ಹುಬ್ಬಳ್ಳಿ||  Neha ಹ* ಪ್ರಕರಣದ ಸಾಕ್ಷಿ-ಪುರಾವೆಗಳ ಪರಾಮರ್ಶೆ ಆರಂಭ

ಹುಬ್ಬಳ್ಳಿ: ದೇಶಾದ್ಯಂತ ಸದ್ದು ಮಾಡಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸದೇ ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿಯೇ ನಡೆಸುವಂತೆ ಧಾರವಾಡ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 29ರಿಂದ ಸಾಕ್ಷಿ ಹಾಗೂ ಪುರಾವೆಗಳ ಪರಾಮರ್ಶೆ ಆರಂಭವಾಗಲಿದೆ. ಇದರಿಂದ ಈ ಪ್ರಕರಣಕ್ಕೆ ಇನ್ನಷ್ಟು ಹೊಸ ಆಯಾಮ ಸಿಗುವ ಸಾಧ್ಯತೆ ಇದೆ.

ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ಆರೋಪಿ ಫಯಾಜ್ ಧಾರವಾಡ ಹೈಕೋರ್ಟ್ಗೆ ಮಾನವಿ ಮಾಡಿದ್ದ. ಆರೋಪಿ ಪರ ವಕೀಲ ಝಡ್. ಆರ್. ಮುಲ್ಲಾ, ಫಯಾಜ್ ಪರ ವರ್ಗಾವಣೆ ಕುರಿತು ವಾದ ಮಂಡಿಸಿದ್ದರು.

ನೇಹಾ ಹಿರೇಮಠ ಹತ್ಯೆ ಪ್ರಕರಣ: ಧಾರವಾಡ ಹೈಕೋರ್ಟ್ ನಿರ್ದೇಶನವೇನು? ನೇಹಾ ಹಿರೇಮಠ ಹತ್ಯೆ ಪ್ರಕರಣ ವಿಚಾರಣೆಯನ್ನು ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಹತ್ಯೆ ನೋಡಿರುವ ಪ್ರಮುಖ 99 ಸಾಕ್ಷಿಗಳು ಹುಬ್ಬಳ್ಳಿಯಲ್ಲಿವೆ. ಕೃತ್ಯ ನಡೆದಿರುವುದು ಹುಬ್ಬಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ. ಹುಬ್ಬಳ್ಳಿ ವಕೀಲರಿಂದ ಫಯಾಜ್ ಪರ ವಕೀಲರಿಗೆ ಯಾವುದೇ ಬೆದರಿಕೆ ಇಲ್ಲ. ಇಲ್ಲಿಯೇ ವಿಚಾರಣೆ ಆರಂಭಿಸಬೇಕು ಎಂದು ನೇಹಾ ಹಿರೇಮಠ ಪಾಲಕರ ಪರ ರಾಘವೇಂದ್ರ ಎಸ್., ಎಂ.ಬಿ. ಹಿರೇಮಠ, ಪ್ರಕಾಶ ಅಂದಾನಿಮಠ ವಕೀಲರ ತಂಡ ವಾದ ಮಾಡಿತ್ತು. ವಾದ-ವಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿಯೇ ವಿಚಾರಣೆ ಆರಂಭಿಸುವಂತೆ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಅವರ ಮುಂದೆ ಸಾಕ್ಷಿ-ಪುರಾವೆಗಳ ಪರಾಮರ್ಶೆ ಆರಂಭವಾಗಲಿದೆ. ಬಿವಿಬಿ ಕಾಲೇಜ್ ಆವರಣದಲ್ಲಿ ಹತ್ಯೆ ನಡೆದು ಒಂದು ವರ್ಷ ಹತ್ತು ತಿಂಗಳು ಪೂರ್ಣಗೊಂಡಿದೆ. ಸಿಐಡಿ ಪರ ದೋಷಾರೋಪ ಪಟ್ಟಿ ಸಲ್ಲಿಕೆ ವೇಳೆ ಭಾಗಿಯಾಗಿದ್ದ ಸರ್ಕಾರಿ ಅಭಿಯೋಜಕ ಮಹೇಶ ವೈದ್ಯ ಅವರು ನೇಹಾ ಹಿರೇಮಠ ಪಾಲಕರ ಪರ ವಾದ ಮಂಡಿಸಲಿದ್ದು, ಆರೋಪಿ ಫಯಾಜ್ ಪರ ಹುಬ್ಬಳ್ಳಿಯ ಯಾವುದೇ ವಕೀಲರು ಕೇಸ್ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಆರೋಪಿ ಪಾಲಕರು ಸೂಚಿಸುವ ವಕೀಲರನ್ನು ಹುಬ್ಬಳ್ಳಿ ತಾಲೂಕು ಕಾನೂನು ಸೇವಾ ಸಮಿತಿ ನೇಮಕ ಮಾಡಲಿದೆ ಎಂದು ತಿಳಿದು ಬಂದಿದೆ.

