ಹುಬ್ಬಳ್ಳಿ || ಪ್ರಯಾಣಿಕರಿಗೆ Good news: ಬೆಂಗಳೂರಿನಿಂದ Special bus ಕಾರ್ಯಾಚರಣೆ

ಹುಬ್ಬಳ್ಳಿ || ಪ್ರಯಾಣಿಕರಿಗೆ Good news: ಬೆಂಗಳೂರಿನಿಂದ Special bus ಕಾರ್ಯಾಚರಣೆ

ಹುಬ್ಬಳ್ಳಿ,: ಬಸವ ಜಯಂತಿ, ಕಾರ್ಮಿಕರ ದಿನಾಚರಣೆ ರಜೆ ಹಾಗೂ ವಾರಾಂತ್ಯದ ರಜೆಗಳ ಹಿನ್ನೆಲೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಈ ಕಾರಣದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವಿಶೇಷ ಬಸ್ಗಳ ಸೇವೆ ಕಲ್ಪಿಸಲು ಮುಂದಾಗಿದೆ.

ಈ ವಿಚಾರವಾಗಿ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, ಹೆಚ್ಚುವರಿ ಬಸ್ಗಳು ಏಪ್ರಿಲ್ 30 ಹಾಗೂ ಮೇ 01 ರಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್ನಿಂದ ಹೊರಡಲಿವೆ. ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಇತರ ಭಾಗಗಳಿಗೆ ಈ ವಿಶೇಷ ಬಸ್ಗಳು ಸಂಪರ್ಕ ಸಾಧಿಸಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಚಿಕ್ಕೋಡಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಜಿಲ್ಲೆಗಳು ಸೇರಿದಂತೆ ಇನ್ನಿತರ ಸ್ಥಳಗಳಿಗೆ ವಿಶೇಷ ಹೆಚ್ಚುವರಿ ಸಾರಿಗೆ ಬಸ್ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ. ನೀವು ಎಂದಿನಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) https://ksrtc.in/ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮುಂಗಡ ಆಸನ ಕಾಯ್ದಿರಿಸಬಹುದಾಗಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಟಿಕೆಟ್ ಬುಕ್ ಮಾಡುವುದಿದ್ದರೆ ನಿಮಗೆ ಟಿಕೆಟ್ ಒಟ್ಟು ಹಣದ ಮೇಲೆ ಶೇಕಡಾ 5ರಷ್ಟು ಹಣ ರಿಯಾಯಿತಿ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಬಸ್ ನಿಲ್ದಾಣ, ಇಲ್ಲವೇ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ. ಬಸವ ಜಯಂತಿ, ಪಾಲ್ಗೊಳ್ಳುವಿಕೆಗೆ ಜನ ಹಿಂದೇಟು: ಹೊರಟ್ಟಿ ಕಳವಳ ಭಾರತ ಸೇರಿದಂತೆ ವಿದೇಶಗಳಲ್ಲಿ ಶ್ರೀ ಬಸವೇಶ್ವರ ಜಯಂತಿಯನ್ನು ಭಾರೀ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು ನಮ್ಮ ರಾಜ್ಯದಲ್ಲಿ ಬಸವ ಜಯಂತಿ ಆಚರಣೆಗೆ ಸಾರ್ವಜನಿಕರು ಹಾಗೂ ಭಕ್ತರು ಬರಲು ಹಿಂದೇಟು ಮಾಡುತಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.

ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ರೋತ್ಸವದ ಅಂಗವಾಗಿ ಹುಬ್ಬಳ್ಳಿಯ ಮೂರುಸಾವಿರ ಮಠದ ಆವರಣದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳ ಸಮಾರಂಭದ ಮುಖ್ಯ ಅತಿಯಾಗಿ ಆಗಮಿಸಿ ಅವರು ಮಾತನಾಡಿದರು. ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳ ಮಾತನಾಡಿ, ನಾಡಿನ ಮಠಗಳಲ್ಲಿ ಒಂದಾದ ಮೂರು ಸಾವಿರ ಮಠದಲ್ಲಿ ಬಸವೇಶ್ವರ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ ಬಸವೇಶ್ವರರ ಅನುಯಾಯಿಗಳು ಭಾಗವಹಿಸಬೇಕು ಎಂದರು. ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷೆ ಗಿರಿಜಾ ಎಸ್. ಹೂಗಾರ ಮಾತನಾಡಿ, ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದು ಇಂತಹ ಕಾರ್ಯಕ್ರಮಗಳು ನಾಡಿನ ಜನತೆಗೆ ಶ್ರೀ ಬಸವೇಶ್ವರರ ಕಾಲಾವಧಿ ಶರಣರ ತತ್ವ ವಚನಗಳು ಇನ್ನಷ್ಟು ತಿಳಿಯವಂತಹ ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಬಸವಣ್ಣನವರ ವಚನಗಳ ಗಾಯನ ಸ್ಪರ್ಧೆ, ಕುಮಾರಿ. ದಿಯಾ ಆವಾರಿ ಅವರಿಂದ ಭರತ ನಾಟ್ಯ ಜೊತೆಗೆ ವಿದ್ವಾನ ಸುಜಯ ಶಾನಭಾಗ ಮತ್ತು ಕಲಾ ಸುಜಯ ತಂಡಗಳಿಂದ ವಚನಾಧಾರಿತ ನೃತ್ಯರೂಪಕಗಳು, ಸಂಗೀತ ಸಂಜೆ ಪ್ರಕಾಶ ಜಾಡರ ಅವರ ಹಾಸ್ಯ ಕಾರ್ಯಕ್ರಮಗಳು ಜನಮನ ಸೆಳೆದವು.

Leave a Reply

Your email address will not be published. Required fields are marked *