ಹುಬ್ಬಳ್ಳಿ-ಬೆಂಗಳೂರು ಪ್ರಯಾಣದ ಸಮಯ ಮತ್ತಷ್ಟು ತಗ್ಗಲಿದೆ: ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ

ಹುಬ್ಬಳ್ಳಿ :ತುಮಕೂರು-ಚಿತ್ರದುರ್ಗ-ದಾವಣಗೆರೆ ನೂತನ ರೈಲು ಮಾರ್ಗ ನಿರ್ಮಾಣ ಕಾಮಗಾರಿಯನ್ನು 2027ರ ಡಿಸೆಂಬರ್ವರೆಗೆ ಪೂರ್ಣ ಗೊಳಿಸಲಾಗುವುದು. ಇದರಿಂದ ಹುಬ್ಬಳ್ಳಿ-ಬೆಂಗಳೂರು ಪ್ರಯಾಣದ ಸಮಯ ಮತ್ತಷ್ಟು ತಗ್ಗಲಿದೆ ಎಂದು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಇಂಜಿನಿಯರ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಗಾವಿಯಿಂದ ಬೆಂಗಳೂರಿಗೆ ವಂದೇ ಭಾರತ್ ಸ್ವೀಪರ್ ಕೋಚ್ ರೈಲು ಸಂಚಾರ ಪ್ರಾರಂಭಿಸಲಾಗುವುದು. ಗದಗ-ವಾಡಿ ಮಾರ್ಗ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ರೈಲ್ವೆ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯುವ ಅವಕಾಶ ಒದಗಿಸಲಾಗಿದೆ ಎಂದರು.

2014ನೇ ಇಸ್ವಿಗಿಂತ ಮೊದಲು ರಾಜ್ಯದ ರೈಲ್ವೆಯ ನಿರ್ವಹಣೆಗೆ ಕೇಂದ್ರ ಸರ್ಕಾರ ಪ್ರತಿ ವರ್ಷ 835 ಕೋಟಿ ರೂ. ನೀಡುತ್ತಿತ್ತು. 2024ರ ಹೊತ್ತಿಗೆ ಈ ಅನುದಾನ ಪ್ರತಿ ವರ್ಷಕ್ಕೆ 7,550 ಕೋಟಿ ರೂ. ಏರಿಕೆಯಾಗಿದೆ. 2014ರ ಹೊತ್ತಿಗೆ ರಾಜ್ಯದಲ್ಲಿ 7,559 ಕಿಮೀ ದ್ವಿಪಥ ರೈಲು ಮಾರ್ಗ ಇತ್ತು. 2024ರ ವೇಳೆಗೆ 32 ಸಾವಿರ ಕಿಮೀ ದ್ವಿಪಥ ಮಾರ್ಗ ಇದೆ. ರಾಜ್ಯದಲ್ಲಿ ಶೇ. 93.7ರಷ್ಟು ಇಲೆಕ್ಟಿಫಿಕೇಶನ್ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಇರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ದೇಶದ 1,320 ರೈಲು ನಿಲ್ದಾಣಗಳನ್ನು 15 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುತ್ತಿದೆ. ರಾಜ್ಯದ 61 ನಿಲ್ದಾಣಗಳನ್ನು 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುತ್ತಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *