ಹುಳಿಯಾರು : ಸಮೀಪದ ಕಂಪನಹಳ್ಳಿ ತೋಟದ ಮನೆ ಹತ್ತಿರ ಚಿರತೆ ದಾಳಿ ಮಾಡಿ ಮೂರು ಕರುಗಳನ್ನು ಬಲಿ ಪಡೆದಿದೆ. ಕರಡಿ ಸಾಬರ ಪಾಳ್ಯದ ಬುಡೆನ್ ಎಂಬ ರೈತ ಬುಧವಾರ ಮುಂಜಾನೆ ಸುಮಾರು ೫.೩೦ ರ ಸಮಯದಲ್ಲಿ ಕರುಗಳನ್ನು ತೋಟದಲ್ಲಿ ಮೇಯಲು ಬಿಟ್ಟು ಹಾಲು ಕರೆಯಲು ಹೋದಾಗ ಚಿರತೆ ದಾಳಿ ನಡೆದಿದೆ. ಅಲ್ಲಿಯ ಗ್ರಾಮಸ್ಥರು ಇಲ್ಲಿ ತುಂಬಾ ದಿನಗಳಿಂದ ಚಿರತೆ ಓಡಾಡುತ್ತಿದೆ. ಅರಣ್ಯ ಇಲಾಖೆಯವರಿಗೆ ತಿಳಿಸಿದರೂ ಸಹ ಅವರು ಚಿರತೆ ಹಿಡಿಯಲು ನಿರ್ಲಕ್ಷö್ಯ ವಹಿಸಿರುವುದೆ ಇದಕ್ಕೆ ಕಾರಣ ಎಂದು ದೂರಿದ್ದಾರೆ.
ಹುಳಿಯಾರು || ಚಿರತೆ ದಾಳಿ ಇಂದ 3 ಕರುಗಳು ಬಲಿ
