ಹುಬ್ಬಳ್ಳಿ: ಕರ್ನಾಟಕದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿರುವ ಕಿಮ್ಸ್ ಆಸ್ಪತ್ರೆಯಲ್ಲಿ ಇತ್ತೀಚಿನ ದಿನಗಳಲ್ಲಿ ಔಷಧಿಯ ಕೊರತೆ ಎದುರಾಗಿದೆ ಎನ್ನುವುದು ಸೇರಿದಂತೆ ವಿವಿಧ ಕಾರಣಗಳಿಗೆ ಚರ್ಚೆಯಾಗುತ್ತಿದೆ. ಮಂಗಳವಾರ ಹುಬ್ಬಳ್ಳಿಯಲ್ಲಿ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಸುದ್ದಿಗೋಷ್ಠಿ ನಡೆಸಿದ್ದು ವಿವಿಧ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ನಲ್ಲಿ ಔಷಧಿ ಕೊರತೆ ಎದುರಾಗಿದೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಯಾವುದೇ ಔಷಧಿ ಕೊರತೆ ಆಗದಂತೆ ನಿರ್ದೇಶನ ನೀಡಿದ್ದೇವೆ. ಬೆಳಗಾವಿಯಲ್ಲಿ ಈ ಬಗ್ಗೆ ಸಭೆ ಕೂಡ ಕರೆದಿದ್ದೇವೆ ಪ್ರತಿ ವರ್ಷ ಟೆಂಡರ್ ಕರೆಯಲು ಸ್ವತಂತ್ರ ಕೊಟ್ಟಿದ್ದೇವೆ. ಹೊರಗಡೆ ಬರೆದು ಕೊಡುವಂತದ್ದು ಇಲ್ಲವೇ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರು ಮಾತನಾಡಿದ್ದಾರೆ.

ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ಕೆಲವೊಂದು ಲೋಪ ದೋಷಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಪ್ರಾಕ್ಟೀಸ್ ನಾಲ್ಕು ಗಂಟೆಯ ಮೇಲೆಯೇ ಮಾಡಬೇಕು. ಬೆಳಿಗ್ಗೆ ಯಾವುದೇ ಕಾರಣಕ್ಕೂ ಪ್ರಾಕ್ಟೀಸ್ ಮಾಡುವಂತಿಲ್ಲ. ರೆಗ್ಯುಲರ್ ಡೈರೆಕ್ಟ್ ಕಾಲ್ ಫಾರಂ ಮಾಡ್ತೇವೆ. ಈಗ ಇಂಚಾರ್ಜ್ ಇರುವವರಿಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗಿದೆ ಎಂದಿರುವ ಅವರು, ಬಿಪಿಎಲ್ ಕಾರ್ಡ್ ಇರುವಂತವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಇದೆ ಎಂದಿದ್ದಾರೆ.
ಮುಂದುವರಿದು ರಾಯಚೂರಿನಲ್ಲೆ ಏಮ್ಸ್ ಆಗಬೇಕು ಅಂತ ನಾವು ಡಿಮ್ಯಾಂಡ್ ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ನಾನು ಮೂರು ಬಾರಿ ಹಾಗೂ ಎಲ್ಲ ಪಕ್ಷದವರನ್ನ ಕರೆದುಕೊಂಡು ಹೋಗಿದ್ದೆವು. ರಾಯಚೂರು ಹಿಂದೆ ಉಳಿದಿದೆ. ಇಲ್ಲಿ ಏಮ್ಸ್ ಸ್ಥಾಪನೆಗೆ ಸೂಕ್ತ ಜಾಗ ಅಲ್ಲ ಎಂದು ಕೇಂದ್ರ ಸರ್ಕಾರವು ಎಂದುಕೊಳ್ಳುವ ಅವಶ್ಯಕತೆ ಇಲ್ಲ. ಪ್ರತಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜುಗಳು ಆಗಬೇಕು ಅಂತ ಮನವಿ ಮಾಡಿದ್ದೆವು. ಕಳೆದ ಐದು ವರ್ಷದಲ್ಲಿ ಏನು ಕೆಲಸ ಆಗಿಲ್ಲ. ಈಗ ಮತ್ತೆ ನಾವು ಪ್ರಾರಂಭ ಮಾಡಿದ್ದೇವೆ. ಪ್ರತಿ ಮೆಡಿಕಲ್ ಕಾಲೇಜುಗಳಲ್ಲಿ ಸೂಪರ್ ಸ್ಪೆಷಲಿಟಿ ಮಾಡಬೇಕು. ದೇಶದಲ್ಲೇ ಎರಡನೇ ಅತೀ ಹೆಚ್ಚು ಮೆಡಿಕಲ್ ಕಾಲೇಜು ಇರುವುದೇ ಕರ್ನಾಟಕದಲ್ಲಿ ಎಂದು ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರವು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಿದೆ. ಕೂಡಲೇ ಇಲ್ಲಿ ಏಮ್ಸ್ ಸ್ಥಾಪನೆ ಮಾಡಿ ಈ ಭಾಗದ ಜನರ ಆರೋಗ್ಯ ಸೇವೆಗೆ ಸ್ಪಂದಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಮೆಡಿಕಲ್ ಕಾಲೇಜುಗಳಲ್ಲಿ ಸಿಬ್ಬಂದಿ ಕೊರತೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮ್ಮಲ್ಲಿ ಸಿಬ್ಬಂದಿ ಕೊರತೆ ಇಲ್ಲ. ನಮ್ಮ ಆಸ್ಪತ್ರೆಗಳು ಓವರ್ ಲೋಡ್ ಆಗಿವೆ. ಈ ಬಾರಿ 800 ಯುಜಿ ಸೀಟ್ ಹೆಚ್ಚು ಮಾಡಲು ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ರಿಸ್ಟ್ರಿಕ್ಟ್ ಹಾಕುತ್ತಿದ್ದಾರೆ. 750 ಪಿಜಿ ಸೀಟುಗಳನ್ನು ಘೋಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಹಿಂದಿನ ಸರ್ಕಾರ ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ಮುಂದಾಗಿದ್ದರು. ಅಲ್ಲಿ ಜಾಗದ ಕೊರತೆಯಿಂದ ಇದುವರೆಗೂ ಆಗಿಲ್ಲ. ಹುಬ್ಬಳ್ಳಿಯಲ್ಲಿ ಯಾವುದೇ ಕೊರತೆ ಇಲ್ಲ, ನಡೆಯುತ್ತಿದೆ ಎಂದಿದ್ದಾರೆ. ವೇತನ ವಿಳಂಬ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಹೇಳಿದ್ದೇನು ? ಇನ್ನು ಇದೇ ಸಂದರ್ಭದಲ್ಲಿ ಅವರು, ಕಿಮ್ಸ್ ಸಿಬ್ಬಂದಿಗೆ ವೇತನ ಆಗದ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ. ಮಾರ್ಚ್ ತಿಂಗಳ ಹಿನ್ನೆಲೆ ತಡ ಆಗಿರಬಹುದು, ನಾನು ಚೆಕ್ ಮಾಡ್ತೇನೆ. ಮುಂಚೆ ನೇರವಾಗಿ ಅಕೌಂಟ್ಗೆ ಬೀಳುತ್ತಿತ್ತು. ಈಗ ಎಚ್ಆರ್ಎಂಎಸ್ ಮೂಲಕ ಅಕೌಂಟ್ಗೆ ಹೋಗುತ್ತೆ. ತಾಂತ್ರಿಕವಾಗಿ ಸಮಸ್ಯೆ ಇದ್ದರೆ ಅದನ್ನು ಸರಿಪಡಿಸುತ್ತೇನೆ. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಕಡಿಮೆ ಆಗುತ್ತೆ. ಈ ವಿಚಾರವನ್ನು ನಾನು ಸಂಬಂಧಪಟ್ಟ ಅಧಿಕಾರಿಗಳಿಂದ ಸರಿಪಡಿಸುತ್ತೇನೆ ಎಂದು ಹೇಳಿದ್ದಾರೆ.
ಜನಿವಾರ ವಿಷಯ: ಜನಿವಾರ ಕತ್ತರಿಸಿದ ವಿಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮ ಸರ್ಕಾರ ಎಲ್ಲ ಧರ್ಮಗಳಿಗೂ ಮಾನ್ಯತೆ ಕೊಡುತ್ತೆ. ಈ ಘಟನೆ ಖಂಡನೀಯ ಹಾಗೂ ಕ್ರಮ ಕೈಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ. ಅದರಲ್ಲೇನೂ ಗೊಂದಲ ಇಲ್ಲ. ಇದು ಸರ್ಕಾರದ ನಿರ್ದೇಶನದ ಮೇರೆಗೆ ಮಾಡಿಲ್ಲ. ಅವರ ಮೇಲೆ ಕ್ರಮ ಆಗುತ್ತೆ. ಪರೀಕ್ಷೆ ಮಿಸ್ ಮಾಡಿಕೊಂಡ ವಿದ್ಯಾರ್ಥಿ ಬಗ್ಗೆ ಏನು ನಿರ್ಣಯ ಆಗಬೇಕು ಮಾಡಲಾಗುತ್ತೆ. ಒಂದೇ ಪರೀಕ್ಷೆ ಸಮಯದಲ್ಲಿ ಆಗಿರೋದು. ಅಧಿಕಾರಿಗಳಿಗೆ ಸಂಬಂಧ ಪಟ್ಟ ಸಚಿವರು ಸೂಚನೆ ಕೊಟ್ಟಿದ್ದಾರೆ. ಯಾರ ಭಾವನೆಗೂ ಧಕ್ಕೆ ಆಗದಂತೆ ನಮ್ಮ ವರ್ತನೆ ಇರಬೇಕು ಎಂದಿದ್ದಾರೆ. ಬೆಂಗಳೂರು ಕಮಾಂಡರ್ ಹಲ್ಲೆ ಪ್ರಕರಣ: ಇದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ನಾವು ಕನ್ನಡಿಗರಾಗಿ ನಮ್ಮ ಭಾಷೆ ಮೇಲೆ ಪ್ರೀತಿ ಇರುತ್ತೆ. ಆದರೂ ಕೂಡ ನಾವು ಪರಭಾಷ ಸಹಿಷ್ಣತೆಯರು. ಇಂತಹ ಘಟನೆಗಳು ಬೆಂಗಳೂರು, ಕರ್ನಾಟಕಕ್ಕೆ ಶೋಭೆ ತರೋದಿಲ್ಲ. ಬೇರೆ ಭಾಷಿಗರು ಸಹ ಇಲ್ಲಿ ಬಂದು ನೆಲೆಸಿದ್ದಾರೆ. ಬೇರೆಯವರಿಗೆ ದ್ವೇಷ ಮಾಡುವ ಕೆಲಸ ನಾವು ಮಾಡಲ್ಲ, ಅವರು ಮಾಡಬಾರದು ಎಂದಿದ್ದಾರೆ. ನಮ್ಮ ಸರ್ಕಾರ ಎಲ್ಲಾ ಧರ್ಮಗಳಿಗೂ ಮಾನ್ಯತೆ ಕೊಡುತ್ತೆ: ನಮ್ಮ ಸರ್ಕಾರ ಎಲ್ಲಾ ಧರ್ಮಗಳಿಗೂ ಮಾನ್ಯತೆ ಕೊಡುತ್ತೆ. ಜನಿವಾರ ಕತ್ತರಿಸಿದ ವಿಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಯ ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮ ಸರ್ಕಾರ ಎಲ್ಲಾ ಧರ್ಮಗಳಿಗೂ ಮಾನ್ಯತೆ ಕೊಡುತ್ತೆ. ಈ ಘಟನೆ ಖಂಡನೀಯ ಹಾಗೂ ಕ್ರಮ ಕೈಗೊಳ್ಳೋದಾಗಿ ಸಿಎಂ ಹೇಳಿದ್ದಾರೆ. ಅದರಲ್ಲೇನೂ ಗೊಂದಲ ಇಲ್ಲ. ಈ ಘಟನೆ ಸರ್ಕಾರದ ನಿರ್ದೇಶನದ ಮೇರೆಗೆ ಮಾಡಿದಂತಹದಲ್ಲ ಅವರ ಮೇಲೆ ಕ್ರಮ ಆಗುತ್ತೆ. ಪರೀಕ್ಷೆ ಮಿಸ್ ಮಾಡಿಕೊಂಡ ವಿದ್ಯಾರ್ಥಿ ಬಗ್ಗೆ ಏನು ನಿರ್ಣಯ ಆಗಬೇಕು ಮಾಡಲಾಗುತ್ತೆ ಎಂದು ಹೇಳಿದ್ದಾರೆ.