ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ ಜೂನ್ 02 ‘ಕೃಷ್ಣಂ ಪ್ರಣಯ ಸಖಿ’ ಮೂಲಕ ಸೂಪರ್ ಹಿಟ್ ಕೊಟ್ಟಿರುವ ಗಣೇಶ್ ಅವರ ಕೈಯಲ್ಲಿ ಈಗ ಹಲವು ಸಿನಿಮಾಗಳು ಇವೆ. ಕೆಲವರ ಚಿತ್ರೀಕರಣ ಚಾಲ್ತಿಯಲ್ಲಿದೆ. ಗಣೇಶ್ ಅವರ ಕೈಯಲ್ಲಿ ಈಗ ಇರುವ ಸಿನಿಮಾಗಳು ಯಾವುವು? ಅದರ ನಿರ್ದೇಶಕರುಗಳು ಯಾರು?

ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ ಜೂನ್ 02 ‘ಕೃಷ್ಣಂ ಪ್ರಣಯ ಸಖಿ’ ಮೂಲಕ ಸೂಪರ್ ಹಿಟ್ ಕೊಟ್ಟಿರುವ ಗಣೇಶ್ ಅವರ ಕೈಯಲ್ಲಿ ಈಗ ಹಲವು ಸಿನಿಮಾಗಳು ಇವೆ. ಕೆಲವರ ಚಿತ್ರೀಕರಣ ಚಾಲ್ತಿಯಲ್ಲಿದೆ.
ಗಣೇಶ್ ಅವರು ಪ್ರಸ್ತುತ ‘ಯುವರ್ ಸಿನ್ಸಿಯರ್ಲಿ ರಾಮ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ವಿಶೇಷವೆಂದರೆ ಈ ಸಿನಿಮಾನಲ್ಲಿ ಗಣೇಶ್ ಅವರ ಜೊತೆಗೆ ಕನ್ನಡದ ‘ತ್ಯಾಗರಾಜ’ ರಮೇಶ್ ಅರವಿಂದ್ ಸಹ ಇದ್ದಾರೆ.
ಗಣೇಶ್ ಅವರು ‘ಪಿನಾಕ’ ಹೆಸರಿನ ಭಿನ್ನ ಕತೆಯುಳ್ಳ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಥ್ರಿಲ್ಲರ್ ಕತೆಯುಳ್ಳ ಸಿನಿಮಾ ಇದಾಗಿದ್ದು, ಈ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣ ಮತ್ತು ಬಿಡುಗಡೆ ಆಗಲಿದೆ.
‘ಭರಾಟೆ’, ‘ಬಹದ್ಧೂರ್’ ಅಂಥಹಾ ಆಕ್ಷನ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚೇತನ್ ಕುಮಾರ್, ಗಣೇಶ್ ಅವರಿಗಾಗಿ ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆ. ಮುದ್ದೇಗೌಡ ಈ ಸಿನಿಮಾದ ನಿರ್ಮಾಪಕರು. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ.
‘ಲವ್ ಇನ್ ಮಂಡ್ಯ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಅರಸು ಅಂತಾರೆ ಗಣೇಶ್ ಅವರಿಗಾಗಿ ‘ಜಾಂಗೊ ಕೃಷ್ಣಮೂರ್ತಿ’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಎಸ್ವಿ ರವಿ ಅವರು ಈ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ.
2024 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ನಿರ್ಮಾಣ ಮಾಡಿದ್ದ ತಂಡದ ಜೊತೆಗೆ ಇನ್ನೊಂದು ಸಿನಿಮಾವನ್ನು ಸಹ ಗಣೇಶ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ.
