Health Tips: ಪನೀರಿನಲ್ಲಿ ಹೆಚ್ಚುತ್ತಿರುವ ಕಲಬೆರಕೆಯ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ. ಪಿಷ್ಟ, ಡಿಟರ್ಜೆಂಟ್, ಫಾರ್ಮಾಲಿನ್ ಮತ್ತು ಹಾಲಿನ ಪುಡಿಯಂತಹ ಕಲಬೆರಕೆಗಳು ಆರೋಗ್ಯಕ್ಕೆ ಹಾನಿಕಾರಕ. ನಕಲಿ ಪನೀರ್ ಅನ್ನು ಪತ್ತೆಹಚ್ಚಲು ಹಿಸುಕು ಪರೀಕ್ಷೆ, ತುರ್ ದಾಲ್ ಪರೀಕ್ಷೆ, ಸೋಯಾಬೀನ್ ಪರೀಕ್ಷೆ ಮತ್ತು ರುಚಿ ಪರೀಕ್ಷೆಗಳನ್ನು ಮಾಡಿ. ಪ್ರಮಾಣಿತ ಬ್ರ್ಯಾಂಡ್ಗಳನ್ನು ಆರಿಸಿ ಮತ್ತು ಪ್ಯಾಕೇಜ್ನಲ್ಲಿನ ವಿವರಗಳನ್ನು ಪರಿಶೀಲಿಸುವಂತೆ ಸಲಹೆ ನೀಡುತ್ತದೆ.

ಪನೀರ್, ವಿಶೇಷವಾಗಿ ಸಸ್ಯಾಹಾರಿ ಭಾರತೀಯ ಮನೆಯಲ್ಲೊಂದು ಪ್ರಮುಖ ಪ್ರೋಟೀನ್ ಆಧಾರಿತ ಆಹಾರ. ಇದರ ರುಚಿ, ಪೌಷ್ಟಿಕತೆ ಹಾಗೂ ಬಗೆಬಗೆಯ ಭಕ್ಷ್ಯಗಳಿಗೆ ಇದಕ್ಕೆ ಅಪಾರ ಬೇಡಿಕೆ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಬೇಡಿಕೆಯ ಗಂಭೀರ ದುರಂತವೊಂದು ಕಂಡುಬರುತ್ತಿದೆ – ಅಂದರೆ ಪನೀರಿನ ಅತಿರೇಕದ ಕಲಬೆರಕೆ. ಲಾಭದಾಸೆಗಾಗಿ ಕೆಲ ತಯಾರಕರು ಹಾಗೂ ಪೂರೈಕೆದಾರರು ಪನೀರ್ನಲ್ಲಿ ಪ್ರೋಟೀನ್ ಅಂಶ ಕಡಿಮೆ ಮಾಡುವ ಮೂಲಕ ಕೃತಕ ದ್ರವ್ಯಗಳನ್ನು ಬೆರೆಸುತ್ತಿದ್ದಾರೆ. ಇದು ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತಿದೆ. ಉದಾಹರಣೆಗೆ, ಇತ್ತೀಚೆಗೆ ಚಂಡೀಗಢದಲ್ಲಿ ನಡೆದ ಪರಿಶೀಲನೆಯಲ್ಲಿ 450 ಕೆ.ಜಿ.ಕ್ಕೂ ಹೆಚ್ಚು ನಕಲಿ ಪನೀರ್ ವಶಪಡಿಸಿಕೊಳ್ಳಲಾಯಿತು.
ಸಾಮಾನ್ಯ ಕಲಬೆರಕೆಗಳು ಮತ್ತು ಅದರ ಪರಿಣಾಮಗಳು:
ಪಿಷ್ಟ (ಸ್ಟಾರ್ಚ್):
ಪನೀರ್ನಲ್ಲಿ ಮೈದಾ ಅಥವಾ ಆರಾರೂಟ್ ಸೇರಿಸಿ ತೂಕ ಹೆಚ್ಚಿಸಲಾಗುತ್ತದೆ. ಇದು ಪೌಷ್ಟಿಕಾಂಶವನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಗೆ ತೊಂದರೆಯನ್ನೂ ಉಂಟುಮಾಡಬಹುದು.
ಡಿಟರ್ಜೆಂಟ್:
ಕೆಲವು ಮೋಸಗಾರರು ಯೂರಿಯಾ ಅಥವಾ ಡಿಟರ್ಜೆಂಟ್ ಬೆರೆಸಿದ ಹಾಲಿನಿಂದ ಪನೀರ್ ತಯಾರಿಸುತ್ತಾರೆ. ಇದರ ಸೇವನೆಯು ವಾಂತಿ, ಹೊಟ್ಟೆನೋವು, ಹಾಗೂ ಅಂಗಾಂಗ ಹಾನಿಗೂ ಕಾರಣವಾಗಬಹುದು.
ಫಾರ್ಮಾಲಿನ್/ಸಂರಕ್ಷಕಗಳು:
shelf life ಹೆಚ್ಚಿಸಲು ಬಳಸುವ ಫಾರ್ಮಾಲಿನ್ನಂತಹ ರಾಸಾಯನಿಕಗಳು ಕ್ಯಾನ್ಸರ್, ಲಿವರ್ ಹಾನಿ, ತೀವ್ರ ಅಲರ್ಜಿಗಳಿಗೆ ಕಾರಣವಾಗಬಹುದು.
ಹಾಲಿನ ಪುಡಿ/ಘನವಸ್ತುಗಳು:
ತಾಜಾ ಹಾಲಿನ ಬದಲಾಗಿ ಪುಡಿ ಅಥವಾ condensed milk ಬಳಸಿ ತಯಾರಿಸಿದ ಪನೀರ್ನಲ್ಲಿ ಸ್ವಾಭಾವಿಕ ಗುಣಲಕ್ಷಣಗಳು ಕಡಿಮೆಯಾಗಿರುತ್ತವೆ.
ನಕಲಿ ಪನೀರ್ ಗುರುತಿಸುವ ಸರಳ ಪರೀಕ್ಷೆಗಳು:
• ಹಿಸುಕ ಪರೀಕ್ಷೆ ಬೆರಳಿನಿಂದ ಸಣ್ಣ ತುಂಡನ್ನು ಹಿಸುಕಿದಾಗ ಶುದ್ಧ ಪನೀರ್ ತನ್ನ ರೂಪವನ್ನು ಉಳಿಸಿಕೊಳ್ಳುತ್ತದೆ. ನಕಲಿ ಪನೀರ್ ಒತ್ತಿದಾಗ ಮುರಿದು ಬೀಳುತ್ತದೆ.
• ತುರ್ ದಾಲ್ ಪರೀಕ್ಷೆ: ಪನೀರ್ ತುಂಡನ್ನು ನೀರಿನಲ್ಲಿ ಕುದಿಸಿ, ತಣ್ಣಗಾದ ನಂತರ ತುರ್ ದಾಲ್ ಪುಡಿಯಲ್ಲಿ ಬೆರೆಸಿ. ಬಣ್ಣ ಕೆಂಪಾಗಿ ತಿರುಗಿದರೆ, ಅದು ಡಿಟರ್ಜೆಂಟ್ ಅಥವಾ ಯೂರಿಯಾದ ಸೂಚನೆಯಾಗಿರಬಹುದು.
• ಸೋಯಾಬೀನ್ ಪರೀಕ್ಷೆ: ಕುದಿಸಿ ತಣ್ಣಗಾದ ಪನೀರ್ಗೆ ಸೋಯಾಬೀನ್ ಪುಡಿ ಸೇರಿಸಿದಾಗ ಬಣ್ಣ ಬದಲಾದರೆ ಅಶುದ್ಧಿ ಇರುವ ಸಾಧ್ಯತೆ.
• ರುಚಿ ಪರೀಕ್ಷೆ: ತೆರೆದ ಕೌಂಟರ್ಗಳಿಂದ ಖರೀದಿಸುವಾಗ ಮಾದರಿಯನ್ನು ತಿನ್ನಿ ಅಥವಾ ಮುರಿದು ನೋಡಿ. ಗಂಧ, ರುಚಿ ನಕಲಿರಬಹುದು.
• ಗ್ರಾಹಕರಿಗೆ ಸಲಹೆ: ಪ್ರಮಾಣಿತ ಬ್ರ್ಯಾಂಡ್ಗಳೇ ಪನೀರ್ ಖರೀದಿಸುವುದು ಉತ್ತಮ. ಪ್ಯಾಕ್ ಮೇಲೆ ತಯಾರಿಸಿದ ದಿನಾಂಕ, ಫುಡ್ ಲೈಸೆನ್ಸ್ ಸಂಖ್ಯೆ, ಶುದ್ಧತೆಯ ಪ್ರಮಾಣಪತ್ರಗಳನ್ನು ಪರಿಶೀಲಿಸಿ.