ದರ್ಶನ್ ಅವರ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅವರು ಮತ್ತೆ ಬಂಧನಕ್ಕೆ ಒಳಗಾಗಲಿದ್ದಾರೆ. ಹೀಗಿರುವಾಗಲೇ ದರ್ಶನ್ ಸಿನಿಮಾಗಳ ಭವಿಷ್ಯ ಏನು ಎಂಬ ಪ್ರಶ್ನೆ ಮೂಡಿದೆ. ದರ್ಶನ್ ಮುಂದಿನ ಸಿನಿಮಾಗಳು ಯಾವವು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ದರ್ಶನ್ ಅವರು ‘ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ದರ್ಶನ್ ಅರೆಸ್ಟ್ಗೂ ಮೊದಲೇ ಈ ಸಿನಿಮಾದ ಶೂಟ್ ಶುರುವಾಗಿತ್ತು. ಆದರೆ, ಅವರು ಜೈಲು ಸೇರಿದ್ದರಿಂದ ಶೂಟ್ ನಿಂತಿತ್ತು. ಜಾಮೀನು ಪಡೆದು ಹೊರ ಬಂದ ಬೆನ್ನಲ್ಲೇ ಸಿನಿಮಾ ಶೂಟ್ ಪೂರ್ಣಗೊಳಿಸಿದ್ದರು.
ಇತ್ತೀಚೆಗೆ ವಿದೇಶದಲ್ಲಿ ‘ಡೆವಿಲ್’ ಸಿನಿಮಾದ ಶೂಟಿಂಗ್ ನಡೆದಿತ್ತು. ಈ ಬೆನ್ನಲ್ಲೇ ದರ್ಶನ್ ಅವರು ಬೆಂಗಳೂರಿಗೆ ಬಂದು ಡಬ್ಬಿಂಗ್ ಕೂಡ ಪೂರ್ಣಗೊಳಿಸಿದ್ದಾರೆ. ಹೀಗಾಗಿ, ಸಿನಿಮಾ ರಿಲೀಸ್ಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ಮುಂದಿನ ಚಿತ್ರಗಳಿಗೆ ಸಮಸ್ಯೆ ಆಗೋ ಸಾಧ್ಯತೆ ಇದೆ.
ದರ್ಶನ್ ಬಳಿ ಅಧಿಕೃತವಾಗಿ ಇರೋದು ‘ಡೆವಿಲ್’ ಸಿನಿಮಾ ಮಾತ್ರ. ಆದರೆ, ಅಧಿಕೃತವಾಗಿ ಘೋಷಣೆ ಆಗದ ಎರಡು ಸಿನಿಮಾಗಳು ಅವರ ಬಳಿ ಇದ್ದವು. ಅವು ಯಾವವು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. ಸದ್ಯ ಈ ಸಿನಿಮಾಗಳು ಅರ್ಧಕ್ಕೆ ನಿಲ್ಲಲಿದೆ.
ದರ್ಶನ್ ಅವರು ಶೈಲಜಾ ನಾಗ್ ಜೊತೆ ಒಂದು ಸಿನಿಮಾ ಮಾಡಬೇಕಿತ್ತು ಎನ್ನಲಾಗಿದೆ. ತರುಣ್ ಸುಧೀರ್ ಅವರು ಇದಕ್ಕೆ ನಿರ್ದೇಶನ ಮಾಡಬೇಕಿತ್ತು. ‘ವೀರ ಸಿಂಧೂರ ಲಕ್ಷ್ಮಣ’ ಎಂಬುದು ಚಿತ್ರದ ಟೈಟಲ್ ಎನ್ನಲಾಗಿದೆ.
ಇನ್ನು, ದರ್ಶನ್ ಅಳಿಯ ಚಂದು ಸಿನಿಮಾಗೆ ದರ್ಶನ್ ವಿಲನ್ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಕೂಡ ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಈಗ ದರ್ಶನ್ ಇಲ್ಲದೆ, ಈ ಸಿನಿಮಾ ಕೂಡ ಅರ್ಧಕ್ಕೆ ನಿಲ್ಲುವ ಸಾಧ್ಯತೆ ದಟ್ಟವಾಗಿದೆ.