ಹುಬ್ಬಳ್ಳಿ || ಉತ್ತರ ಕರ್ನಾಟಕದಲ್ಲಿದ್ದಾರೆ ಮನಮೋಹನ್ ಸಿಂಗ್ ಸಂಬಂಧಿಕರು..

ಹುಬ್ಬಳ್ಳಿ || ಉತ್ತರ ಕರ್ನಾಟಕದಲ್ಲಿದ್ದಾರೆ ಮನಮೋಹನ್ ಸಿಂಗ್ ಸಂಬಂಧಿಕರು..

ಹುಬ್ಬಳ್ಳಿ: ದೇಶ ಕಂಡ ಅಪರೂಪದ ನಾಯಕ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಯೋಸಹಜ ಕಾಯಿಲೆಯಿಂದ ಗುರುವಾರ ರಾತ್ರಿ ನಿಧನರಾದರು. ಅಗಲಿದ ಮಾಜಿ ಪ್ರಧಾನಿಗೆ ಅನೇಕ ರಾಜಕೀಯ ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು. ಅವರ ಕೊಡುಗೆ ಕರ್ನಾಟಕಕ್ಕೂ ಇದೆ. ಇದೀಗ ಮನಮೋಹನ್ ಸಿಂಗ್ ಅವರ ಸಂಬಂಧಿಕರು ಉತ್ತರ ಕರ್ನಾಟಕದವರು ಎಂಬ ಮಾಹಿತಿ ಗೊತ್ತಾಗಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನ ಸುದ್ದಿ ತಿಳಿದು, ಅವರು ಕುಟುಂಬಸ್ಥರು ಮಾತ್ರವಲ್ಲದೇ, ಅವರ ಆಪ್ತರು, ಕಾಂಗ್ರೆಸ್ ನಾಯಕರು ಸೇರಿದಂತೆ ದೇಶದ ಅನೇಕರು ಕಂಬನಿ ಮಿಡಿದಿದ್ದಾರೆ. ಆರ್ಥಿಕ ಸುಧಾರಣೆಗೆ ಹೆಸರಾಗಿದ್ದ ಮನಮೋಹನ್ ಸಿಂಗ್ ಸಂಬಂಧಿಕರು ಹುಬ್ಬಳ್ಳಿಯಲ್ಲಿ ವಾಸವಿದ್ದಾರೆ. ಮಾಜಿ ಪ್ರಧಾನಿಯ ನಿಧನದ ಸುದ್ದಿ ತಿಳಿದು ಅವರ ಕುಟುಂಬಕ್ಕೆ ಭರಸಿಡಿಲು ಬಡಿದಂತಾಗಿದೆ. ಹುಬ್ಬಳ್ಳಿ ಸಂಬಂಧಿಕರ ಮನೆಯಲ್ಲಿ ನೀರವ ಮೌನ ಆವರಿಸಿದೆ.

ಹುಬ್ಬಳ್ಳಿಯಲ್ಲಿ ಮನಮೋಹನ ಸಿಂಗ್ ಪತ್ನಿ ಅವರ ಸಂಬಂಧಿಕರು ವಾಸವಿದ್ದಾರೆ. ಇಲ್ಲಿನ ವಿದ್ಯಾನಗರದಲ್ಲಿ ಮನಮೋಹನ್ ಸಿಂಗ್ ಪತ್ನಿಯ ಸಹೋದರಿ ಹರ್ಪ್ರೀತ್ ಕೌರ್ ಕುಟುಂಬದವರು ವಾಸವಿದ್ದಾರೆ. ಹುಬ್ಬಳ್ಳಿಯ ಹರ್ನಾಮ್ ಸಿಂಗ್ ಕೊಹ್ಲಿ ಎಂಬುವರ ಜೊತೆ ಹರ್ಪ್ರೀತ್ ಕೌರ್ ವಿವಾಹವಾಗಿದ್ದರು. ಈ ಕಾರಣದಿಂದ ಮನಮೋಹನ್ ಸಿಂಗ್ ಅವರಿಗೂ ಉತ್ತರ ಕರ್ನಾಟಕಕ್ಕೂ ವರ್ಷಗಳಿಂದಲೂ ನಂಟಿದೆ.

ಮಾಜಿ ಪ್ರಧಾನಿ ಸಂಬಂಧಿಕರ ಕಾರ್ಯವೇನು? ಮಾಜಿ ಪ್ರಧಾನಿ ಸಂಬಂಧಿಕರಾಗಿರುವ ಹರ್ನಾಮ್ ಸಿಂಗ್ ಕೊಹ್ಲಿ ಅವರು ನಗರದಲ್ಲಿ ಆಟೋಮೊಬೈಲ್ ಶಾಪ್ ನಡೆಸುತ್ತಿದ್ದಾರೆ. ಸದ್ಯ ಹರ್ಪ್ರೀತ್ ಕುಟುಂಬಸ್ಥರಿಗೆ ಸಂಬಂಧಿಸಿದ ದಾಬಾವೊಂದು ಹುಬ್ಬಳ್ಳಿಯ ಹೊರವಲಯದಲ್ಲಿದೆ. ಮನಮೋಹನ ಸಿಂಗ್ ಪತ್ನಿಯ ಸಹೋದರಿ ಹರ್ಪ್ರೀತ್ ಕೌರ್ 14 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಈಗ ಕೌರ್ ಪತಿ ಹರ್ನಾಮ್ ಸಿಂಗ್ ಕೊಹ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಈ ಕುಟುಂಬಸ್ಥರಿಗೆ ಮನಮೋಹನ್ ಸಿಂಗ್ ಅವರ ನಿಧನ ಸುದ್ದಿ ತಿಳಿದು ಈ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ಹುಬ್ಬಳ್ಳಿಯ ಮನೆ ಮಂದಿ ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *