ಗರ್ಭಾಶಯದ ಸೋಂಕನ್ನು ತಡೆಯುವುದು ಹೇಗೆ?

ಗರ್ಭಾಶಯದ ಸೋಂಕನ್ನು ತಡೆಯುವುದು ಹೇಗೆ?

ಗರ್ಭಾಶಯದಲ್ಲಿ ಕಂಡು ಬರುವ ಸೋಂಕು ಮಹಿಳೆಯರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಗರ್ಭಾಶಯದ ಸೋಂಕಿನ ಆರಂಭಿಕ ರೋಗ ಲಕ್ಷಣಗಳು ತಿಳಿದಿದ್ದರೆ ತುಂಬಾ ಒಳ್ಳೆಯದು, ಏಕೆಂದರೆ ಈ ರೋಗವನ್ನು ಸಮಯಕ್ಕೆ ಸರಿಯಾಗಿ ಗುರುತಿಸದಿದ್ದರೆ ಅದು ಗಂಭೀರ ಸ್ವರೂಪ ಪಡೆದುಕೊಳ್ಳಬಹುದು ಹಾಗೂ ಅನೇಕ ರೀತಿಯ ಸಮಸ್ಯೆಗಳಿಗೂ ಕಾರಣವಾಗಬಹುದು. ಗರ್ಭಾಶಯದಲ್ಲಿ ಸೋಂಕು ಉಂಟಾಗಲು ಅನೇಕ ಕಾರಣಗಳಿದೆ ಅದರಲ್ಲಿ ಬ್ಯಾಕ್ಟೀರಿಯ ಸೋಂಕು ಬ್ಯಾಕ್ಟೀರಿಯಾವು ಮಹಿಳೆಯ ಖಾಸಗಿ ಭಾಗದ ಮೂಲಕ ಗರ್ಭಾಶಯಕ್ಕೆ ಹೋದರೆ ಅದು ಗರ್ಭಾಶಯದಲ್ಲಿ ಸೋಂಕನ್ನು ಉಂಟುಮಾಡುತ್ತದೆ. ಈ ಸೋಂಕು ಮುಂದಿನ ದಿನಗಳಲ್ಲಿ ಅಪಾಯಕ್ಕೆ ಕಾರಣವಾಗಬಹುದು. ಆದ್ದರಿಂದ ನೀವು ಮೂತ್ರ ವಿಸರ್ಜಿಸುವಾಗ ನೋವು ಅಥವಾ ಸುಡುವ ಸಂವೇದನೆ,ಹೊಟ್ಟೆ ನೋವು, , ಮುಟ್ಟಿನ ಸಮಯದಲ್ಲಿ ಅಸಹನಿಯ ನೋವು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಸೋಂಕನ್ನು ತಡೆಗಟ್ಟಲು ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡಿ, ನಿಯಮಿತವಾಗಿ ತಪಾಸಣೆಯನ್ನು ಮಾಡಿಸಿಕೊಳ್ಳಿ, ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಿ,ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಸೋಂಕನ್ನು ತಡೆಯಬಹುದು.

Leave a Reply

Your email address will not be published. Required fields are marked *