ನೇಹಾ ಹಿರೇಮಠ ಹತ್ಯೆ ಪ್ರಕರಣ ದೇಶದಾದ್ಯಂತ ಸದ್ದು ಮಾಡಿದ್ದು ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುವುದು ಎಲ್ಲರ ಆಗ್ರಹವಾಗಿತ್ತು. ಹೀಗಾಗಿ ನ್ಯಾಯಾಲಯ ಈ ಪ್ರಕರಣದಲ್ಲಿ ಬಹಳ ಎಚ್ಚರಿಕೆಯಿಂದ ಸೂಚನೆಗಳನ್ನು ನೀಡುತ್ತಿದ್ದು, ಅಂತಿಮ ತೀರ್ಪು ಹೇಗೆ ಬರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.ಹುಬ್ಬಳ್ಳಿ: ದೇಶಾದ್ಯಂತ ಸದ್ದು ಮಾಡಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸದೇ ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿಯೇ ನಡೆಸುವಂತೆ ಧಾರವಾಡ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 29ರಿಂದ ಸಾಕ್ಷಿ ಹಾಗೂ ಪುರಾವೆಗಳ ಪರಾಮರ್ಶೆ ಆರಂಭವಾಗಲಿದೆ. ಇದರಿಂದ ಈ ಪ್ರಕರಣಕ್ಕೆ ಇನ್ನಷ್ಟು ಹೊಸ ಆಯಾಮ ಸಿಗುವ ಸಾಧ್ಯತೆ ಇದೆ.

ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ಆರೋಪಿ ಫಯಾಜ್ ಧಾರವಾಡ ಹೈಕೋರ್ಟ್ಗೆ ಮಾನವಿ ಮಾಡಿದ್ದ. ಆರೋಪಿ ಪರ ವಕೀಲ ಝಡ್. ಆರ್. ಮುಲ್ಲಾ, ಫಯಾಜ್ ಪರ ವರ್ಗಾವಣೆ ಕುರಿತು ವಾದ ಮಂಡಿಸಿದ್ದರು.

ನೇಹಾ ಹಿರೇಮಠ ಹತ್ಯೆ ಪ್ರಕರಣ: ಧಾರವಾಡ ಹೈಕೋರ್ಟ್ ನಿರ್ದೇಶನವೇನು? ನೇಹಾ ಹಿರೇಮಠ ಹತ್ಯೆ ಪ್ರಕರಣ ವಿಚಾರಣೆಯನ್ನು ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಹತ್ಯೆ ನೋಡಿರುವ ಪ್ರಮುಖ 99 ಸಾಕ್ಷಿಗಳು ಹುಬ್ಬಳ್ಳಿಯಲ್ಲಿವೆ. ಕೃತ್ಯ ನಡೆದಿರುವುದು ಹುಬ್ಬಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ. ಹುಬ್ಬಳ್ಳಿ ವಕೀಲರಿಂದ ಫಯಾಜ್ ಪರ ವಕೀಲರಿಗೆ ಯಾವುದೇ ಬೆದರಿಕೆ ಇಲ್ಲ. ಇಲ್ಲಿಯೇ ವಿಚಾರಣೆ ಆರಂಭಿಸಬೇಕು ಎಂದು ನೇಹಾ ಹಿರೇಮಠ ಪಾಲಕರ ಪರ ರಾಘವೇಂದ್ರ ಎಸ್., ಎಂ.ಬಿ. ಹಿರೇಮಠ, ಪ್ರಕಾಶ ಅಂದಾನಿಮಠ ವಕೀಲರ ತಂಡ ವಾದ ಮಾಡಿತ್ತು. ವಾದ-ವಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿಯೇ ವಿಚಾರಣೆ ಆರಂಭಿಸುವಂತೆ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಅವರ ಮುಂದೆ ಸಾಕ್ಷಿ-ಪುರಾವೆಗಳ ಪರಾಮರ್ಶೆ ಆರಂಭವಾಗಲಿದೆ. ಬಿವಿಬಿ ಕಾಲೇಜ್ ಆವರಣದಲ್ಲಿ ಹತ್ಯೆ ನಡೆದು ಒಂದು ವರ್ಷ ಹತ್ತು ತಿಂಗಳು ಪೂರ್ಣಗೊಂಡಿದೆ. ಸಿಐಡಿ ಪರ ದೋಷಾರೋಪ ಪಟ್ಟಿ ಸಲ್ಲಿಕೆ ವೇಳೆ ಭಾಗಿಯಾಗಿದ್ದ ಸರ್ಕಾರಿ ಅಭಿಯೋಜಕ ಮಹೇಶ ವೈದ್ಯ ಅವರು ನೇಹಾ ಹಿರೇಮಠ ಪಾಲಕರ ಪರ ವಾದ ಮಂಡಿಸಲಿದ್ದು, ಆರೋಪಿ ಫಯಾಜ್ ಪರ ಹುಬ್ಬಳ್ಳಿಯ ಯಾವುದೇ ವಕೀಲರು ಕೇಸ್ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಆರೋಪಿ ಪಾಲಕರು ಸೂಚಿಸುವ ವಕೀಲರನ್ನು ಹುಬ್ಬಳ್ಳಿ ತಾಲೂಕು ಕಾನೂನು ಸೇವಾ ಸಮಿತಿ ನೇಮಕ ಮಾಡಲಿದೆ ಎಂದು ತಿಳಿದು ಬಂದಿದೆ.

ನೇಹಾ ಹಿರೇಮಠ ಹತ್ಯೆ ಪ್ರಕರಣ ದೇಶದಾದ್ಯಂತ ಸದ್ದು ಮಾಡಿದ್ದು ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುವುದು ಎಲ್ಲರ ಆಗ್ರಹವಾಗಿತ್ತು. ಹೀಗಾಗಿ ನ್ಯಾಯಾಲಯ ಈ ಪ್ರಕರಣದಲ್ಲಿ ಬಹಳ ಎಚ್ಚರಿಕೆಯಿಂದ ಸೂಚನೆಗಳನ್ನು ನೀಡುತ್ತಿದ್ದು, ಅಂತಿಮ ತೀರ್ಪು ಹೇಗೆ ಬರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *