked *